ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿತ್ತು ಎಂಬ ಆರೋಪದ ಬೆನ್ನಲ್ಲೇ ನಟ ದರ್ಶನ್‌ರನ್ನು ಇತ್ತೀಚೆಗೆ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಇಲ್ಲಿ ದರ್ಶನ್ ಈಗ ಶೌಚಕ್ಕಾಗಿ ಸರ್ಜಿಕಲ್ ಚೇರ್ ಕೇಳಿದ್ದಾರೆ ಎಂದು ವರದಿಯಾಗಿದೆ.
ನಟ ದರ್ಶನ್ ಅವರಿಗೆ ಬೆನ್ನು ನೋವು ಜೋರಾಗಿದ್ದು, ಇದರಿಂದಾಗಿ ಶೌಚಾಕ್ಕಾಗಿ ಸರ್ಜಿಕಲ್ ಚೇರ್ ಅನ್ನು ಕೇಳಿರುವುದಾಗಿ ಕಾರಾಗೃಹ ಇಲಾಖೆಯ ಉತ್ತರ ವಲಯ ಉಪಮಹಾನೀರೀಕ್ಷಿಕ ಟಿ.ಪಿ ಶೇಷ ತಿಳಿಸಿದ್ದಾರೆ.
ಇಲಾಖೆಯ ಸೂಚನೆಯಂತೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ ಉಪಮಹಾನೀರೀಕ್ಷಿಕರು ದರ್ಶನ್ ಜೈಲಿನಲ್ಲಿ ಆಹಾರ ಸೇವನೆ ಮಾಡದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ
“ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದ್ದು, ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಾಕ್ಕೆ ಕಷ್ಟವಾಗುತ್ತಿದೆ ಎಂದು ದರ್ಶನ್ ತಿಳಿಸಿದ್ದಾರೆ. ವೆಸ್ಟರ್ನ್ ಕಮೋಡ್ ವ್ಯವಸ್ಥೆ ಮಾಡಿ ಅಥವಾ ಸರ್ಜಿಕಲ್ ಚೇರ್ ಆದರೂ ನೀಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ. ದರ್ಶನ್ ಟಿವಿ ಕೇಳಿದರೆ ನೀಡಲಾಗುತ್ತದೆ. ಇತರೆ ಕೈದಿಗಳಿಗೂ ಈ ವ್ಯವಸ್ಥೆಯಿದೆ” ಎಂದು ಶೇಷ ಹೇಳಿದರು.
“ದರ್ಶನ್ ಅವರನ್ನು ಜೈಲಿನಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ನಿರ್ದೇಶನ ನೀಡಲಾಗಿದೆ. ಅವುಗಳ ಪಾಲನೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕುಟುಂಬಸ್ಥರು ಮತ್ತು ವಕೀಲರನ್ನು ಬಿಟ್ಟು ಬೇರೆ ಯಾರಿಗೂ ದರ್ಶನ್ ಭೇಟಿಗೆ ಅವಕಾಶವಿಲ್ಲ. ರಾಜಕೀಯ ಒತ್ತಡಗಳಿಗೆ ನಾವು ಯಾವುದೇ ಕಾರಣಕ್ಕೂ ಮಣಿಯಲ್ಲ” ಎಂದು ದರ್ಶನ್ ಸ್ಪಷ್ಟಪಡಿಸಿದರು.
ಸದ್ಯ ಬಳ್ಳಾರಿ ಜೈಲಿನಲ್ಲಿ ಯಾವುದೇ ಮೊಬೈಲ್ ಜಾಮರ್‌ಗಳಿಲ್ಲ. ಆಧುನಿಕ ಜಾಮರ್ ಅಳವಡಿಸಲು ಕ್ರಮತೆಗೆದುಕೊಳ್ಳಲಾಗಿದೆ ಎಂದೂ ತಿಳಿಸಿದರು.
Ootta,ನೀರು , haagu ನಿದ್ರೆ, ಶೌಚಾಲಯ, eveilla ಮಾನವ na moola bootha hakk,
Addanu ನೀಡುವುದು ಅಧಿಕಾರಿಗlaa ಧರ್ಮ ನಿಮ್ಮೆಲ್ಲರ rannu kai muggidhu ಕೀಳುತ್ತೇನೆ
ಹಿಂಸೆ ಕೊಡಬೇಡಿ ಪ್ರಾಣಿಗಳಿಗೆ blue ಕ್ರಾಸ್ idei ,ಮನುಷ್ಯನಿಗೆ ಯಾವುದೇ thrass ಕೊಡಬೇಡಿ