ದ.ಕ | ʼಒಡೆಯೋಣ ನಮ್ಮ ನಡುವಿನ ಗೋಡೆಯನ್ನʼ ಎಂಬ ಧ್ಯೇಯದೊಂದಿಗೆ ಡಿ.21ರಿಂದ ರಥಯಾತ್ರೆ

Date:

41 ವರ್ಷದ ಮುಂಚೆ ಎಸ್‌ಐಒ( ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ) ಆರಂಭಿಸುವಾಗ ಉತ್ತಮ ಸಮಾಜಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಸಮಾಜದ ಆಸ್ತಿಯಾಗಿ ಸಿದ್ಧಪಡಿಸುವ ದೃಢ ಪ್ರತಿಜ್ಞೆ ತೆಗೆದುಕೊಂಡಿತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಐಒ ನಿಮ್ಮ ಮುಂದೆ ಬರುತ್ತಿರುವ ನಮ್ಮ ಈ ರಥ ತನ್ನ ಈ ಪ್ರತಿಜ್ಞೆಯನ್ನು ಪೂರೈಸಲು ಹಗಲಿರುಳು ಶ್ರಮಿಸುತ್ತಿದೆ ಎಂದು ಎಸ್‌ಐಒ ಕಾರ್ಯಕರ್ತರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾರ್ಯಕರ್ತರು, “ಎಸ್‌ಐಒ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಜೀವನವನ್ನು ಪುನರ್ ನಿರ್ಮಾಣ ಮಾಡಲು ಸಹಕರಿಸುವ ಮೂಲಕ ದುಷ್ಟರ ವಿರುದ್ಧ ಹೋರಾಡಲು, ಸಮಾಜದಲ್ಲಿ ನೈತಿಕತೆ ಮತ್ತು ವಿಚಾರದ ಜ್ಯೋತಿ ಬೆಳಗಲು ನಿಜವಾದ ಜ್ಞಾನ ಮತ್ತು ಜಾಗೃತಿಯನ್ನು ನೀಡಲು ಬದ್ಧವಾಗಿದ್ದು ಅದಕ್ಕಾಗಿ ನಿರಂತರ ಶ್ರಮಿಸುತ್ತಿದೆ” ಎಂದರು.

“ದ್ವೇಷ ಭಾಷಣ ಎಂಬುದು ಪ್ರಸ್ತುತ ಭಾರತದಲ್ಲಿ ನಿತ್ಯದ ಸಾಮಾನ್ಯ ವಿಷಯವಾಗಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ದ್ವೇಷದ ಅಪರಾಧಗಳು ವರದಿಯಾಗುತ್ತವೆ. ಕೆಲವು ವರ್ಷಗಳಿಂದ ನಮ್ಮ ರಾಷ್ಟ್ರದ ಜಾತ್ಯತೀತ ಸ್ವರೂಪವು ಭಾರೀ ಪ್ರಮಾಣದಲ್ಲಿ ಕೋಮುವಾದದೊಂದಿಗೆ ರಾಜಿಯಾಗಿದೆ. ಜನರ ಮನಸ್ಸಿನಲ್ಲಿ ಕೋಮುವಿಷ ತುಂಬುಲಾಗುತ್ತಿದೆ. ನಮ್ಮ ರಾಜ್ಯದ ಜಾತ್ಯಾತೀತ ಪರಂಪರೆಗೆ ಸಮಸ್ಯೆಯಾಗಿರುವ ರಾಜ್ಯದ ಜಾತ್ಯತೀತ ವಿರೋಧಿ ಶಕ್ತಿಗಳು, ನೈತಿಕ ಪೊಲೀಸ್‌ಗಿರಿ, ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ದ್ವೇಷವನ್ನು ಹರಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ” ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ “ಒಡೆಯೋಣ, ನಮ್ಮ ನಡುವಿನ ಗೋಡೆಯನ್ನು” ಎಂಬ ಧ್ಯೇಯವಾಕ್ಯದೊಂದಿಗೆ ಸಂಚರಿಸುವ ರಥಯಾತ್ರೆಯನ್ನು ನಾವು ಹಮ್ಮಿಕೊಂಡಿದ್ದೇವೆ. ಈ ರಥಯಾತ್ರೆಯು ಡಿಸೆಂಬರ್ 21 ರಿಂದ 24ರವರೆಗೆ ಸಂಚರಿಸಲಿದೆ. ರಥಯಾತ್ರೆಯಲ್ಲಿ ಈ ವಿಷಯದ ಮೇಲೆ ಬೀದಿ ನಾಟಕಗಳನ್ನು ಪ್ರದರ್ಶಿಸಲಿದೆ. ವಿಭಜಕ ಶಕ್ತಿಗಳು ಏನೇ ಮಾಡಲಿ, ತುದಿಗಾಲಲ್ಲಿ ನಿಂತರು ನೈತಿಕ ಮೌಲ್ಯಗಳು ಉತ್ತುಂಗದಲ್ಲಿರುವ ಜಾತ್ಯಾತೀತ ಸಮಾಜವಾಗಿ ನಾವು ಯಾವಾಗಲೂ ಜಯಿಸುತ್ತೇವೆಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತೇವೆ” ಎಂದು ತಿಳಿಸಿದರು.

“ದ್ವೇಷದ ವಿನಾಶಕಾರಿ ಪರಿಣಾಮವು ದುಃಖಕರವಾಗಿದೆ. ಅದರಲ್ಲಿ ಹೊಸತೇನಿಲ್ಲ. ಅದರ ಪ್ರಮಾಣ ಮತ್ತು ಪ್ರಭಾವವು ಇಂದು ಸಾಮಾಜಿಕ ಮಾಧ್ಯಮದಿಂದ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಎಂದರೆ ಜಾಗತಿಕ ಮಟ್ಟದಲ್ಲಿ ದ್ವೇಷ ಭಾಷಣದ ವಾಕ್ಚಾತುರ್ಯ ವಿಭಜಕ ಸಿದ್ದಾಂತಗಳನ್ನು ಹರಡುವ ಒಂದು ಸಾಮಾನ್ಯ ವಿಧಾನವಾಗಿದೆ. ಇದನ್ನು ನಿಯಂತ್ರಿಸದೆ ಬಿಟ್ಟರೆ ದ್ವೇಷದ ಭಾಷಣವು ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಹಾನಿಯುಂಟು ಮಾಡುತ್ತದೆ. ಏಕೆಂದರೆ ಇದು ಸಂಘರ್ಷಗಳನ್ನು ಮತ್ತು ವ್ಯಾಪಕ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಪ್ರೋತ್ಸಾಹ ನೀಡುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಹಿಂದೂ ಜಾಗರಣಾ ವೇದಿಕೆಯ ಕಾರ್ಯಕ್ರಮ ರದ್ದಿಗೆ ಆಗ್ರಹ

“ದ್ವೇಷದ ಭಾಷಣವು ಸಹಿಷ್ಣುತೆ ವೈವಿಧ್ಯತೆ ಮತ್ತು ಮಾನವ ಹಕ್ಕುಗಳ ನಿಯಮಗಳ ಮತ್ತು ತತ್ವಗಳ ಮೂಲತತ್ವದ ಮೌಲ್ಯಗಳ ನಿರಾಕರಣೆಯಾಗಿದೆ. ಇದು ತಾರತಮ್ಯ ರಾಷ್ಟ್ರದ ಶಕ್ತಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ ನಾವು ನಮ್ಮ ವೈವಿಧ್ಯಗಳನ್ನು ಅಳವಡಿಸಿಕೊಳ್ಳಬೇಕು. ರಾಷ್ಟ್ರದ ಅಭಿವೃದ್ಧಿಗೆ ಕೆಲಸ ಮಾಡುವ ಒಂದು ಘಟಕವಾಗಿ ಕಾರ್ಯನಿರ್ವಹಿಸಬೇಕು. ಶಾಂತಿ ಮತ್ತು ಸಮೃದ್ಧಿಯ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಶ್ರಮಿಸೋಣ. ಆದ್ದರಿಂದ ನಾವು ನಮ್ಮ ಈ ಉತ್ತಮ ಸಂದೇಶವನ್ನು ಮತ್ತು ನಮ್ಮ ಈ ಕಾರ್ಯಕ್ರಮವನ್ನು ಪ್ರಸಾರ ಪಡಿಸುತ್ತಿದ್ದೇವೆ” ಎಂದು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಗಾಂಧಿ ಜಯಂತಿ ಆಚರಣೆ

ಭಾರತಕ್ಕೆ ಸ್ವಾತಂತ್ರ್ಯಕ್ಕೆ ತಂದುಕೊಟ್ಟ ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ತತ್ವಗಳು ಇಂದಿಗೂ...

ಮಂಡ್ಯ | ಬೀದಿ ನಾಯಿಗಳ ದಾಳಿಗೆ ಬಡರೈತನ ಮೇಕೆಗಳು ಬಲಿ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಬೀದಿ...

ಬೀದರ್ | ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ; ಮೂಲಸೌಕರ್ಯ ಒದಗಿಸಲು ಅಲೆಮಾರಿಗಳ ಆಗ್ರಹ

ಅಲೆಮಾರಿ ಸಮುದಾಯದ ವಸತಿ ವಂಚಿತ ಕುಟುಂಬಗಳಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು...

ಮೈಸೂರು | ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆರು ಮಂದಿ ಗಣ್ಯ ಸಾಧಕರು ಆಯ್ಕೆ

ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಅದಮ್ಯ ರಂಗಶಾಲೆ ಜಂಟಿಯಾಗಿ ಕೊಡಮಾಡುವ 'ನಾಡಪ್ರಭು...