ದಾವಣಗೆರೆ | ಕರವೇಯಿಂದ ಮಧ್ಯಮ ವರ್ಗದ ಧ್ವನಿ ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ.

Date:

ದಾವಣಗೆರೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ)ಯ ಜಿಲ್ಲಾ ಘಟಕದಿಂದ ಭಾನುವಾರವಷ್ಟೇ ಅಗಲಿದ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಚಿರಶಾಂತಿ ಸಿಗಲೆಂದು ದಾವಣಗೆರೆ ಜಿಲ್ಲಾ ಘಟಕದಿಂದ ಡಾ. ಮೋದಿ ವೃತ್ತದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪೂಜಿಸಿ ಪುಷ್ಪ ನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ “ಶಾಮನೂರು ಶಿವಶಂಕರಪ್ಪ ಮಧ್ಯಮ ವರ್ಗದ ಧ್ವನಿ” ಎಂದು ಕೆಲವೇ ಅಧ್ಯಕ್ಷ ರಾಮೇಗೌಡ ಬಣ್ಣಿಸಿದರು.

- Advertisement -

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಮನ ಸಲ್ಲಿಸಿ ಕರವೇ ಜಿಲ್ಲಾ ಅಧ್ಯಕ್ಷರಾದ ರಾಮೇಗೌಡ ಮಾತನಾಡಿ “ಮಧ್ಯಮ ವರ್ಗದ ಧ್ವನಿಯಾಗಿ ನಿಂತವರು ಶಾಮನೂರು ಶಿವಶಂಕರಪ್ಪನವರು. ದಾವಣಗೆರೆಗೆ ಶೈಕ್ಷಣಿಕವಾಗಿ ಜ್ಞಾನಕಾಶಿ ಎಂಬ ಬಿರುದು ಬರಲು ಶಿವಶಂಕರಪ್ಪ ಅವರೇ ಕಾರಣ. ಇಂಥಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿರುವುದು ದಾವಣಗೆರೆಗೆ ತುಂಬಲಾಗದ ನಷ್ಟ. ಪಾದಚಾರಿ ವ್ಯಾಪಾರಿಗಳಿಗೆ ವ್ಯವಸ್ಥಿತವಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಶಾಮನೂರು ಶಿವಶಂಕರಪ್ಪ ಅವರಿಗೆ ವಿನಂತಿಸಿದಾಗ ಕಳೆದ 20 ವರ್ಷಗಳಿಂದ ಒದಗಿಸಿ ಕೊಡದಿದ್ದನ್ನು, ಶಾಮನೂರು ಶಿವಶಂಕರಪ್ಪ ಅವರು ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ತಿಳಿಸಿ ಅವರ ಪರಿಶ್ರಮದಿಂದ ಪುಟ್ಬಾತ್ ವ್ಯಾಪಾರಿಗಳಿಗೆ ಸರ್ಕಾರದ ವತಿಯಿಂದ ಆಹಾರ ಘಟಕವನ್ನು ನಿರ್ಮಿಸಿ ಕೊಡುವಲ್ಲಿ ಶಿವಶಂಕರಪ್ಪ ಅವರ ಪಾತ್ರ ಬಹಳ ಪ್ರಮುಖವಾಗಿತ್ತು” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...
1003308897

“ಎಷ್ಟೋ ಕಡು ಬಡವ ವಿದ್ಯಾರ್ಥಿಗಳಿಗೆ ಮತ್ತು ಪತ್ರಕರ್ತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವಂತ ಕೆಲಸ ಮತ್ತು ದಾವಣಗೆರೆ, ರಾಜ್ಯ, ಹೊರ ರಾಜ್ಯದ ದೇವಸ್ಥಾನಗಳಿಗೆ ಅಭಿವೃದ್ಧಿಗೆ ಹಣ ನೀಡಿರುವುದರ ಮೂಲಕ ಶಿವಶಂಕರಪ್ಪ ಅವರು ಕೊಡುಗೆ ದಾನಿಯಾಗಿದ್ದರು. ಜನತೆಗೆ ಕಣ್ಣ ಮುಂದೆ ಕಾಣುವಂತೆ ಶಿವಶಂಕರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇಂಥ ಮಹಾನ್ ವ್ಯಕ್ತಿ ನಗರದಲ್ಲಿ ಮತ್ತೊಬ್ಬ ಹುಟ್ಟುವುದು ಸಾದ್ಯವಿಲ್ಲ” ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು ಎಂಬಂತಿದ್ದ ಶಾಮನೂರು ಶಿವಶಂಕರಪ್ಪ ನಿಧನ

ಇಂದು ಸಂಜೆ ಡಾ. ಮೋದಿ ವೃತ್ತದಲ್ಲಿರುವ ಕರವೇ ಫುಡ್ ಕೋರ್ಟ್ ನ ಎಲ್ಲಾ ಹೋಟೆಲುಗಳನ್ನು ಬಂದ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಬಸಮ್ಮ, ಮಂಜುಳಾ ಗಣೇಶ್, ಸಲ್ಮಾಭಾನು, ಸಾಕಮ್ಮ ಬಾಯಿ, ಮಂಜುಳಮ್ಮ, ಜಿಲ್ಲಾ ಉಪಾಧ್ಯಕ್ಷರಾದ ಮಂಜುಶ್ರೀ ಗೌಡ, ಗಿರೀಶ್ ಕುಮಾರ್, ಗೋಪಾಲ್ ದೇವರ ಮನೆ, ಓ ಮಹೇಶ್ವರಪ್ಪ, ಸುರೇಶ್, ಚಂದ್ರು, ತುಳಸಿರಾಮ್, ಬಸವರಾಜ್, ಸಂಜು, ನಾಗರಾಜ್, ಭಾಷಾ, ದಾದಾಪೀರ್, ಅಕ್ಷಯ್, ಕಾರ್ತಿ, ರಮೇಶ್, ಸಾಗರ್, ನಾಗರಾಜ್, ಕರಿಬಸಪ್ಪ , ಸಂಜು, ಮತ್ತಿತರರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSSಗೆ ಅಪಾರ್ಟ್‌ಮೆಂಟ್ ಬಾಗಿಲು ತೆರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ: ಪಾರದರ್ಶಕತೆ ಪ್ರಶ್ನಿಸುವಂತೆ ಸಂಘಗಳಿಗೆ ಸಲಹೆ

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್‌ ಆಯೋಜಿಸಿದ್ದ ಸಭೆಗೆ ಗೃಹ ಸಚಿವ ಪ್ರಿಯಾಂಕ್...

ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್: ಮರು ಸೇರ್ಪಡೆಗೆ ಕೇವಲ 7.7 ಲಕ್ಷ ಅರ್ಜಿ

ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ...