ದಾವಣಗೆರೆ | ಎಸ್ಐಆರ್ ಮ್ಯಾಪಿಂಗ್ ನಲ್ಲಿ ನ್ಯೂನತೆ:ಬಿಎಲ್ಓ ಮಾರ್ಗಸೂಚಿಗೆ ಮುಸ್ಲಿಂ ಒಕ್ಕೂಟ ಆಗ್ರಹ

Date:

ಚುನಾವಣಾ ಆಯೋಗದ ಆದೇಶದಂತೆ
ಬಿಎಲ್ಓಗಳು ವಿಶೇಷ ತೀವ್ರ ಪರಿಶೀಲನೆ (SIR)ಗಾಗಿ ಕೈಗೊಂಡಿರುವ ಮತದಾರರ ಮ್ಯಾಪಿಂಗ್ ಕಾರ್ಯದಲ್ಲಿ ಹಲವು ನ್ಯೂನತೆಗಳನ್ನು ಎಸಗುತ್ತಿದ್ದಾರೆ.‌ ಮ್ಯಾಪಿಂಗ್ ಅನ್ನು ಸರಿಯಾಗಿ ನಿರ್ವಹಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಮಾರ್ಗಸೂಚಿ, ಸಲಹೆ ನೀಡಬೇಕು ಎಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ದಾವಣಗೆರೆ ಮುಸ್ಲಿಂ ಒಕ್ಕೂಟದ ಮುಖಂಡರು ಕಾರ್ಯಕರ್ತರು ಮನವಿ ಸಲ್ಲಿಸಿದರು.‌

- Advertisement -

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ದಾವಣಗೆರೆ ಮುಸ್ಲಿಂ ಒಕ್ಕೂಟವು ಮತದಾರರನ್ನು ತಮ್ಮ ತಮ್ಮ ಬೂತ್ ಮಟ್ಟದ ಅಧಿಕಾರಿಗಳ (BLO)ರೊಂದಿಗೆ ಸಮನ್ವಯ ಸಾಧಿಸಲು ಹಾಗೂ ಸಹಕರಿಸಲು ಮಾರ್ಗದರ್ಶನ ನೀಡುತ್ತಿದ್ದು, ವಿಶೇಷ ತೀವ್ರ ಪರಿಶೀಲನೆ (SIR)ಗಾಗಿ ಅಗತ್ಯವಾದ ಮತದಾರರ ನಕ್ಷೆಗೊಳಿಸುವ ಕಾರ್ಯವನ್ನು ಸರಿಯಾಗಿ ನಡೆಸಲು ಸಹಾಯ ಮಾಡುತ್ತಿದೆ. ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಮತ್ತು ಮತದಾರರ ನಕ್ಷೆಗೊಳಿಸುವ ಕಾರ್ಯವನ್ನು ಸರಿಯಾಗಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಬೂತ್ ಮಟ್ಟದ ಅಧಿಕಾರಿಗಳನ್ನು ನಾವು ಹೃತ್ತೂರ್ವಕವಾಗಿ ಮೆಚ್ಚುತ್ತೇವೆ. ಅವರ ಕರ್ತವ್ಯ ಶ್ಲಾಘನೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

“ಆದರೆ, ಹಲವಾರು ಬೂತ್ ಮಟ್ಟದಅಧಿಕಾರಿ(BLO) ಗಳು ಮತದಾರರಿಗೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ, ತಮ್ಮ ಬೂತ್‌ಗಳಲ್ಲಿ ಲಭ್ಯವಿಲ್ಲ ಹಾಗೂ ಮನೆಗಳಿಗೆ ಭೇಟಿ ನೀಡುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಮತದಾರರಿಗೆ ತೊಂದರೆ ಉಂಟಾಗಿದ್ದು, ಮತದಾರರ ನಕ್ಷೆಗೊಳಿಸುವ ಕಾರ್ಯದ ಸುಗಮ ಪ್ರಗತಿ ಅಡ್ಡಿಯಾಗಿದೆ. ಅದ್ದರಿಂದ, BLO ಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿದರು.‌

“ಮತದಾರರ ನಕ್ಷೆಗೊಳಿಸುವ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಹಾಗೂ ನಮಯಕ್ಕೆ ತಕ್ಕಂತೆ ನಡೆಸುವುದು ಅತ್ಯಂತ ಮುಖ್ಯ. ಮತದಾರರು ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗಬೇಕು. ಮತ್ತು ಬೂತ್ ಮಟ್ಟದ ಅಧಿಕಾರಿಗಳು ಮತದಾರರನ್ನು ಸರಿಯಾದ ವಿಳಾಸದೊಂದಿಗೆ ಸಂಪರ್ಕಿಸಿ ಉತ್ತಮವಾಗಿ ಕಾರ್ಯನಿರ್ವಹಿಸಲು ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದೇವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆದ್ದಾರಿ ವಿವಾದದಲ್ಲಿ ಸರ್ಕಾರ ಮೌನ: ಬಲಿಯಾಗುತ್ತಿರುವುದು ವಾಹನ ಸವಾರರ ಜೀವನ

ಮನವಿ ಸಲ್ಲಿಸುವ ವೇಳೆ ಮುಸ್ಲಿಂ ಒಕ್ಕೂಟದ ಮುಖಂಡರಾದ ವಕೀಲರಾದ ನಜೀರ್ ಅಹಮದ್, ಇಬ್ರಾಹಿಂ ಖಲೀಲುಲ್ಲಾ, ಎಐಎಂಐಎಂ ಮುಖಂಡ ಮಹಮ್ಮದ್ ಅಲಿ ಶೋಯಿಬ್, ಮಹಮದ್ ರಿಯಾಜ್, ನಜೀರ್ ಅಹಮದ್, ಶಬ್ಬೀರ್ ಅಹ್ಮದ್, ಮೊಹಮ್ಮದ್ ಹಯಾತ್, ಆದಿಲ್ ಖಾನ್, ಸ್ಮಾರ್ಟ್ ನ್ಯೂಸ್ ಸಂಪಾದಕ ಅಲ್ಲಾಭಕ್ಷಿ, ಖಲೀಲುಲ್ಲಾ, ಫಯಾಜ್ ಖಾನ್ ಸೇರಿದಂತೆ
ಇತರರು ಹಾಜರಿದ್ದರು.‌

ಇದನ್ನೂ ಓದಿ ? ದಾವಣಗೆರೆ | ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಟಿಕೆಟ್ ನಮ್ಮ ಸಮಾಜದ ಹಕ್ಕು: ಮುಸ್ಲಿಂ ಮುಖಂಡರ ತಿರುಗೇಟು

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಫಾರ್ಮ್‌-7 ವಿವಾದ | ಆರೋಪಿಗಳ ರಕ್ಷಣೆಗೆ ನಿಂತರೇ ಎಚ್‌ಡಿಕೆ?

ರಾಜ್ಯದಲ್ಲಿ ಸದ್ಯ ಭಾರೀ ಗದ್ದಲ ಎಬ್ಬಿಸಿರುವ SIR ಮತ್ತು ದಂಡು ದಂಡಾಗಿ...

ರಾಜ್ಯದಲ್ಲಿ ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ವಾಪಸಾತಿಗೆ ಹೆಚ್ಚಿದ ಒತ್ತಡ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ...

SIR | ‘ಫಾರ್ಮ್-7’ ಅಕ್ರಮ: ಕರ್ನಾಟಕದಲ್ಲಿ ಬಿಜೆಪಿ ಎಲ್ಲೆಲ್ಲಿ ಏನೇನು ಮಾಡಿತು? ಸಮಗ್ರ ವರದಿ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಈ ಕಡೆಯ...