ರಾಜ್ಯದ ಗಮನ ಸೆಳೆದಿದ್ದ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯೊಂದೆ ಬಾಕಿಯಿದೆ. ತೀವ್ರ ಹಣಾಹಣಿ ನಡುವೆ ಗೆಲುವಿನ ದಡ ತಲುಪಿದ್ದಾರೆ. ಅಂತಿಮವಾಗಿ ಮೂರು ಬೂತ್ ಗಳ 1687ಮತ ಎಣಿಕೆ ಬಾಕಿ ಇದ್ದಂತೆಯೇ 5 ಸಾವಿರ ಅಂತರದ ಗೆಲುವು ಖಚಿತಗೊಂಡಿಸಿಕೊಂಡಿದ್ದಾರೆ.
ಶಾಮನೂರು ಶಿವಶಂಕರಪ್ಪ ನಿಧನದ ನಂತರವೂ ಶಾಮನೂರು ಕುಟುಂಬಕ್ಕೆ ಒಲಿದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ. ಕಾಂಗ್ರೆಸ್ ಭದ್ರಕೋಟೆಯಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆದುಕೊಂಡ ಎಸ್ ಡಿ ಪಿ ಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 18785ಕ್ಕೂ ಹೆಚ್ಚಿನ ಮತ ಪಡೆದಿರುವುದರಿಂದ ಕಾಂಗ್ರೆಸ್ ಗೆ ಗೆಲುವಿನ ಅಂತರ ಕಡಿಮೆಯಾಗಿದೆ.
21ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 4873 ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ 68611,
ಬಿಜೆಪಿ 63746, ಎಸ್ ಡಿ ಪಿ ಐ 18785 ಮತಗಳನ್ನಬು ಪಡೆದುಕೊಂಡಿದ್ದಾರೆ.




