ಧಾರವಾಡ | ಉದ್ಯೋಗಾಕಾಂಕ್ಷಿಗಳಿಗೆ ಪೊಲೀಸ್ ಇಲಾಖೆಯಿಂದ ವಿಶೇಷ ತರಬೇತಿ

Date:

ಉದ್ಯೋಗಾಕಾಂಕ್ಷಿಗಳಿಗೆ ಟಾಪ್ 10 ಪ್ರಶಿಕ್ಷಣಾರ್ಥಿಗಳ ಮೂಲಕ ವಿಶೇಷ ತರಬೇತಿ ನೀಡಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯಿಂದ ನಿರ್ಧರಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ 10 ಶಾಲಾ- ಕಾಲೇಜುಗಳಲ್ಲಿ 5 ದಿನಗಳ ಕಾಲ ಉಚಿತ ಕಾರ್ಯಗಾರವನ್ನು ಹಮ್ಮಿಕೊಂಡಿದ್ದಾರೆ.

- Advertisement -

ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಅವಳಿನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಇದೀಗ ಬೆಳಗಾವಿಯಲ್ಲಿ ಅಧಿವೇಶನ ನಡೆದಿದೆ. ಈ ಅಧಿವೇಶನಕ್ಕೆ ಹಲವಾರು ಕಡೆಗಳಿಂದ ಪಿಎಸ್​ಐ ಪ್ರಶಿಕ್ಷಣಾರ್ಥಿಗಳು ಬಂದಿದ್ಧಾರೆ. ಇದೇ ವೇಳೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳಿಗಾಗಿ ವಿಶೇಷ ಕೋಚಿಂಗ್ ನೀಡಲು ನಿರ್ಧರಿಸಲಾಗಿದೆ. ನಗರದ ಹತ್ತು ಕಾಲೇಜು ಹಾಗೂ ಕೋಚಿಂಗ್ ಸೆಂಟರ್​ಗಳಲ್ಲಿ ಇಂದಿನಿಂದಲೇ ತರಬೇತಿ ಆರಂಭವಾಗಿದೆ. ಈಗಾಗಲೇ 2 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಧಾರವಾಡದ ಕೆ. ಸಿ.ಡಿ ಕಾಲೇಜು, ಗುರುಕುಲ ಪಿ.ಯು ಕಾಲೇಜು, ವೈದ್ಯಮಠ ಕಾಂಪ್ಲೆಕ್ಸ್, ಗುರುದೇವ ಪಿ.ಯು. ಕಾಲೇಜು, ಪೂರ್ಣ ಪಿ.ಯು ಕಾಲೇಜು, ಪಾವಟೆನಗರದ ಕೆ.ಯು.ಡಿ ಕಾಲೇಜು, ಪ್ರಿಸಂ ಪಿ.ಯು ಕಾಲೇಜು, ಹಳಿಯಾಳನಾಕ ಸೃಷ್ಟಿ ಪಿ.ಯು ಕಾಲೇಜು, ಕ್ಲಾಸಿಕ್ ಪಿಯು/ಡಿಗ್ರಿ ಕಾಲೇಜು, ಭಾರತಿ ನಗರದ ಮದೀನಾ ಕಾಲೇಜು, ಸಿದ್ಧರಾಮೇಶ್ವರ ಕಾಲೇಜು ಒಟ್ಟು 10 ಶಾಲಾ-ಕಾಲೇಜುಗಳಲ್ಲಿ ಡಿ. 15 ಸೋಮವಾರ ಬೆಳಿಗ್ಗೆ 6:00 ಗಂಟೆಯಿಂದ 10:00 ಗಂಟೆವರೆಗೆ ನೋಂದಣಿ ಇರುತ್ತದೆ. ನೋಂದಣಿ ಮಾಡಿಕೊಂಡವರು ಮಾತ್ರ ಕಾರ್ಯಗಾರದಲ್ಲಿ ಪಾಲ್ಗೊಳ್ಳಬಹುದು. ಸೋಮವಾರದಿಂದ ಸಾಯಂಕಾಲ 4:00 ಗಂಟೆಯಿಂದ 8 ಗಂಟೆಯವರೆಗೆ ಕಾರ್ಯಗಾರ ಪ್ರಾರಂಭವಾಗಲಿದ್ದು, ನಂತರ ಪ್ರತಿದಿನ ಬೆಳಿಗ್ಗೆ 6 ರಿಂದ 10, ಸಾಯಂಕಾಲ 4 ರಿಂದ 8 ಗಂಟೆಯವರೆಗೆ ಕಾರ್ಯಗಾರ ನಡೆಯಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ ಧಾರವಾಡ | ಗಾಂಜಾ ಮಾರಾಟ; ನಾಲ್ವರ ಬಂಧನ

ಪರಿಸರ ಮತ್ತು ಪರಿಸರ ವಿಜ್ಞಾನ ವಿಷಯದ ಕುರಿತು ಅಂದಪ್ಪ ಬಳಿಗಾರ, ಭೂಗೋಳಶಾಸ್ತ್ರ-ಮಾಲಾಶ್ರೀ ಜಾಧವ್, ಇತಿಹಾಸ-ಜಯಲಕ್ಷ್ಮಿ, ಪ್ರಚಲಿತ ವಿದ್ಯಮಾನಗಳು-ಅನಿಲ್‌ ಕುಮಾರ್, ಅರ್ಥಶಾಸ್ತ್ರ-ಎಮ್.ಡಿ. ಅಜರುದ್ದೀನ್, ನೀತಿ-ಪ್ರಶಾಂತ ಗೌಡ, ಸ್ಟಾಟಿಕ್ ಜಿಕೆ-ಕುಲದೀಪ್ ಕುಮಾರ್, ವಿಜ್ಞಾನ ಮತ್ತು ತಂತ್ರಜ್ಞಾನ-ಪ್ರದೀಪ್ ತೋಟಗೇ‌ರ್, ಅನುವಾದ ಮತ್ತು ನಿಖರತೆ, ಬರವಣಿಗೆ-ಸಂತೋಷ ಧೂಳಖೇಡ, ಪ್ರಬಂಧ-ನಂದಿನಿ ಕೆ.ಎಮ್. ಕಾರ್ಯಗಾರದಲ್ಲಿ ವಿಷಯವಾರು ಸಂವಾದ ನಡೆಸುವ ಅಧಿಕಾರಿಗಳು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಮುಳುಗಡೆ ಸಂತ್ರಸ್ತರಿಗೆ 151 ಇ-ಖಾತಾ, ಹಕ್ಕುಪತ್ರ ವಿತರಣೆ

ಮುಳುಗಡೆ ಸಂತ್ರಸ್ತರಿಗೆ ಅಗತ್ಯ ದಾಖಲೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ...

ಬಾಗೇಪಲ್ಲಿ | ಗಡಿ ಗ್ರಾಮಗಳಿಗೆ ಹೆಚ್ಚಿನ ಸರ್ಕಾರಿ ಬಸ್‌ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯ

ತಾಲೂಕಿನ ಮಾಡಪ್ಪಲ್ಲಿ ಗಡಿ ಗ್ರಾಮಗಳಿಗೆ ಹೆಚ್ಚಿನ ಸರ್ಕಾರಿ ಬಸ್‌ ಕಲ್ಪಿಸುವಂತೆ ಇಲ್ಲಿನ...

ರಾಯಚೂರು | ಹಳ್ಳಿ ಜನರನ್ನು ಅವಮಾನಿಸಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚನೆಗೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆ

ಹಳ್ಳಿಯ ಜನರನ್ನು ಗುಗ್ಗು ಹಾಗೂ 'ವಿಲೇಜ್ ಈಡಿಯಟ್ಸ್' ಎಂದು ಅವಹೇಳನಕಾರಿಯಾಗಿ ಮಾತನಾಡಿದ...

ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

ಎಡಿಬಿ (ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್) ಜತೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದ...