“ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಎನ್.ಟಿ.ಎ ರದ್ದುಪಡಿಸಲು ಆಗ್ರಹಿಸಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಹೋರಾಟ ನಡೆಸಿದ್ದರು. ವಿದ್ಯಾರ್ಥಿಗಳ ಹೋರಾಟಕ್ಕೆ ಮನಿದ ಮೋದಿ ಸರ್ಕಾರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಿಡಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ಸಿಕ್ಕ ಜಯ ಎಂದು ಮುಖಂಡರು ಪ್ರತಿಕ್ರಿಯೆ ನೋಡಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಕೆ.ಕೆ. ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ರಾತ್ರಿ ಎಚ್ಚರವಿರಿ, ದೇಶವನ್ನು ಎಚ್ಚರಿಸಿ ಘೋಷಣೆಯೊಂದಿಗೆ ನೂರಾರು ವಿದ್ಯಾರ್ಥಿಗಳು ಪಂಜಿನ ಮೆರವಣಿಗೆ ಮಾಡಿದರು.
ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರು ಚಂದ್ರು ರಾಠೋಡ ಮಾತನಾಡಿ, “ಕೇಂದ್ರದ ಮೋದಿ ಸರ್ಕಾರ ತನ್ನ ಸುದೀರ್ಘ ಆಡಳಿತ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆಮಾಡುತ್ತಾ ಬಂದಿದೆ. ನೀಟ್ ಪ್ರಶ್ನೆ ಪತ್ರಕೆ ಸೋರಿಕೆ ಖಂಡಿಸಿ, ಧರ್ಮೇಂದ್ರ ಪ್ರಧಾನ್ ರಾಜೀನಮೆ ಕೊಡಬೇಕೆಂದು ಎಡ ಪಂಥಿಯ ವಿದ್ಯಾರ್ಥಿ ಸಂಘಟನೆಗಳು ಜಂತರ್ ಮಂತರ್ ಸೇರಿದಂತೆ ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆ ಮಾಡಿದರು. ಇದರ ಫಲವಾಗಿ ಕೇಂದ್ರ ಶಿಕ್ಷ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಿಕ್ಕ ಜಯ” ಎಂದು ಹೇಳಿದ್ದಾರೆ.
ನಂತರ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರು ಎಮ್ ಎಸ್ ಹಡಪದ ಮಾತನಾಡಿ, “ದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೆಲಸ ಮಾಡಬೇಕು. ಬದಲಾಗಿ ಆರ್ ಎಸ್ ಎಸ್ ಎಜೆಂಟರಾಗಿ ಕೆಲಸ ಮಾಡಬಾರದು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಎಲ್ಲ ವಿದ್ಯಾರ್ಥಿಗಳ ಚಳುವಳಿಗೆ ಸಿಕ್ಕ ಯಶಸ್ಸು” ಎಂದು ಹೇಳಿದರು.
ನಂತರ ಎಸ್ ಎಫ್ ಐ ಮಾಜಿ ಜಿಲ್ಲಾ ಅಧ್ಯಕ್ಷರಾದ ಪೀರು ರಾಠೋಡ, ಅನಿಲ್ ಆರ್ ಮಾತನಾಡಿದರು. ಮುಹಮ್ಮದ್ ಇರ್ಷಾನ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶರಣು ಮಾಟರಂಗಿ, ಮಹಾಂತೇಶ ಪೂಜಾರಿ, ಶಿವಬಸಯ್ಯ, ವಿನಾಯಕ, ಗುರುಕೀರಣ್, ಪ್ರವಿಣ್, ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಮಿಕ ಮುಖಂಡರಾದ ಮೆಹಬೂಬ್ ಹವಾಲ್ದಾರ್, ಕನಕರಾಯ ಹಾದಿಮನಿ, ರೇಣಪ್ಪ , ಆನಂದ, ತುಕಾರಾಮ, ಚನ್ನಪ್ಪ , ಭಾಗವಹಿಸಿದ್ದರು.





