ದಾಂಡೇಲಿ | ಆಶ್ರಯ ನಿವೇಶನ ಅಕ್ರಮವಾಗಿ ನೋಂದಣಿ ಆರೋಪ: ಕ್ರಮಕ್ಕೆ ಆಗ್ರಹಿಸಿ ದೂರು

Date:

ದಾಂಡೇಲಿ: ಜೋಯಿಡಾ ತಾಲೂಕಿನ ವೆಂಕಟೇಶ @ ಸ್ವಾಮಿ ಸುಬ್ಬಯ್ಯ ಭೂಪಾನಿ ಅವರಿಗೆ ಸರ್ಕಾರದ ವತಿಯಿಂದ ಮಂಜೂರಾಗಿದ್ದ ಆಶ್ರಯ ನಿವೇಶನವನ್ನು, ಪ್ರಭಾವ ಬಳಸಿ ಸುಳ್ಳು ದಾಖಲೆಗಳ ಮೂಲಕ ಬೇರೆಯವರ ಹೆಸರಿಗೆ ವರ್ಗಾಯಿಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪತ್ರಕರ್ತ ಬೊಮ್ಮಯ್ಯ ನಾರಾಯಣ ನಾಯಕ @ ಬಿ.ಎನ್. ವಾರಸೆ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

ಪ್ರಕರಣದ ವಿವರ: ದೂರುದಾರರು ಜೋಯಿಡಾ ತಾಲೂಕಿನವರಾಗಿದ್ದು, ಅವರ ಎಲ್ಲಾ ದಾಖಲೆಗಳು ಜೋಯಿಡಾ ವ್ಯಾಪ್ತಿಗೆ ಸೇರಿರುತ್ತವೆ. ಅವರಿಗೆ ದಾಂಡೇಲಿಯಲ್ಲಿ ಯಾವುದೇ ವಾಸಸ್ಥಳವಿಲ್ಲದಿದ್ದರೂ, ಅಲ್ಲಿ ಎರಡು ಕಟ್ಟಡಗಳು ಹಾಗೂ ಬಾಡಿಗೆಗೆ ನೀಡಿರುವ ಒಂದು ಹಾಲಿನ ಅಂಗಡಿ ಇರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜುವೆಲರ್ಸ್ ಅಂಗಡಿಯಲ್ಲಿ 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಕಾಲು ಚೈನ್ ಕಳವು

​ದಾಂಡೇಲಿ ನಗರಸಭೆ ವ್ಯಾಪ್ತಿಯ ಟೌನ್‌ಶಿಪ್ ಹದ್ದಿನಲ್ಲಿರುವ ಸಿ.ಟಿ.ಎಸ್. ನಂಬರ್: 3122 ರ ಆಶ್ರಯ ನಿವೇಶನವು ಪಿರ್ಯಾದಿಯವರ ಹೆಸರಿನಲ್ಲಿದೆ ಎಂದು ತಿಳಿಸಿದ್ದಾರೆ. ಬೊಮ್ಮಯ್ಯ ನಾರಾಯಣ ನಾಯಕ ಅವರು ತಮ್ಮ ಪ್ರಭಾವವನ್ನು ಬಳಸಿ, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಬ್‌ ರಜಿಸ್ಟ್ರಾರ್ ಮೇಲೆ ಒತ್ತಡ ತಂದು ಪಿರ್ಯಾದಿಯವರ ಹೆಸರಿನಲ್ಲಿ ಅರ್ಜಿ ಹಾಕಿ 10,000 ರೂಪಾಯಿಗಳನ್ನು ಭರಣ ಮಾಡಿರುತ್ತಾರೆ.

​ನಂತರ ವೆಂಕಟೇಶ ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ, ನೋಂದಣಿಯಾದ ಕೇವಲ 4 ದಿನಗಳಲ್ಲಿ 1,95,000 ರೂಪಾಯಿಗೆ ಮಾರಾಟ ಮಾಡಿರುವುದಾಗಿ ಕ್ರಯಪತ್ರದಲ್ಲಿ ನಮೂದಿಸಲಾಗಿದೆ. ಜಲಜಾಕ್ಷಿ ಹಾಗೂ ಬೊಮ್ಮಯ್ಯ ನಾರಾಯಣ ನಾಯಕ ಅವರು ಪಿರ್ಯಾದಿಯವರ ಬಳಿ ಬಂದು, ತಾವೂ ಒಂದು ಸೈಟ್ ಖರೀದಿ ಮಾಡುತ್ತಿರುವುದಾಗಿ ನಂಬಿಸಿ,

ಸಾಕ್ಷಿಯಾಗಿ ಸಹಿ ಮಾಡಿ ಎಂದು ಹಳಿಯಾಳದ ಸಬ್‌ ರಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪಿರ್ಯಾದಿಯವರ ಹೆಸರಿನಲ್ಲಿದ್ದ ನಿವೇಶನವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

​ಹೀಗೆ ವ್ಯವಸ್ಥಿತವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರದ ನಿವೇಶನವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ಮೂಲಕ ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಈ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನುರೀತ್ಯ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಬೆದರಿಕೆ? ₹42.97 ಲಕ್ಷ ವಂಚನೆ ಆರೋಪ; ಇಬ್ಬರ ಬಂಧನ

ಮದುವೆ ಪ್ರಸ್ತಾಪದ ವಿಚಾರವಾಗಿ ಪರಿಚಯವಾಗಿದ್ದ ಮಹಿಳೆಯೊಬ್ಬರು ಹಾಗೂ ಇತರರು ಸೇರಿ ಬೆದರಿಕೆ...

ಉಡುಪಿ | ಪಕ್ಷ ಸಂಘಟನೆ ಜತೆಗೆ ಜನಸೇವೆಯಲ್ಲೂ ರಮೇಶ್ ಕಾಂಚನ್ ಮುಂಚೂಣಿ: ಸೊರಕೆ

ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ...

ಚಿಕ್ಕಮಗಳೂರು | ಭದ್ರಾ ಉಪಕಣಿವೆ ಯೋಜನೆ: ತುರ್ತಾಗಿ ತುಂಬಿಸಿ; ರೈತ ಸಂಘ ಗುರುಶಾಂತಪ್ಪ

ಅಜ್ಜಂಪುರ ತಾಲ್ಲೂಕಿನಲ್ಲಿ ಬರಗಾಲ ಅನುಭವಿಸುತ್ತಿರುವ  ಜನರ ಒಳಿತಿಗೆ ಭದ್ರಾ ಉಪಕಣಿವೆ ಯೋಜನೆ...

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಅ. 31ರಂದು ಸ್ನೇಹ ಸಮಾವೇಶ, ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ...