ಮಂಗಳೂರು | ಜೂ.1ರಿಂದ ಎರಡು ತಿಂಗಳ ಕಾಲ ಮೀನುಗಾರಿಕೆಗೆ ರಜೆ

Date:

ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಆ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಪಶ್ಚಿಮ ಕರಾವಳಿ ತೀರದಲ್ಲಿ ಜೂ.1ರಿಂದ ಜು.31ರವರೆಗೆ ಮೀನುಗಾರಿಕೆಗೆ ಸಾಂಪ್ರದಾಯಿಕ ರಜೆ ಸಾರಲಾಗಿದೆ.

- Advertisement -

ಈ ಅವಧಿಯಲ್ಲಿ ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿದರೆ ಮೀನುಗಳ ಸಂತಾನೋತ್ಪತ್ತಿಗೆ ತೊಂದರೆ ಯಾಗಲಿದೆ. ಹಾಗಾಗಿ ದ.ಕ. ಜಿಲ್ಲೆಯಲ್ಲಿ 61 ದಿನಗಳ ಕಾಲ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಮಂಗಳೂರಿನ ಬಂದರ್ ದಕ್ಕೆಯಲ್ಲಿ ಮೀನುಗಾರಿಕೆಯ ಬಹುತೇಕ ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಯಾಂತ್ರೀಕೃತ ಮೀನುಗಾರಿಕೆಗೆ ರಜೆಯಿದ್ದರೂ ನಾಡದೋಣಿಗಳು ಎಂದಿನಂತೆ ಮೀನುಗಾರಿಕೆ ಮಾಡಬಹುದಾಗಿದೆ. ಅಂದರೆ ನಾಡದೋಣಿ-ಬಲೆಯೊಂದಿಗೆ ಕಡಲಿಗೆ ಇಳಿಯುವ ಮೀನುಗಾರರು 10 ಅಶ್ವಶಕ್ತಿಯ ಇಂಜಿನ್ ಬಳಸಿ ಸಮುದ್ರದ ಬದಿ, ನದಿ ತೀರದಲ್ಲಿ ಮೀನುಗಾರಿಕೆ ನಡೆಸಲಿದ್ದಾರೆ.

ಕಳೆದ ಬಾರಿ ಮಂಗಳೂರು ದಕ್ಕೆಯಲ್ಲಿ ಮೀನು ಉತ್ಪಾದನೆಯು ತೀವ್ರ ಕುಸಿತ ಕಂಡಿದ್ದರೆ ಈ ಬಾರಿ ತುಸು ಏರಿಕೆ ಕಂಡಿರುವುದು ಗಮನಾರ್ಹ. ಅಂದಹಾಗೆ ಇತ್ತೀಚಿನ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಪೆಟ್ರೋಲ್-ಡೀಸೆಲ್ ಪೂರೈಕೆ ವ್ಯತ್ಯಯ, ದರ ಏರಿಕೆ ಇತ್ಯಾದಿಯು ಮೀನಿನ ದರದ ಮೇಲೆ ಒಂದಷ್ಟು ಪರಿಣಾಮ ಬೀರಿತ್ತು. ಆದರೂ ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮೀನುಗಾರಿಕೆ ನಡೆದಿರುವುದು ವಿಶೇಷ.

2023-24ನೇ ಸಾಲಿನ ಮಾರ್ಚ್‌ನಲ್ಲಿ 6792 ಮೆಟ್ರಿಕ್ ಟನ್, 2024-25ರಲ್ಲಿ 6890 ಮೆಟ್ರಿಕ್ ಟನ್ ಮೀನು ಲಭ್ಯವಾಗಿದ್ದರೆ ಈ ಬಾರಿ ಅಂದರೆ 2025-26ರಲ್ಲಿ 19,890 ಮೆಟ್ರಿಕ್ ಟನ್ ಮೀನು ಲಭ್ಯವಾಗಿದೆ. 2023-24ನೇ ಸಾಲಿನಲ್ಲಿ 3,976 ಕೋ.ರೂ. ಮೌಲ್ಯದ 2,39,758 ಟನ್ ಮೀನು ಲಭಿಸಿದ್ದರೆ, 2024-25ನೇ ಸಾಲಿನಲ್ಲಿ 2,220 ಕೋ.ರೂ. ಮೌಲ್ಯದ 1,71,795 ಟನ್ ಮೀನು ಸಿಕ್ಕಿತ್ತು. 2025-26ನೇ ಸಾಲಿನಲ್ಲಿ 3,856 ಕೋ.ರೂ. ಮೌಲ್ಯದ 1,97,381 ಟನ್ ಮೀನು ಲಭ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೀಗ ಒಂದನೇ ಮತ್ತು ಮೂರನೇ ಹಂತದ ಮೀನುಗಾರಿಕಾ ದಕ್ಕೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ಮೀನುಗಾರಿಕಾ ಚಟುವಟಿಕೆ ಮುಗಿಸಿ ಮರಳುತ್ತಿರುವ ಬೋಟ್‌ಗಳಿಗೆ ಲಂಗರು ಹಾಕು ವುದು ಸವಾಲಾಗಿ ಪರಿಣಮಿಸಿದೆ. ಅಭಿವೃದ್ಧಿ ಕಾಮಗಾರಿಯಿಂದಾಗಿ 1400 ಮೀ. ಉದ್ದದ ದಕ್ಕೆಯಲ್ಲಿ ಇದೀಗ ಕೇವಲ 250 ಮೀಟರ್ ಮಾತ್ರ ಬಳಕೆಗೆ ಸಿಗುತ್ತಿದೆ.

ಅಂದಹಾಗೆ ಮೀನುಗಾರಿಕಾ ರಜೆಯ ವೇಳೆ ಬೋಟ್ ನಿರ್ವಹಣೆ, ರಿಪೇರಿ ಇತ್ಯಾದಿ ಕೆಲಸಗಳನ್ನು ಮಾಡಲಾಗು ತ್ತಿದೆ. ತಣ್ಣೀರುಬಾವಿ ಬೆಂಗ್ರೆ ಹಾಗೂ ಸುಲ್ತಾನ್ ಬತ್ತೇರಿ ಮಧ್ಯೆ ಸೇತುವೆ ನಿರ್ಮಾಣಕ್ಕಾಗಿ ಒಡ್ಡು ಹಾಕಿದ ಕಾರಣ ಬೋಟ್‌ಗಳನ್ನು ಅಲ್ಲಿರುವ ದೋಣಿ ನಿರ್ವಹಣ ಘಟಕ ಹಾಗೂ ನಿಲುಗಡೆ ಪ್ರದೇಶಕ್ಕೆ ಸಾಗಿಸುವುದು ಕಷ್ಟವಾಗಿದೆ ಎಂದು ಮೀನುಗಾರರು ಕಳವಳ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಚುನಾವಣೆ ಕರ್ತವ್ಯ ಜವಾಬ್ದಾರಿಯಿಂದ ನಿರ್ವಹಿಸಿ : ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

"ಕರ್ನಾಟಕ ಪಶ್ಚಿಮ ಪಧವಿದರ ದೈವಾರ್ಷಿಕ ಚುನಾವಣಾ2026 ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ,...

ಹುಬ್ಬಳ್ಳಿ | ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸಲ್ಲ: ದಿಂಗಾಲೇಶ್ವರ ಶ್ರೀಗಳ ಸಂಕಲ್ಪ

ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ...

ಹಾವೇರಿ | ಬಂಕಾಪುರ್ ಟೋಲ್ ಬಂದ್: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಭರವಸೆ ನೀಡದಿದ್ದರೆ ಉಗ್ರ ಹೋರಾಟ

ಕಬ್ಬಿಗೆ ಬೆಂಬಲ‌ ಬೆಲೆ‌ ಘೋಷಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಬ್ಬು...

ತುಳು ಕಲಿಕೆಗೆ ಎರಡು ಪುಸ್ತಕ ಬಿಡುಗಡೆ ಮಾಡಿದ ಸಚಿವ ಶಿವರಾಜ ತಂಗಡಗಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ತುಳು ಭಾಷಾ ಕಲಿಕೆಯ ಎರಡು...