ದಾವಣಗೆರೆ | ಚಿಕ್ಕಕೋಗಲೂರು ಗ್ರಾಮದಲ್ಲಿ ಕಚ್ಚಾಬಾಂಬ್ ಸ್ಫೋಟ: ಸಾಕುನಾಯಿ ಸಾವು

Date:

ದಾವಣಗೆರೆ ಜಿಲ್ಲೆಯ ನಲ್ಕುದರೆ ಗ್ರಾಮದಲ್ಲಿ ಕಚ್ಚಾಬಾಂಬ್ ಸ್ಫೋಟಗೊಂಡು ಸಾಕು ನಾಯಿ ಸಾವನ್ನಪ್ಪಿತ್ತು. ಮರುದಿನವೇ ಮತ್ತೊಂದು ಇಂತಹ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕಕೋಗಲೂರು ಗ್ರಾಮದ ಜಮೀನಿನಲ್ಲಿ ನಡೆದಿದೆ. ಪ್ಲ್ಯಾಸ್ಟಿಕ್ ಕವರ್​​ನಲ್ಲಿದ್ದ ವಸ್ತುವನ್ನು ಕಚ್ಚಿದ ಕೂಡಲೇ ಸ್ಫೋಟಗೊಂಡು ನಾಯಿಯೊಂದು ಸಾವನಪ್ಪಿದೆ.

- Advertisement -

ಮೃತಪಟ್ಟ ನಾಯಿ ಚಿಕ್ಕಕೋಗಲೂರು ಗ್ರಾಮದ ಗೀತಮ್ಮ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಸಂತೇಬೆನ್ನೂರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾಡು ಹಂದಿಗಳಿಗೆ ಇಡುವ ಕಚ್ಚಾಬಾಂಬ್ ಸ್ಫೋಟಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ನಲ್ಕುದುರೆ, ಚಿಕ್ಕಕೋಗಲೂರು, ಗಿರಿಯಾಪುರ, ವೆಂಕಟೇಶ್ವರ ಕ್ಯಾಂಪ್ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ತಾಯಿ ಸೋನಾಲಿ ವಾಕೋಡೆ ಕೇಳಿದ ಪ್ರಶ್ನೆ. ಈ ಪ್ರಶ್ನೆ ಕೇವಲ ಮಗನನ್ನು ಕಳೆದುಕೊಂಡ ತಾಯಿಯ...

ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಮುಟ್ಟಬಾರದು. ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿರುವ ಪೊಲೀಸರು, ಕಚ್ಚಾಬಾಂಬ್‌ಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ಕಳೆದ ದಿನ ಇದೇ ರೀತಿಯ ಘಟನೆ ನಡೆದಿತ್ತು. ರಸ್ತೆಯಲ್ಲಿ ಬಿಸಾಡಿದ್ದ ಪ್ಲ್ಯಾಸ್ಟಿಕ್ ಕವರ್​ನಲ್ಲಿದ ವಸ್ತುವನ್ನು ನಾಯಿ ಕಚ್ಚಿತ್ತು. ಪರಿಣಾಮ ಕಚ್ಚಾಬಾಂಬ್ ಬ್ಲ್ಯಾಸ್ಟ್ ಆಗಿ ನಾಯಿ ಮುಖ ಛಿದ್ರವಾಗಿದೆ ಎಂದು ಪಿಎಸ್ಐ ಜಗದೀಶ್ ಮಾಹಿತಿ ನೀಡಿದ್ದಾರೆ.

ಸೋಮವಾರ ಗ್ರಾಮದ ಅರಕೇರೆ ರುದ್ರೇಶ್ ಎನ್ನುವರಿಗೆ ಸೇರಿದ ನಾಯಿ ಸಾವನ್ನಪ್ಪಿತ್ತು. ಇನ್ನು ಸ್ಫೋಟಗೊಂಡ ತೀವ್ರತೆಗೆ ಒಂದು ಕಿಲೋಮೀಟರೆವರೆಗೂ ಶಬ್ದ ಕೇಳಿಬಂದಿದ್ದು, ಗ್ರಾಮಸ್ಥರ‌ ಆತಂಕ ಮನೆ ಮಾಡಿತ್ತು.

ಇದನ್ನೂ ಓದಿದ್ದೀರಾ? ಬಳ್ಳಾರಿ | ಆರ್​ಡಿಪಿಆರ್ ಇಲಾಖೆಯ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟಕವನ್ನು ಪ್ಲ್ಯಾಸ್ಟಿಕ್ ಕವರ್​ನಲ್ಲಿ ಇಟ್ಟ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

“ಹಂದಿ ಹಿಡಿಯಲು ಕಚ್ಚಾಬಾಂಬ್ ಇರಿಸಿದ್ದು, ಅದು ಸ್ಫೋಟಗೊಂಡಿದೆ. ಜಮೀನುಗಳಿಗೆ ನುಗ್ಗುವ ಹಂದಿಗಳನ್ನು ಹಿಡಿಯಲು ಇದನ್ನು ಬಳಸುತ್ತಾರೆ. ಪ್ಲ್ಯಾಸ್ಟಿಕ್ ಕವರ್​ನಲ್ಲಿ ಯಾರೋ ಕಚ್ಚಾಬಾಂಬ್‌ ಇರಿಸಿದ್ದಕ್ಕೆ ನಾಯಿ ಬಾಯಿ ಹಾಕಿದ ಪರಿಣಾಮ ಸ್ಫೋಟಗೊಂಡಿದೆ. ಯಾವುದೇ ಅನಾಹುತ ನಡೆದಿಲ್ಲ. ಸದ್ಯ ಪಿಐ ಮಲ್ಲಮ್ಮ ಚೌಬೆ, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಸಮೇತ ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿರುವೆ, ಯಾವುದೇ ಸಮಸ್ಯೆ ಇಲ್ಲ” ಎಂದು ಪಿಎಸ್ಐ ಜಗದೀಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಬರ ಘೋಷಣೆ ಮಾಡದ್ದಕ್ಕೆ ಅಸಮಾಧಾನ: ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ...

ರಾಜ್ಯದ 30% ಕಾಫಿ ತೋಟಗಳು ಅರಣ್ಯ ಭೂಮಿ ಒತ್ತುವರಿ? – ಸರ್ಕಾರದ ನೂತನ ಸರ್ವೆ ಆದೇಶದಿಂದ ಬೆಳೆಗಾರರಲ್ಲಿ ಆತಂಕ!

ರಾಜ್ಯದಲ್ಲಿರುವ ಒಟ್ಟು ಕಾಫಿ ಎಸ್ಟೇಟ್‌ಗಳ ಪೈಕಿ ಸುಮಾರು ಶೇಕಡ 30ರಷ್ಟು ಭಾಗವು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ ತಂತ್ರವೋ?

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್...

ಕಾಲೇಜು ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳೇ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?

‘ದಲಿತ ವಿದ್ಯಾರ್ಥಿಗಳೇ ಏಕೆ ಹೀಗೆ ಸಾಯುತ್ತಿದ್ದಾರೆ?’ — ಇದು ಐಐಟಿ ಬಾಂಬೆಯ...