ಗದಗ | ಮರ್ಯಾದೆ ಹತ್ಯೆ ಖಂಡಿಸಿ ಹೆದ್ದಾರಿ ತಡೆದು ದಲಿತಪರ ಸಂಘಟನೆಗಳು ಪ್ರತಿಭಟನೆ

Date:

ಇನಾಮ್ ವೀರಾಪುರ ಗ್ರಾಮದಲ್ಲಿ ದಲಿತ ಯುವಕ ವಿವೇಕಾನಂದ ಹರಿಜನ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿ ಗರ್ಭಿಣಿಯಾದ ಮಾನ್ಯ ಪಾಟೀಲ ಯುವತಿಯ ಮರ್ಯಾದೆ ಹತ್ಯೆ ಖಂಡಿಸಿ, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ವಿವಿಧ ಜನಪರ ಸಂಘಟನೆಗಳ ಒಕ್ಕೂಟದಿಂದ ಶಿವಾಜಿ ವೃತ್ತದಲ್ಲಿ ಹುಬ್ಬಳ್ಳಿ- ಸೊಲ್ಲಾಪುರ್ ರಾಷ್ಟ್ರಿಯ ಹೆದ್ದಾರಿ ತಡೆದು   ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. 

- Advertisement -

ಪ್ರತಿಭಟನೆಯಲ್ಲಿ ದಲಿತ ಮುಖಂಡರು ಮತ್ತು ವಸಂತ ಜೋಗಣ್ಣವರ ಮಾತನಾಡಿ, “ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ತುಂಬಾ ಇದೆ. ಇಂತಹ ಮರ್ಯಾದೆ ಹತ್ಯೆಯನ್ನು ಖಂಡಿಸಲು ಕಾನೂನನ್ನು ಗಟ್ಟಿಗೊಳಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಡಿಎಸ್ಎಸ್ ತಾಲ್ಲೂಕು ಸಂಚಾಲಕರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ಜಾತಿ ಇಲ್ಲ, ಜಾತಿ ಬೇಡ, ಜಾತಿಯಿಂದ ಆಚೆ ಬನ್ನಿ ಹೀಗೆ ಬೇರೆ ವರ್ಗದವರು ಮತ್ತು ಇತ್ತೀಚೆಗೆ ನಮ್ಮವರು ಹೇಳುವುದು ಸಾಮಾನ್ಯವಾಗಿದೆ. ಆದರೆ ಅದನ್ನು ಯಾರು ಪಾಲಿಸುತ್ತಿಲ್ಲ. ತಂದೆಯೇ ತನ್ನ ಸ್ವಂತ ಮಗಳನ್ನೇ ಕೊಲೆ ಮಾಡುವಂತಹ ಮನಸ್ಥಿತಿಯನ್ನು ಪ್ರೇರೇಪಿಸಿದ್ದು ಜಾತಿಯಲ್ಲವೇ? ಈ ಜಾತಿಗಳ ಮೂಲ ಬೇರು ವರ್ಣಾಶ್ರಮದ ಆಚರಣೆಯಲ್ಲವೇ? ಮಗಳನ್ನು ಕೊಂದ ತಂದೆಯ ಜಾತಿಯವರು ಇದರಿಂದ ನೊಂದುಕೊಂಡಿದ್ದಾರೋ ಅಥವಾ ಖುಷಿಯಾಗಿದ್ದರೋ ಗೊತ್ತಿಲ್ಲ. ಆದರೆ ನಮಗಂತೂ ಪ್ರಪಂಚವನ್ನೇ ಕಾಣದ ಪುಟ್ಟ ಮಗುವಿನ ಗರ್ಭಿಣಿಯನ್ನು ಸಾಯಿಸಿದ್ದು ಹೇಯ ಕೃತ್ಯ ಅನ್ನಿಸಿದೆ” ಎಂದು ಆಕ್ರೋಶ ವ್ಯಕ್ತಪಡಸಿದರು. 

ಯುವ ಹೋರಾಟಗಾರರು ವಿಜಯ ಛಲವಾದಿ ಮಾತನಾಡಿ, “ದಲಿತ ಸಮುದಾಯದವರ ಜೊತೆ ಸಂಬಂಧ ಮಾಡಿಕೊಂಡರೆ ಈ ತರಹ ವಿಕೃತ ಹಂತಕ್ಕೆ ಯೋಚಿಸುತ್ತಾರೆಂಬ ನೋವು ಕಾಡುತ್ತದೆ. ಇಂತಹ ಘಟನೆಗಳು ನಿಲ್ಲಬೇಕು. ಇಲ್ಲದಿದ್ದರೇ ಮನುಕುಲಕ್ಕೆ ಅವಮಾನ” ಎಂದು ವಿಷಾದ ವ್ಯಕ್ತಪಡಿಸಿದರು.

ದಲಿತ ಯುವ ಮುಖಂಡರು ಗುರುನಾಥ ಕೆಂಗಾರಕರ ಮಾತನಾಡಿ, “ಬುದ್ಧ ಬಸವ ಅಂಬೇಡ್ಕರ್ ಅವರು ಸಮಾನತೆಗೆ ಹೋರಾಡಿದ ನಾಯಕರು. ಅವರ ನಾಡಲ್ಲಿ ಈ ರೀತಿಯ ವಿಕೃತಿ ಅವರ ಆಶಯ ತತ್ವಗಳಿಗೆ  ವಿರುದ್ಧವಾಗಿದೆ. ಇಂತಹ ಮನ ಕಲಕುವ ಘಟನೆಯನ್ನು ಮಾಡಿದ ಆರೋಪಿಗಳನ್ನು ಮರಣದಂಡೆಗೆ ವಿಧಿಸಬೇಕು” ಎಂದು ಸರಕಾರಕ್ಕೆ ಒತ್ತಾಯ ಮಾಡಿದರು

ಪ್ರತಿಭಟನೆಯಲ್ಲಿ ಎಫ್ ವೈ ದೊಡ್ಡಮನಿ, ಡಾ. ಮುತ್ತು ಸುರಕೋಡ ಮಾತನಾಡಿದರು. ಪ್ರತಿಭಟನೆಯಲ್ಲಿ ಯಶವಂತ್ ಚಲವಾದಿ, ದುರಗಪ್ಪ ಜೋಗಣ್ಣವರ, ಸಣ್ಣದುರ್ಗಪ್ಪ ದಂಡಾಪುರ, ಪುನೀತ ಜೋಗಣ್ಣವರ, ವಿಕ್ರಂ ಹೊನ್ನಕೇರಿ, ಪ್ರಶಾಂತ್ ತಡಸಿ, ಕಿರಣ ಜೋಗಣ್ಣವರ, ನಬಿಸಬಾ ಕಿಲ್ಲದಾರ, ವಿಜಯ್ ಬಡಿಗೇರ, ಶರಣು ಛಲವಾದಿ, ಖಾಜು ಕಿಲ್ಲದಾರ್, ನವೀನ್ ಜೋಗನ್ನವರ, ಮಾಂತೇಶ ಪೂಜಾರ, ಸಿದ್ದು ಕೆಲಗೇರಿ, ಮುತ್ತು ಪೂಜಾರ, ಪ್ರವೀಣ ಬಾಂಗಿ,ರವಿ ಚಿಂತಾಲ್, ಹಸನ ಮೇಸ್ತ್ರಿ, ಶ್ರೀಕಾಂತ ಜೋಗಣ್ಣವರ, ಅರ್ಜುನ ಮಾದರ ಇನ್ನೂ ಅನೇಕರು ಉಪಸ್ಥಿತರಿದ್ದರು

ವರದಿ: ಗುರುನಾಥ ಬ ಕೆಂಗಾರಕರ, ಸಿಟಿಜನ್ ಜರ್ನಲಿಸ್ಟ್ ನರಗುಂದ

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...