ದಾವಣಗೆರೆ | ಅನ್ವೇಷಕರು ಆರ್ಟ್ ಫೌಂಡೇಶನ್ ನಿಂದ ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ -2026

Date:

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ 2026ರ ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವವನ್ನು ದಾವಣಗೆರೆ- ವಿಜಯನಗರ ಮೂಲದ ಅನ್ವೇಷಕರು ಆರ್ಟ್ ಫೌಂಡೇಶನ್ ಆಯೋಜಿಸಿದ್ದು ಏಪ್ರಿಲ್ 17 ರಿಂದ ಮೇ 17 ರ ವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿದೆ.

- Advertisement -

ದಾವಣಗೆರೆಯ ಅನ್ವೇಷಕರು ಆರ್ಟ್ ಫೌಂಡೇಶನ್ ನ ರಂಗ ಕಲಾವಿದ ಸಿದ್ದರಾಜು ಮಾಹಿತಿ ನೀಡಿ “ದಾವಣಗೆರೆಯಲ್ಲಿ ದೃಶ್ಯಕಲಾ ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6:45ಕ್ಕೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಡಿನ ಹೆಸರಾಂತ ವಿವಿಧ ಕಲಾವಿದರುಗಳು, ರಂಗಭೂಮಿ ಕಲಾವಿದರು ನಾಟಕಗಳನ್ನು ಅಭಿನಯಿಸಲಿದ್ದು ದಾವಣಗೆರೆಯ ಸಹೃದಯ ನಾಟಕ ಕಲಾವಿದರು ಆಗಮಿಸಿ ನಾಟಕಗಳನ್ನು ವೀಕ್ಷಿಸಬೇಕು” ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಉತ್ತಮ ಸಮಾಜ: ನ್ಯಾ.‌ಶ್ರೀಮತಿ ವೇಲಾ

“ಈಗಾಗಲೇ ಏಪ್ರಿಲ್ 17ರಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಕಾದಂಬರಿ ಆಧಾರಿತ ‘ಒಮ್ಮೆ ಹೆಣ್ಣಾಗು’ ರಾಷ್ಟ್ರಕವಿ ಕುವೆಂಪು ಅವರ ‘ನನ್ನ ಗೋಪಾಲ’, ಜಿ ಎಚ್ ಶಿವರುದ್ರಪ್ಪ ಅವರ ‘ಹಾಡು ಹಕ್ಕಿ’ ಪ್ರದರ್ಶನಗೊಂಡಿದ್ದು, ಏಪ್ರಿಲ್ 25ಕ್ಕೆ ಟಿಪಿ ಕೈಲಾಸಂ ಅವರ ‘ನಮ್ ಕಂಪನಿ’, ಮೇ 2ಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’, ಮೇ 3 ರಂದು ಕೆ ವೈ ನಾರಾಯಣ ಸ್ವಾಮಿ ಅವರ ‘ವರ್ಣ ಪಲ್ಲಟ’ ಮೇ 9 ಕ್ಕೆ ನಾವು ನೀವು ಸಾಂಸ್ಕೃತಿಕ ವೇದಿಕೆ-ದಾವಣಗೆರೆ ಅಭಿನಯಿಸುವ ಮಂಜುನಾಥ್ ಎಸ್ ಟಿ ನಿರ್ದೇಶನದ ‘ಅಂಗೈರೇಖೆ’, ಮೇ ಹತ್ತರಂದು ‘ಹ್ಯಾಂಗ್ ಆನ್’ ಕೊಂಕಣಿ ನಾಟಕ, ರಾಜೀವ್ ಕೃಷ್ಣನ್ ಅವರ ನಿರ್ದೇಶನದ ತಮಿಳು ನಾಟಕ ‘ಕಿಂದನ್ ಚರಿತಿರಂ’, ಅರುಣ್ ಲಾಲ್ ವಿನ್ಯಾಸದ ಮಲಯಾಳಂ ನಾಟಕ ‘ಚಿಲ್ಲರ ಸಮರಂ’ ಹಾಗೂ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಜಯಂತ್ ಕಾಯ್ಕಿಣಿ ರೂಪಾಂತರದ ‘ಜೊತೆಗಿರುವ ಚಂದಿರ’ ಮುಂದಿನ ದಿನಗಳಲ್ಲಿ ಪ್ರತಿ ಶನಿವಾರ, ಭಾನುವಾರ ಹಾಗೂ ಮೇ 15ರ ಶುಕ್ರವಾರ ಸಂಜೆ ಪ್ರದರ್ಶನಗೊಳ್ಳಲಿವೆ. ಆಸಕ್ತರು ಆಗಮಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕು” ಎಂದು ಕೋರಿದರು.

IMG 20250205 WA0034
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...