ಧಾರವಾಡ | ಮರ್ಯಾದೆಗೇಡು ಹತ್ಯೆ ನಿಷೇಧ ಕಾನೂನು ಜಾರಿಗೆ ಜನಪರ ಸಂಘಟನೆಗಳ ಒತ್ತಾಯ

Date:

ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಗರ್ಭಿಣಿ ಯುವತಿ ಮಾನ್ಯಳ ಮರ್ಯಾದೆಗೇಡು ಹತ್ಯೆ, ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಯೆ ಖಂಡಿಸಿ, ಎಲ್ಲಾ ತಪ್ಪತಸ್ಥರನ್ನು ಬಂದಿಸಿ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ಹಾಗೂ ಮರ್ಯಾದೆಗೇಡು ಹತ್ಯೆ ನಿಷೇಧ ಕಠಿಣ ಕಾನೂನು ತರಲು ಒತ್ತಾಯಿಸಿ ಧಾರವಾಡದ ವಿವಿದ ಜನಪರ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

- Advertisement -

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಪ್ರಭಾವತಿ ದೇಸಾಯಿ, ಸಾಧನಾ ಮಾನವ ಹಕ್ಕುಗಳ ವೇದಿಕೆಯ ಮುಖ್ಯಸ್ಥೆ ಡಾ. ಇಸಾಬೆಲ್ಲಾ ಝೇವಿಯರ್, ಖ್ಯಾತ ಕಲಾವಿದೆ ವಿಶ್ವೇಶ್ವರಿ ಹಿರೇಮಠ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಾಗರಾಜ ಚಲವಾದಿ, ರೈತ ಮುಖಂಡ ರವಿರಾಜ ಕಂಬಳಿ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣ ನಮ್ಮನ್ನು ಆಕ್ರೋಶ ಮತ್ತು ದಿಗ್ಭ್ರಮೆಗೀಡು ಮಾಡಿದೆ. ಮನೆಯ ಮಗಳು ತಮ್ಮ ಜಾತಿಗಿಂತ ಬೇರೆ ಜಾತಿಯ ಗಂಡನ್ನು ಪ್ರೀತಿಸಿ, ಮದುವೆಯಾದಳೆನ್ನುವ ಕಾರಣಕ್ಕೆ ಅವಳ ಜೀವಕ್ಕೇ ಕುತ್ತು ತಂದ ತಂದೆ ಮತ್ತು ಕುಟುಂಬದವರ ಕ್ರೌರ್ಯ ಅತ್ಯಂತ ಹೀನಾಯವಾದದ್ದು. ಭಾರತದ ಸ್ತ್ರೀಪುರುಷರೆಲ್ಲರಿಗೂ ಆಯ್ಕೆಯ ಸ್ವಾತಂತ್ರ‍್ಯವನ್ನೂ, ಸಮಾನತೆಯನ್ನೂ, ಘನತೆಯ ಬದುಕನ್ನೂ ನೀಡಿರುವ ಸಂವಿಧಾನ ಜಾರಿಯಾಗಿ ಮುಕ್ಕಾಲು ಶತಮಾನ ಕಳೆದರೂ  ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನಗಿಷ್ಟ ಬಂದವರನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವುದು ಅಪರಾಧ ಎನಿಸಿಕೊಂಡಿರುವುದೇಕೆ? ಈಗಲೂ ಹೆಣ್ಣು ತನ್ನ ಮನೆಯಲ್ಲಿ ಹಿರಿಯರು, ಅದರಲ್ಲೂ ಪುರುಷರು ನಿರ್ಧರಿಸಿದವನನ್ನೇ ಮದುವೆಯಾಗಬೇಕು ಎನ್ನುವ ಅಸ್ವತಂತ್ರ ಮುಂದುವರಿದಿರುವುದು ಹೇಗೆ? ಹೆಣ್ಣು ಸ್ವತಂತ್ರವಾಗಿ ಯೋಚಿಸಕೂಡದು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಕೂಡದು ಎಂಬ ಧೋರಣೆ ಇನ್ನೂ ನಮ್ಮ ನಡುವೆ ಎದ್ದು ಕುಣಿಯುತ್ತಿರುವುದೇಕೆ?

ಇದಕ್ಕೆಲ್ಲ ಕಾರಣ ಭಾರತೀಯ ಸಮಾಜ ಇನ್ನೂ ಪುರುಷಪ್ರಧಾನ ಮೌಲ್ಯಗಳನ್ನೇ ಅಳವಡಿಸಿಕೊಂಡಿರುವುದು ಮತ್ತು ಸಂವಿಧಾನ ನಮ್ಮ ಬದುಕಿನಲ್ಲಿ ಮೌಲ್ಯವಾಗಿ ಅಳವಡದೇ ಇರುವುದು. ಅದರ ಜೊತೆಗೆ ಜಾತಿ ಮೇಲು ಕೀಳಿನ ತಾರತಮ್ಯ ವ್ಯವಸ್ಥೆಯೂ ಜೀವಂತವಾಗಿದ್ದು ಅದಕ್ಕೆ ಈ ಪ್ರಕರಣ ಕ್ರೂರ ಸಾಕ್ಷಿಯಾಗಿದೆ. ಮೇಲೆಂದುಕೊಂಡ ಜಾತಿಯ ತಮ್ಮ ಮನೆ ಮಗಳು ಕೀಳೆಂದು ತಾವು ಕರೆಯುವ ದಲಿತ ಹುಡುಗನನ್ನು ಮದುವೆಯಾದದ್ದು, ಅಂತಹವನ ಮಗುವನ್ನು ಗರ್ಭದಲ್ಲಿಟ್ಟುಕೊಂಡದ್ದು ಆ ಹುಡುಗಿಯ ತಂದೆಯಲ್ಲಿ ಉದ್ದೀಪಿಸಿರುವ ಕ್ರೌರ್ಯ ಅಮಾನವೀಯವಾದದ್ದು. ಮಗಳ ಪ್ರಾಣಕ್ಕಿಂತ ಜಾತಿಯೇ ಮುಖ್ಯ ಎಂಬ ಅಮಾನುಷ ಧೋರಣೆಯು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿತಾರತಮ್ಯ, ಜಾತಿದ್ವೇಷವನ್ನು ಎತ್ತಿ ತೋರಿಸುತ್ತದೆ.

ಈ ಹೊತ್ತಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನಾವು, ಕೊಲೆಗಡುಕ ಅಪ್ಪ ಮತ್ತು ಅವನಿಗೆ ಕುಮ್ಮಕ್ಕು ಕೊಟ್ಟವರ ಮೇಲೆ ಯಾವುದೇ ಒತ್ತಡಗಳಿಗೆ ಮಣಿಯದೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು; ಈ ಆಘಾತದಿಂದ ಚೇತರಿಸಿಕೊಳ್ಳಲು ದಲಿತ ಹುಡುಗ ಮತ್ತವನ ಕುಟುಂಬಕ್ಕೆ ಎಲ್ಲ ರೀತಿಯ ಬೆಂಬಲ ಕೊಡಬೇಕು; ಇಂತಹ ಕ್ರೌರ್ಯ ಮತ್ತೆ ಮತ್ತೆ ನಡೆಯದಂತೆ ಜಾತ್ಯತೀತ ಮನೋಭಾವ, ಲಿಂಗಸಮಾನತೆಯ ಜಾಗೃತಿಯನ್ನು ಶಾಲಾಕಾಲೇಜುಗಳಲ್ಲಿ ಮೂಡಿಸುವಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.

ಇದನ್ನೂ ಓದಿ ಧಾರವಾಡ | ಮರ್ಯಾದಾ ಹತ್ಯೆ ಪ್ರಕರಣ; ಸೂಕ್ತ ಕ್ರಮಕ್ಕೆ ಎಐಎಮ್ಎಸ್ಎಸ್ ಆಗ್ರಹ

ಪ್ರತಿಭಟನೆಯಲ್ಲಿ ಒಂಟಿ ಮಹಿಳೆಯರ ಸಂಘದ ಜಿಲ್ಲಾಧ್ಯಕ್ಷೆ ಮಂಜುಳಾ ಪವಾರ, ಪ್ರಮಿಳಾ ಜಕ್ಕಣ್ಣವರ, ಬಿ.ಎನ್. ಪೂಜಾರಿ, ಲಿನೆಟ್ ಡಿಸೇಲ್ವ, ಸುಹಾಸಿನಿ, ಎ.ಎಂ. ಖಾನ್, ಎಚ್.ಜಿ. ದೇಸಾಯಿ, ಸಂಗೀತಾ ಗೌಡ, ಗುರುಸಿದ್ದಪ್ಪ ಅಂಬಿಗೇರ, ರಾಘವೇಂದ್ರ ಪಾಟೀಲ, ಪರಶುರಾಮ ಮಂದಾರ, ಶ್ರೀನಿವಾಸ ನಾಯಕ, ಸರ್ವೇಶ ಕಂಬದಾಳ ಮುಂತಾದವರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ, ನಾಲ್ವರಿಗೆ ಗಾಯ

ಮಂಗಳೂರಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿಯ ತಡೆಗೋಡೆ ಕುಸಿದು...

ಯಾದಗಿರಿ | ಯಕ್ಷಿಂತಿ ಗ್ರಾಮಕ್ಕೆ ಮೂಲಸೌಲಭ್ಯ ನೀಡಿ: ಪ್ರಜಾಸೇವಾ ಅಭಿಯಾನದಲ್ಲಿ ಗ್ರಾಮಸ್ಥರ ಮನವಿ

ವಡಗೇರಾ ತಾಲ್ಲೂಕಿನ ಹಯ್ಯಾಳ ಬಿ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ...

ಯಾದಗಿರಿ | ಜನಜಾಗೃತಿ ಸಮಾವೇಶ: ಮಲ್ಲಣ್ಣ ದಾಸನಕೇರಿ ಅಧ್ಯಕ್ಷರಾಗಿ ನೇಮಕ

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಿರುವ ಮಾದಿಗರ ಜನಜಾಗೃತಿ...

ಯಾದಗಿರಿ | ಪ್ರಜಾಸೇವಾ ಅಭಿಯಾನ: ದೂರುಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಖಡಕ್ ಸೂಚನೆ

ಶಹಾಪುರ ಹಾಗೂ ಗೋಗಿ ಹೋಬಳಿ ವ್ಯಾಪ್ತಿಯ ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾದ ದೂರುಗಳ...