ಇದೇ ಸೆ. 29ರಂದು ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದ ಎದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರು ಚೂನಪ್ಪ ಪೂಜಾರಿ ಹಾಗೂ ರಾಜ್ಯ ಗೌರವಾಧ್ಯಕ್ಷರು ಶಿಶಿಕಾಂತ ಪಡಸಲಗಿ ಗುರುಜಿ ಅವರ ನೇತೃತ್ವದಲ್ಲಿ ಲಕ್ಷ ರೈತರು ಪ್ರತಿಭಟನೆಗೆ ಆಗಮುಸಬೇಕೆಂದು ರೈತ ಮುಖಂಡರು ಕರೆ ನೀಡಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ರುದ್ರಪ್ಪ ಬಳಿಗಾರ ಮಾತನಾಡಿ, “ಈ ಪ್ರತಿಭಟನೆಯಲ್ಲಿ ನಮ್ಮ ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಮುಂದು ಪ್ರತಿಭಟನೆ ಮಾಡಲಾಗುವುದು” ಎಂದರು.
“ಪ್ರತಿಭಟನೆಗೆ ಮುಖ್ಯ ಕಾರಣ, ಕೇಂದ್ರ ಸರಕಾರ ಒಂಬತ್ತು ವರ್ಷಗಳ ಹಿಂದೆ ಸಕ್ಕರೆಗೆ ರೂ31 ಎಮ್.ಎಸ್.ಪಿ ಘೋಷಣೆ ಮಾಡಿತ್ತು. ಇದುವರೆಗೂ ಇದು ರಿವೈಜ್ಡ್ ಆಗಿರುವುದಿಲ್ಲ. ಪ್ರತಿ ವರ್ಷ ಎಮ್.ಎಸ್.ಪಿ ಘೋಷಣೆ ಮಾಡುತ್ತ ಬಂದಿದ್ದರೆ, ಇವತ್ತು ಸಕ್ಕರೆಗೆ 50ರಿಂದ 55ರೂ ವರೆಗೆ ಹೆಚ್ಚಿಗೆ ಆಗಬೇಕಿತ್ತು. ಆದರೆ ಇವತ್ತು ಸಕ್ಕರೆ ಬೆಲೆ 31ರೂ ಇದೆ. ಇದರಿಂದ ಕಬ್ಬು ಉತ್ಪಾದಕರಿಗೆ ಕಂಪನಿಯವರು ಕೊಡುವೆ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಹಾಗಾಗಿ ಪ್ರಲ್ಹಾದ್ ಜೋಶಿ ಅವರು ಆಹಾರ ಮಂತ್ರಿ ಆಗಿರುವುದರಿಂದ, ಎಮ್.ಎಸ್.ಪಿ ಘೋಷಣೆ ಮಾಡುವ ಅಧಿಕಾರ ಅವರಿಗೆ ಇರುವುದರಿಂದ, ಕಬ್ಬಿಗೆ ಇಳುವರಿ, ಒಳ್ಳೆ ಬೆಲೆ ಸಿಗಬೇಕೆಂದರೆ ಸಕ್ಕರೆಗೆ 50-55ರೂ ಎಮ್.ಎಸ್.ಪಿ ಘೋಷಣೆ ಮಾಡಬೇಕು” ಎಂದು ಒತ್ತಡ ಮಾಡುತ್ತಿದ್ದೇವೆ.
“ಸ್ವಾಮಿನಾಥನ್ ಆಯೋಗವನ್ನು ಯತಾವತ್ತಾಗಿ ಶಾಸನ ಬದ್ಧಗೊಳಿಸಬೇಕು. ಎಥನಾಲ್ ಅನ್ನು ಸರಕಾರವೇ ಖರೀದಿಸಬೇಕು. ಸಕ್ಕರೆ ಎಮ್.ಎಸ್.ಪಿ ಜಾಸ್ತಿ ಮಾಡಿದರೇ ಇವೆಲ್ಲವೂ ಆಗಬಹುದು” ಎಂದಯ ಹೇಳಿದರು.
“ಈ ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹುಬ್ಬಳ್ಳಿಯ ಪ್ರಲ್ಹಾದ್ ಜೋಶಿ ಅವರ ನಿವಾಸದ ಎದುರು ಹಾವೇರಿ ಜಿಲ್ಲೆಯಿಂದ ಇಪ್ಪತ್ತೈದು ಸಾವಿರ ಜನರು ಹೋರಾಟ ಭಾಗವಹಿಸುತ್ತವೆ” ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹನಮಂತಪ್ಪ ಹುಚ್ಚಣ್ಣನವರ ಮಾತನಾಡಿ, “ಹಾವೇರಿ ಜಿಲ್ಲೆಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಕಬ್ಬಿನ ದರಕ್ಕೆ ಕಳೆದ ವರ್ಷ ಬೆಳಗಾವಿ ಜಿಲ್ಲೆಗೆ 3300ರೂ ಕೊಟ್ಟರು. ಆದರೆ ಹಾವೇರಿ ಜಿಲ್ಲೆಗೆ 2800ರೂ ಕೊಟ್ಟರು. ಕಬ್ಬಿನ ದರದಲ್ಲಿ ಜಿಲ್ಲೆ ಜಿಲ್ಲೆಗೆ ವ್ಯತ್ಯಾಸ ಕಂಡು ಬಂದಿದೆ. ಇದನ್ನು ಖಂಡಿಸಿ, ನಮ್ಮ ರೈತ ಸಂಘದ ನೇತೃತ್ವದಲ್ಲಿ ಹುಬ್ಬಳ್ಳಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಎದುರು ಪ್ರತಿಭಟನೆ ಮಾಡುತ್ತಿದ್ದು, ಆ ಪ್ರತಿಭಟನೆಗೆ ಎಲ್ಲ ರೈತ ಬಾಂಧವರು ಹೆಚ್ವಿನ ಸಂಖ್ಯೆಯಲ್ಲಿ ಬರಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತಪ್ಪ ಸಿದ್ದಾಪೂರು, ಜಿಲ್ಲಾ ಗೌರವಾಧ್ಯಕ್ಷರು ಈರಪ್ಪ ಮುದಿಯಪ್ಪನವರ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷರು ನಾಗರಾಜ ನನ್ನೋರೆ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಶಿವಾನಂದ ಜಡಿಮಠ, ಜಿಲ್ಲಾ ಸಂಚಾಲಕರು ದೇಸವರಾಜ ದೊಡ್ಡಮನಿ, ಹಾವೇರಿ ತಾಲೂಕು ಅಧ್ಯಕ್ಷರು ಶಿವನಗೌಡ ಗಾಜಿಗೌಡ್ರ, ಬಸನಗೌಡ ಪಾಟೀಲ್, ರೈತ ಮುಖಂಡರು ಮಂಜುನಾಥ ಮಾಳಗಿ ಉಪಸ್ಥಿತರಿದ್ದರು.




