ಧಾರವಾಡ | ಕುಂದಗೋಳ ತಾಲೂಕಿನಲ್ಲಿ ಸಮಸ್ಯೆಗಳದ್ದೇ ಕಾರುಬಾರು; ಕ್ಯಾರೇ ಎನ್ನದ ಅಧಿಕಾರಿಗಳು!

Date:

  • ಅಭಿವೃದ್ಧಿ ಕಡೆಗೆ ಗಮನ ಹರಿಸದ ಅಧಿಕಾರಿಗಳ ಮೇಲೆ ಸ್ಥಳೀಯರ ಹಿಡಿಶಾಪ
  • ರೋಗಾಣು ಹರಡುವಿಕೆಗೆ ಕಡಿವಾಣ ಹಾಕುವರೇ ಅಧಿಕಾರಿಗಳು?

ಧಾರವಾಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದರೆ ಕುಂದಗೋಳ. ಈ ತಾಲೂಕಿನಲ್ಲಿ ಮೂಲಭೂತ ಸಮಸ್ಯೆಗಳದ್ದೇ ದರ್ಬಾರು ಎಂದರೂ ತಪ್ಪಾಗಲಾರದು. ಅನ್ಯ ತಾಲೂಕುಗಳಿಗೆ ಹೋಲಿಸಿದರೆ ಕುಂದಗೋಳ ತಾಲೂಕಿನಲ್ಲಿ ಹಲವು ಸಮಸ್ಯೆಗಳು ಎದ್ದು ಕಾಣುತ್ತವೆ.

- Advertisement -

ತಾಲೂಕಿನ ದೇವನೂರು ಗ್ರಾಮ‌ ಪಂಚಾಯತಿ ವ್ಯಾಪ್ತಿಗೆ ಬರುವ ಬಿಳೆಬಾಳ, ತಾಲೂಕು‌ ಕೇಂದ್ರದಿಂದ 5 ಕಿ.ಮೀ ದೂರದಲ್ಲಿದೆ. 2011 ರ‌ ಜನಗಣತಿ ಪ್ರಕಾರ 1515 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಒಟ್ಟು 140ಕ್ಕೂ ಹೆಚ್ಚು ಮನೆಗಳಿದ್ದು, ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತಿದೆ. ಒಟ್ಟು 5 ಪಂಚಾಯತ್ ಸದಸ್ಯರ ಪೈಕಿ 4 ಜನ ಸದಸ್ಯರು ಬಿಳೆಬಾಳದವರೇ ಆಗಿದ್ದರೂ, ಬಿಳೆಬಾಳ ಗ್ರಾಮವು ಕೆಲವು ಸಮಸ್ಯೆಗಳ ಆಗರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಗ್ರಾಮದ ಅಗಸಿ ಅಂಗಳದಲ್ಲಿ ಸಣ್ಣ ಕೊಳ್ಳವೊಂದು ಕಲುಷಿತ ನೀರಿನಿಂದ ಕೂಡಿಕೊಂಡಿದೆ. ಮತ್ತು ಹನುಮಂತ ದೇವರ ಗುಡಿ, ದುರ್ಗಮ್ಮ ಗುಡಿ, ಭರಮದೇವರ ಗುಡಿ ಹಾಗೂ ಮೆಹಬೂಬ ಸುಬುಹಾನಿ ದರ್ಗಾ ಆವರಿಸಿಕೊಂಡ ಪ್ರದೇಶದ ಮಧ್ಯದಲ್ಲಿ ಹಲವು ಓಣಿಗಳಿಂದ ಬರುವ ಕಲುಷಿತ ನೀರು ಒಂದೇ ಕಡೆಗೆ ಶೇಖರಣೆ ಆಗುತ್ತದೆ. ಅದರ ಸುತ್ತಮುತ್ತಲು ಹತ್ತಾರು ಕುಟುಂಬಗಳು ವಾಸಮಾಡುತ್ತವೆ. ಶೇಖರಣೆಯಾಗಿ ನಿಂತ ಕೊಳಚೆ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ಜನ ರೋಗಾಣುಗಳಿಂದ‌ ಬಳಲುವ ದುಸ್ಥಿತಿ ಬಂದೊದಗಿದೆ.

WhatsApp Image 2024 08 10 at 4.13.13 PM

ಇಲ್ಲಿ ನಿಂತ ಕಲುಷಿತ ನೀರು ಮುಂದೆ ಊರು ದಾಟಲು ಅಡ್ಡವಾಗಿ ಹೊಲವೊಂದಿದೆ. ಆ ಹೊಲದ ಮಾಲೀಕರು ಈ ಗಲೀಜು ನೀರನ್ನು ತಡೆ ಹಿಡಿಯಲು ಅಡ್ಡವಾಗಿ ಒಡ್ಡನ್ನು ಹಾಕಿದ್ದಾರೆ. ಮತ್ತು ಇದೇ ಹೊಲದಲ್ಲಿ ಒಂದು ಅಂಗನವಾಡಿಯೂ ಇದ್ದು ಕಲುಷಿತ ನೀರು ನಿಂತ ಕಾರಣ ಮಕ್ಕಳನ್ನೂ ದಾಟಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಚಿಣ್ಣರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಇನ್ನು ದನ‌ ಮೇಯಿಸುವವರು, ವ್ಯವಸಾಯಕ್ಕೆ ಹೋಗುವವರು, ಸ್ಥಳಿಯ ನಿವಾಸಿಗಳು ಇದೇ ಗಲೀಜು‌ ನೀರಿನಲ್ಲೆ ಓಡಾಡುವ ಪರಿಸ್ಥಿತಿ ಬಂದಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಜೀವನ ಕಳೆಯುತ್ತಿದ್ದಾರೆ.

ದರ್ಗಾಕ್ಕೆ ಹೋಗುವ ಭಕ್ತರು ಇದೇ ಗಲೀಜಿನಲ್ಲೇ ಹೋಗಬೇಕು. ಹೆಣ್ಣು ಮಕ್ಕಳು, ವೃದ್ಧರು ಜೀವಹಿಡಿದು ಹೋಗುವ ವಾತಾವರಣ ಸೃಷ್ಟಿಯಾಗಿದೆ. ಹಲವು ಬಾರಿ ಪಿಡಿಓ, ಸಿಇಓ, ಶಾಸಕರು ಸ್ಥಳಿಕ್ಕೆ ಭೇಟಿ ಕೊಟ್ಟು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರಾದರೂ, ಈವರೆಗೆ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ಹಂಚಿಕೊಳ್ಳುತ್ತಾರೆ. ಅಧಿಕಾರಿಗಳು, ರಾಜಕಾರಣಿಗಳ ಮೇಲೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ನಾವೂ ಮನುಷ್ಯರಲ್ಲವೆ? ಹೀಗೆ ಗಲೀಜು ನೀರಿನ ನಡುವೆ ಬದುಕಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.

WhatsApp Image 2024 08 10 at 4.13.12 PM

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ್ ಮಾತನಾಡಿ, “ಈ ಸಮಸ್ಯೆಯ ಕುರಿತು ಈಗಾಗಲೆ ನನ್ನ ಗಮನಕ್ಕೆ ಬಂದಿದೆ ಮತ್ತು ಈ ಸಮಸ್ಯೆ ಬಗೆಹರಿಸಲು ಈಗಾಗಲೆ 36 ಲಕ್ಷದ ಯೋಜನೆಯ ಹಾಕಲಾಗಿದೆ. ಆದಷ್ಟು ಬೇಗ ಬಗೆಹರಿಸುತ್ತೇವೆ” ಎಂದರು.

ಗ್ರಾಪಂ ಅಧ್ಯಕ್ಷ ಈರಪ್ಪ ಸನದಿ, “ಈಗಾಗಲೆ ಜನಸಂಪರ್ಕ ಸಭೆಯಲ್ಲಿಯೂ ಮನವಿ‌ ಸಲ್ಲಿಸಲಾಗಿದೆ ಮತ್ತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ” ಎಂದಿದ್ದಾರೆ. ಬಾಬುಸಾಬ ಕಿಲ್ಲೆದಾರ್, ಇಸ್ಮಾಯಿಲ್ ಸಾಬ ಕಿಲ್ಲೆದಾರ್, ಶಂಕರ ಚಲವಾದಿ ಇನ್ನಿತರರು ಮಾತನಾಡಿ ಮಾಹಿತಿ ಮತ್ತು ಸಮಸ್ಯೆ ಹೇಳಿಕೊಂಡರು.

ಕಳೆದ ಎರಡು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಇನ್ನಾದರೂ ಮುಕ್ತಿ ಸಿಗುವುದೆ? ರೋಗಾಣು ಹರಡುವಿಕೆಗೆ ಕಡಿವಾಣ ಹಾಕುವರೆ? ಕಾದುನೋಡಬೇಕಿದೆ.

WhatsApp Image 2024 08 10 at 4.13.11 PM
IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರವಾರ | ಬೈತಕೂಲ ಬಂದರಿನಲ್ಲಿ ನೀರಿಗೆ ಬಿದ್ದು ಒಡಿಶಾ ಮೂಲದ ಮೀನುಗಾರ ಸಾವು

ಮೀನುಗಳನ್ನು ಖಾಲಿ ಮಾಡಿ ಬೋಟಿಗೆ ಐಸ್ ತುಂಬುತ್ತಿದ್ದ ವೇಳೆ ಕಾಲು ಜಾರಿ...

ನವೆಂಬರ್ 26ರಿಂದ ರಾಜ್ಯಾದ್ಯಂತ ‘ಜನರ ದನಿ, ಸಂವಿಧಾನದ ದನಿ’ ಜಾಗೃತಿ ಅಭಿಯಾನ

ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ, ದಲಿತ ಸಂಘರ್ಷ ಸಮಿತಿಗಳ...

ಉಡುಪಿ | ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್‌ನಿಂದ ‘ವೋಟ್ ಬಚಾವೋ–ದೇಶ್ ಬಚಾವೋ’ ಆಂದೋಲನ

ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಹಕ್ಕುಗಳ ರಕ್ಷಣೆಗೆ ಅಖಿಲ ಭಾರತ...

ಯಾದಗಿರಿ | ಆಂಧ್ರಪ್ರದೇಶದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳ ದಮನದ ಆರೋಪ: ಎಐಬಿಎಸ್‌ಪಿ ತೀವ್ರ ಖಂಡನೆ

ಆಂಧ್ರಪ್ರದೇಶದಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಲಾಗಿದೆ ಎಂಬ ಆರೋಪಗಳನ್ನು...