ಧಾರವಾಡ | ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಬಹುತ್ವವನ್ನು ಎತ್ತಿ ಹಿಡಿದ ಲೇಖಕ: ದಾಮೋದರ ಮೌಜೋ

Date:

ದನಿಯಿಲ್ಲದವರ, ಸಮಾಜದ ಅಂಚಿನಲ್ಲಿರುವ ಜನಸಾಮಾನ್ಯರ ಕುರಿತು ಬರೆದ ಸಾಹಿತ್ಯ ಬಹುಕಾಲ ನಿಲ್ಲುತ್ತದೆ. ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಭಾರತೀಯ ಭಾಷೆಗಳ ನಡುವಿನ ಸೇತುವೆಯಾಗಿ ಬಹುತ್ವವನ್ನು ಎತ್ತಿ ಹಿಡಿದ ಲೇಖಕ ಎಂದು ಗೋವಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಾಮೋದರ ಮೌಜೋ ಹೇಳಿದರು.

- Advertisement -

ಧಾರವಾಡದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಪ್ರೊಗ್ರೆಸಿವ್‌ ಕಲ್ಚರಲ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ (ಪಿಸಿಎಐ) ಸಂಘಟನೆ ಏರ್ಪಡಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅಭಿನಂದನ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನಾವು ಈ ಸಮಾಜದ ಓರೆಕೋರೆಗಳ ಕುರಿತು ನಮ್ಮ ಭಿನ್ನಮತವನ್ನು ದಾಖಲಿಸಲು ಬರೆಯಬೇಕು. ಅಂದಾಗ ಒಂದು ಹೊಸ ಎಚ್ಚರ ಮೂಡಲು ಸಾಧ್ಯ. ದೇಶದಲ್ಲಿ ಎಲ್ಲ ಭಾಷೆಗಳು ಶ್ರೇಷ್ಠವೇ. ಯಾವ ಭಾಷೆಯನ್ನೂ ನಾವು ತಿರಸ್ಕರಿಸಬಾರದು. ಆದರೆ ಯಾವುದೇ ಭಾಷೆಯ ಹೇರಿಕೆಯಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಯುವ ಲೇಖಕರು ತಮ್ಮ ಪರಂಪರೆಯ ಮೌಲ್ಯಗಳನ್ನು ಹೀರಿಕೊಂಡು ಹೊಸದನ್ನು ಕಟ್ಟಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬುಕ್‌ ಬ್ರಹ್ಮ ಸಂಚಾಲಕ ದೇವು ಪತ್ತಾರ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕಾವ್ಯದ ಕುರಿತು ಮಾತನಾಡಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಆರೂವರೆ ದಶಕಗಳಿಂದ ಕಾವ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಮೆಗಳು ಅವರ ಕಾವ್ಯದ ವಿಶೇಷ ಗುಣವಾಗಿವೆ. ಪಟ್ಟಣಶೆಟ್ಟರ ಕಾವ್ಯವೆಂದರೆ ಒಂದು ರೀತಿ ಪ್ರತಿಮೆಗಳ ಸಮೂಹ. ಅವರ ಕವಿತೆಯಿಂದ ಕವಿತೆಗೆ ಬದಲಾವಣೆ, ಬೆಳವಣಿಗೆ ಎದ್ದುಕಾಣುತ್ತದೆ. ಅಲ್ಲಿ ಕವಿತೆ ಕಟ್ಟುವ ಕಸುಬುದಾರಿಕೆ ಕಾಣುತ್ತದೆ ಎಂದರು. ಅವರು ಯಾವಾಗಲೂ ಅಧಿಕಾರ ಕ್ರೇಂದ್ರದಿಂದ ಅಂತರ ಕಾಯ್ದುಕೊಂಡು ಬಂದವರು. ಹಾಗಂತ ತಪ್ಪುಗಳು ಕಂಡಾಗ ಖಂಡಿಸದೇ ಕೂತವರಲ್ಲ ಎಂದು ಹೇಳಿದರು.

ಲೇಖಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಸಿದ್ಧಲಿಂಗ ಪಟ್ಟಣಶೆಟ್ಟಿ ಗದ್ಯದ ಬಗ್ಗೆ ಮಾತನಾಡಿ, ಕಂಡುಂಡದ್ದನ್ನು ಬಿಡುಬೀಸಾಗಿ ಬರೆದಿರುವುದು, ಅನವಶ್ಯಕ ಹೊಗಳಿಕೆ ಮಾಡದೇ ತೆಗಳಲೂ ಹೋಗದೇ ಆಪ್ತವಾಗುವ ಗುಣ ಅವರ ಗದ್ಯ ಬರವಣಿಗೆಯಲ್ಲಿ ಕಾಣ ಸಿಗುತ್ತದೆ ಎಂದರು. ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣಶೆಟ್ಟಿಯವರು ಸದಾ ನಮ್ಮ ಪ್ರಗತಿಪರ ಆಶಯದ ಕಾರ್ಯಕ್ರಮಗಳಿಗೆ ಬೆಂಬಲಿಸುತ್ತ ಬಂದಿದ್ದಾರೆ. ಯುವಜನತೆ ಹಿರಿಯರ ಸ್ಪೂರ್ತಿಯ ಮಾತುಗಳ ಆಶಯದಂತೆ ಸಾಂಸ್ಕೃತಿಕ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಭಿನಂದನೆ ಸ್ವೀಕರಿಸಿದ ಪಟ್ಟಣಶೆಟ್ಟಿಯವರು ಯುವಲೇಖಕರು ಸತತ ಓದು ಬರವಣಿಗೆಯಿಂದ ಸಾಹಿತ್ಯದಲ್ಲಿ ಮುಂದುವರಿಯಬೇಕು. ಸಾಮಾನ್ಯ ಜನರ ಒಡನಾಟದಲ್ಲಿ ಬದುಕಿನ ಅನುಭವಗಳನ್ನು ದಾಖಲಿಸಬೇಕು ಎಂದರು.

ಇದನ್ನೂ ಓದಿ ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?

ರಂಗಕರ್ಮಿ, ಶಿರೀಷ್‌ ಜೋಶಿ ಪಟ್ಟಣಶೆಟ್ಟರ ರಂಗಸಾಹಿತ್ಯದ ಕುರಿತು ಮಾತನಾಡಿದರು. ಮಲ್ಲು ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ನಿರೂಪಿಸಿದರು. ಹೇಮಾ ಪಟ್ಟಣಶೆಟ್ಟಿ, ಸುನೀತಕುಮಾರ್‌ ಶೆಟ್ಟಿ‌, ಅಲಕಾ ರಾವ್, ಕಳಕೇಶ್‌ ಎಸ್ ಇದ್ದರು. ನಂತರ ಪಟ್ಟಣಶೆಟ್ಟಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸುನಂದಾ ಕಡಮೆ, ವಿಠ್ಠಲ ದಳವಾಯಿ ಸಂವಾದ ನಡೆಸಿ ಕೊಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮಳೆಗಾಲ ಮುಗಿಯುವ ಮುನ್ನವೇ ಬಿಸಿಲಿನ ತಾಪ; ರಾಯಚೂರಿನಲ್ಲಿ 37.6 ಡಿಗ್ರಿ ಉಷ್ಣಾಂಶ

ಸೆಪ್ಟೆಂಬರ್‌ ಮಳೆಗಾಲ ಮುಕ್ತಾಯವಾಗಿ, ಅಕ್ಟೋಬರ್‌ನಲ್ಲಿ ಚಳಿಗಾಲ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ...

ಕಲಬುರಗಿ | ಔಷಧೀಯ ಸಸ್ಯಗಳ ಪರಿಚಯದೊಂದಿಗೆ ಪರಿಸರ ಸಂರಕ್ಷಣೆಗೆ ಕರೆ

ಔಷಧೀಯ ಹಾಗೂ ಆಯುರ್ವೇದಿಕ ಗಿಡಮೂಲಿಕೆಗಳ ಮಹತ್ವ, ಸಾಂಪ್ರದಾಯಿಕ ಬಳಕೆ ಮತ್ತು ಆರೋಗ್ಯದ...

ವಡಗೇರಾ ಸಂಪೂರ್ಣ ಬರಪೀಡಿತ ಘೋಷಣೆಗೆ ರೈತರ ಆಗ್ರಹಿಸಿ ಮನವಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ...