ಛತ್ ಪೂಜೆ: ಬಂಗಾಳದ ರಾಂಪುರಹಾಟ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಸೇರಿದ ಏಕೈಕ ಮಾಂಸದಂಗಡಿ ಬಂದ್

Date:

ಈ ಬಾರಿಯ ಛತ್ ಪೂಜೆಯು ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ರಾಂಪುರಹಾಟ್ ಪಟ್ಟಣದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವಿನ ರಾಜಕೀಯ ಜಟಾಪಟಿಗೆ ವೇದಿಕೆಯಾಗಿದೆ. ಈ ರಾಜಕೀಯ ಪೈಪೋಟಿಗೆ ಪಟ್ಟಣದ ಓಣಿಯೊಂದರಲ್ಲಿದ್ದ ಮುಸ್ಲಿಂ ವ್ಯಕ್ತಿಗೆ ಸೇರಿದ ಏಕೈಕ ಮಾಂಸದ ಅಂಗಡಿಯೊಂದು ಬಲಿಯಾಗಿ, ಬಲವಂತವಾಗಿ ಬಾಗಿಲು ಮುಚ್ಚುವಂತಾಗಿದೆ.

- Advertisement -

​ಜಾರ್ಖಂಡ್ ಗಡಿಗೆ ಹೊಂದಿಕೊಂಡಿರುವ ಹಾಗೂ ಕೋಲ್ಕತ್ತಾದಿಂದ ಸುಮಾರು 220 ಕಿ.ಮೀ ದೂರದಲ್ಲಿರುವ ರಾಂಪುರಹಾಟ್‌ನಲ್ಲಿ ಶೇಕಡ 3 ರಿಂದ 4 ರಷ್ಟು ಹಿಂದಿ ಮಾತನಾಡುವ ಜನರಿದ್ದಾರೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ವಿಜೃಂಭಣೆಯಿಂದ ಆಚರಿಸುವ ಸೂರ್ಯನ ಆರಾಧನೆಯ ‘ಛತ್ ಪೂಜೆ’ ಈ ಭಾಗದ ಜನರ ಬಹುದೊಡ್ಡ ಹಬ್ಬವಾಗಿದೆ. ಹಬ್ಬದ ನೆಪದಲ್ಲಿ ಬಿಜೆಪಿ ನಾಯಕರು ಸ್ಥಳೀಯ ನಿವಾಸಿಗಳ ಓಲೈಕೆಗೆ ಮುಂದಾಗಿದ್ದರೆ, ಟಿಎಂಸಿ ಆಡಳಿತದ ಪುರಸಭೆಯೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

​ಇದರ ಬೆನ್ನಲ್ಲೇ, ನವೆಂಬರ್ 13 ರಂದು ಟಿಎಂಸಿ ಆಡಳಿತದ ರಾಂಪುರಹಾಟ್ ಪುರಸಭೆಯ ಅಧ್ಯಕ್ಷ ಸೌಮೆನ್ ಭಕತ್ ಅವರು ‘ಸೂರಜ್ ಮೀಟ್ ಶಾಪ್’ ಮಾಲೀಕ ನೂರ್ ಅಲಿ ಶೇಖ್ ಅವರಿಗೆ ಅಧಿಕೃತ ನೋಟಿಸ್ (ಜ್ಞಾಪನಾ ಪತ್ರ ಸಂಖ್ಯೆ 960 RM/DEV/PWD) ಜಾರಿ ಮಾಡಿದ್ದಾರೆ. ಛತ್ ಪೂಜೆಯ ಪ್ರಯುಕ್ತ ನವೆಂಬರ್ 15 ಮತ್ತು 16 ರಂದು ಎರಡು ದಿನಗಳ ಕಾಲ ಅಂಗಡಿಯನ್ನು ಮುಚ್ಚುವಂತೆ ಹಾಗೂ ಉಳಿದ ದಿನಗಳಲ್ಲಿ ಮಾಂಸ ಮಾರಾಟ ಮಾಡುವಾಗ ಪ್ರಾಣಿಗಳನ್ನು ಕೆಂಪು ಬಟ್ಟೆಯಿಂದ ಮುಚ್ಚಿಡುವಂತೆ ಈ ನೋಟಿಸ್‌ನಲ್ಲಿ ಆದೇಶಿಸಲಾಗಿತ್ತು.

​ಅಚ್ಚರಿಯ ಸಂಗತಿಯೆಂದರೆ, ಪಟ್ಟಣದಾದ್ಯಂತ ಕುರಿ/ಮೇಕೆ ಮಾಂಸ ಮಾರಾಟ ಮಾಡುವ 40ಕ್ಕೂ ಹೆಚ್ಚು ಅಂಗಡಿಗಳಿದ್ದರೂ, ಕೇವಲ ಈ ಒಂದು ಅಂಗಡಿಗೆ ಮಾತ್ರ ನೋಟಿಸ್ ನೀಡಿ ಮುಚ್ಚಿಸಲಾಗಿದೆ.

​ಕಾರಣ ನೀಡಿದ ಪುರಸಭೆ, ಅಳಲು ತೋಡಿಕೊಂಡ ವ್ಯಾಪಾರಿ:

“ಛತ್ ನಮ್ಮ ಬಿಹಾರಿ ಸಮುದಾಯದ ಅತಿ ದೊಡ್ಡ ಹಬ್ಬವಾಗಿದೆ. ಭಕ್ತರು ನದೀ ತೀರಕ್ಕೆ (ಘಾಟ್) ಹೋಗುವಾಗ ಈ ಅಂಗಡಿಯ ಮುಂದೆಯೇ ಹಾದುಹೋಗಬೇಕು. ರಸ್ತೆಯಲ್ಲಿ ರಕ್ತ ಚೆಲ್ಲಿರುತ್ತದೆ ಹಾಗೂ ಮಾಂಸವನ್ನು ಹೊರಗೆ ನೇತುಹಾಕಲಾಗಿರುತ್ತದೆ. ಇದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಚಾರವಾದ್ದರಿಂದ, ಎರಡು ದಿನಗಳ ಕಾಲ ಅಂಗಡಿಯನ್ನು ಮುಚ್ಚುವಂತೆ ನೋಟಿಸ್ ನೀಡಿದ್ದೇವೆ” ಎಂದು ಪುರಸಭೆ ಅಧ್ಯಕ್ಷ ಸೌಮೆನ್ ಭಕತ್ ಸಮರ್ಥಿಸಿಕೊಂಡಿದ್ದಾರೆ.

​ಆದರೆ, ಭಕ್ತರು ಪಟ್ಟಣದಾದ್ಯಂತ ಬರುವುದರಿಂದ ಒಂದು ಸಣ್ಣ ಓಣಿಯಲ್ಲಿರುವ ಒಂದೇ ಅಂಗಡಿಯನ್ನು ಏಕೆ ಗುರಿಯಾಗಿಸಲಾಯಿತು ಎಂಬ ಪ್ರಶ್ನೆ ಎದ್ದಿದೆ.

​ಮೂರು ದಶಕಗಳಿಂದ ಯಾವುದೇ ಸಮಸ್ಯೆಯಿಲ್ಲದೆ ವ್ಯಾಪಾರ ಮಾಡುತ್ತಿದ್ದೆ ಎಂದು ಹೇಳುವ ಅಂಗಡಿ ಮಾಲೀಕ ನೂರ್ ಅಲಿ ಶೇಖ್, “ಪಟ್ಟಣದ ಮುಖ್ಯ ರಸ್ತೆಗಳಲ್ಲಿಯೇ ಇಂತಹ ಸುಮಾರು 30 ಮಾಂಸದ ಅಂಗಡಿಗಳಿವೆ. ಆದರೆ ಯಾರಿಗೂ ನೋಟಿಸ್ ನೀಡಿಲ್ಲ. ನನಗೆ ಮಾತ್ರ ಪೊಲೀಸ್ ಠಾಣೆಯ ಮೂಲಕ ನೋಟಿಸ್ ನೀಡಲಾಗಿದೆ. ನನಗೆ ಆಶ್ಚರ್ಯವಾಗಿದೆ, ಆದರೆ ನಾನೇನು ಮಾಡಲು ಸಾಧ್ಯ? ಬಲವಂತವಾಗಿ ಅಂಗಡಿ ಮುಚ್ಚಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

​ಬೀದಿಗೆ ಬಂದ ರಾಜಕೀಯ:

ಭಾನುವಾರ ಮಧ್ಯಾಹ್ನ ‘ಸೂರಜ್ ಮೀಟ್ ಶಾಪ್’ ಮುಚ್ಚಲಾಗಿತ್ತು. ಅದರ ಸಮೀಪದಲ್ಲಿಯೇ ಗೋಸಂರಕ್ಷಣಾ ಕಾರ್ಯಕರ್ತರು ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಹೊಸ ಭಿತ್ತಿಪತ್ರಗಳನ್ನು ಅಂಟಿಸಿದ್ದರು. ಸ್ವಲ್ಪ ಮುಂದಿರುವ ಗಾಂಧಿ ಪಾರ್ಕ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಛತ್ ಪೂಜೆಯ ಪ್ರಚಾರ ಕಾರ್ಯದಲ್ಲಿ ತೊಡಗಿತ್ತು.

​ಈ ನಡುವೆ ರಾಂಪುರಹಾಟ್‌ನ ಬಿಜೆಪಿ ಶಾಸಕ ಧ್ರುವ ಸಾಹ, ಅಂಗಡಿ ಮುಚ್ಚಿಸಿದ್ದರ ಶ್ರೇಯಸ್ಸನ್ನು ತಾವೇ ಪಡೆದುಕೊಂಡಿದ್ದಾರೆ. “ಆಡಳಿತ ಮಂಡಳಿಯೊಂದಿಗೆ ಮಾತನಾಡಿ ನಾನೇ ಆ ಅಂಗಡಿಯನ್ನು ಮುಚ್ಚಿಸಿದ್ದೇನೆ. ಭಕ್ತರು ಹಬ್ಬದ ದಿನ ಪ್ರಾಣಿಗಳ ಮಾಂಸವನ್ನು ನೋಡುವುದು ಸರಿಯಲ್ಲ. ಟಿಎಂಸಿ ಅಧ್ಯಕ್ಷರು ಏನೂ ಮಾಡಿಲ್ಲ, ಬಹುಶಃ ಅವರು ನಮ್ಮ ಪಕ್ಷಕ್ಕೆ ಸೇರಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರಬೇಕು!” ಎಂದು ವ್ಯಂಗ್ಯವಾಡಿದ್ದಾರೆ.

​ಇತರೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ:

ಒಂದೆಡೆ ಸೂರಜ್ ಮೀಟ್ ಶಾಪ್ ಮುಚ್ಚಿದ್ದರೆ, ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ‘ಭಟ್ಟಾಚಾರ್ಯ ಮೀಟ್ ಶಾಪ್’ ಎದುರೇ ಛತ್ ಮೆರವಣಿಗೆಗಳು ಸಾಗುತ್ತಿದ್ದರೂ ಅಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಮತ್ತೊಬ್ಬ ಮಾಂಸದ ವ್ಯಾಪಾರಿ ಹೇಮಂತ ಮಂಡಲ್ ಅವರ ಅಂಗಡಿಯೂ ಎಂದಿನಂತೆ ತೆರೆದಿತ್ತು. “ನನಗೆ ಯಾರೂ ನೋಟಿಸ್ ನೀಡಿಲ್ಲ. ಸಂಜೆ ಹಲವು ಛತ್ ಮೆರವಣಿಗೆಗಳು ಇದೇ ದಾರಿಯಲ್ಲಿ ಸಾಗುತ್ತವೆ. ಆದರೆ ಹಬ್ಬಕ್ಕೂ ಮಾಂಸದಂಗಡಿಗೂ ಏನು ಸಂಬಂಧ?” ಎಂದು ಮಂಡಲ್ ಪ್ರಶ್ನಿಸಿದ್ದಾರೆ.

​ಪಕ್ಕದ ಮತ್ತೋರ್ವ ವ್ಯಾಪಾರಿ ಕಲಾಂ ಶೇಖ್ ಪ್ರತಿಕ್ರಿಯಿಸಿ, “ಪರಿಸ್ಥಿತಿ ಸರಿಯಿಲ್ಲ. ಬಡ ಮುಸ್ಲಿಮರು ವ್ಯಾಪಾರ ಮಾಡಿ ಬದುಕುವುದು ಕಷ್ಟವಾಗುತ್ತಿದೆ. ಒಂದು ನಿರ್ದಿಷ್ಟ ಸಮುದಾಯವನ್ನು ಪದೇ ಪದೇ ಗುರಿಯಾಗಿಸಿ ಕಿರುಕುಳ ನೀಡಿದರೆ ಜನರ ನೈತಿಕ ಸ್ಥೈರ್ಯ ಕುಗ್ಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

​ರಾಜ್ಯ ಕಾಂಗ್ರೆಸ್ ಮುಖಂಡ ಮಿಲ್ಟನ್ ರಶೀದ್ ಪ್ರತಿಕ್ರಿಯಿಸಿ, “ಟಿಎಂಸಿ ಈಗ ಅನಾಥವಾಗಿದೆ. ಹಾಗಾಗಿ ರಾಜ್ಯದಲ್ಲಿ ಬಲಗೊಳ್ಳುತ್ತಿರುವ ಬಿಜೆಪಿಯನ್ನು ಒಲಿಸಿಕೊಳ್ಳಲು ಅದರ ನಾಯಕರು ಇಂತಹ ಯತ್ನಗಳಿಗೆ ಕೈಹಾಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಪುರಸಭೆಯ ಸಿಪಿಎಂ ವಿರೋಧ ಪಕ್ಷದ ನಾಯಕ ಸಂಜೀಬ್ ಮಲ್ಲಿಕ್, “ರಾಂಪುರಹಾಟ್ ಒಂದು ಪ್ರಗತಿಪರ ಪಟ್ಟಣ. ಆದರೆ ಛತ್ ಪೂಜೆಯ ಹೆಸರಿನಲ್ಲಿ ಕೇವಲ ಒಂದು ಮಾಂಸದಂಗಡಿಯನ್ನು ಮುಚ್ಚಿಸಲು ಶಾಸಕರು ಮತ್ತು ಪುರಸಭೆ ಅಧ್ಯಕ್ಷರು ಪೈಪೋಟಿ ನಡೆಸುತ್ತಿರುವುದು ವಿಪರ್ಯಾಸ” ಎಂದಿದ್ದಾರೆ.

​ರಾಂಪುರಹಾಟ್ ಮಾತ್ರವಲ್ಲದೆ ಹೌರಾ, ಉತ್ತರ 24 ಪರಗಣ, ಪೂರ್ವ ಬರ್ಧಮಾನ್ ಮತ್ತು ಜಲಪೈಗುರಿಯ ಮಾಲ್‌ಬಜಾರ್‌ನಲ್ಲೂ ಛತ್ ಪೂಜೆಯ ನೆಪದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಿಸಿದ ಘಟನೆಗಳು ವರದಿಯಾಗಿವೆ. ಇದರ ಬೆನ್ನಲ್ಲೇ, ಮುಸ್ಲಿಮರಿಗೆ ಜಮೀನು ಮಾರಾಟ ಮಾಡಬಾರದು ಎಂಬ ವಿವಾದಾತ್ಮಕ ಭಿತ್ತಿಪತ್ರಗಳು ಸಹ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Aurad Ground Report | ನೀರಿನ ತ್ರಾಸ ಭಾಳ ಅದಾ, ಟ್ಯಾಂಕರ್‌ ನೀರು ಭ್ಯಾಡಾ, ನಮ್ಗ್ ನಳ ನೀರೇ ಬೇಕ್!

"ಎಂಟು ದಿನಕ್ಕೊಮ್ಮೆ ನೀರಿನ ಟ್ಯಾಂಕರ್‌ ಬರ್ತದೆ, ಅವರು ಮನೆಗೊಂದು ಬ್ಯಾರಲ್‌ ನೀರಷ್ಟೇ...

ರಸ್ತೆ ಅಪಘಾತ | ರಾಜ್ಯದಲ್ಲಿ ವರ್ಷಕ್ಕೆ 11 ಸಾವಿರಕ್ಕೂ ಹೆಚ್ಚು ಬಲಿ; ಪ್ರತಿದಿನ ಸರಾಸರಿ 31 ಮಂದಿ ಸಾವು!

ರಾಜ್ಯದಲ್ಲಿ ರಸ್ತೆ ಅಪಘಾತಗಳು ಆತಂಕಕಾರಿ ಮಟ್ಟ ತಲುಪಿದ್ದು, ಪ್ರತಿ ವರ್ಷ 11...

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ...