ಉಡುಪಿ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR-2026) ಕಾರ್ಯ ಚುರುಕುಗೊಂಡಿದ್ದು, ಜುಲೈ 2ರ ವೇಳೆಗೆ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳ ಪೈಕಿ 1,07,614 ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸುವ ಮೂಲಕ ಶೇ.10.12ರಷ್ಟು ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಶನ್ ಫಾರ್ಮ್‌ಗಳನ್ನು ವಿತರಿಸುತ್ತಿದ್ದು, ಪ್ರತಿ BLO ಸರಾಸರಿ 97 ಫಾರ್ಮ್‌ಗಳನ್ನು ವಿತರಿಸಿದ್ದಾರೆ. ಇದುವರೆಗೆ 8,703 ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, 8,167 ಫಾರ್ಮ್‌ಗಳನ್ನು ಅಧಿಕೃತವಾಗಿ ಪರಿಶೀಲಿಸಲಾಗಿದೆ.
ಇದಲ್ಲದೆ, 4,354 ಫಾರ್ಮ್‌ಗಳನ್ನು ‘ಸ್ವಯಂ’ (Self) ಹಾಗೂ 3,789 ಫಾರ್ಮ್‌ಗಳನ್ನು ‘ಸಂತತಿ’ (Progeny) ಎಂದು ಮ್ಯಾಪಿಂಗ್ ಮಾಡಲಾಗಿದ್ದು, 535 ಮತದಾರರು ತಮ್ಮ ಫಾರ್ಮ್‌ಗಳನ್ನು ನೇರವಾಗಿ ಆನ್‌ಲೈನ್ ಮೂಲಕ ಸಲ್ಲಿಸಿದ್ದಾರೆ.
ಜುಲೈ 29ರವರೆಗೆ ಮನೆ ಮನೆಗೆ ಭೇಟಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ನಡೆಯಲಿದ್ದು, ಮತದಾರರ ಪಟ್ಟಿಯ ನಿಖರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು BLOಗಳು ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಇದೇ ವೇಳೆ, SIR-2026 ಕಾರ್ಯದಲ್ಲಿ ತೊಡಗಿರುವ BLOಗಳ ಅನುಕೂಲಕ್ಕಾಗಿ ಸರ್ಕಾರವು ‘ಕರ್ತವ್ಯ’ ಮೊಬೈಲ್ ಆ್ಯಪ್‌ನಲ್ಲಿ On Other Duty (OOD) ಸೌಲಭ್ಯವನ್ನು ಕಲ್ಪಿಸಿದೆ. ಕ್ಷೇತ್ರ ಕಾರ್ಯದಲ್ಲಿರುವ ಅಧಿಕಾರಿಗಳು ಹಾಜರಾತಿ ದಾಖಲಿಸಲು ಕಚೇರಿಗೆ ತೆರಳುವ ಅವಶ್ಯಕತೆ ಇಲ್ಲದೆ, ಆ್ಯಪ್‌ನ OOD ಆಯ್ಕೆಯ ಮೂಲಕ ಹಾಜರಾತಿ ದಾಖಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ 2,11,200 ಎನ್ಯುಮರೇಷನ್ ಫಾರ್ಮ್‌ಗಳ ವಿತರಣೆ






