ಅಲ್ಲಮನ ಅನನ್ಯ ಪದಪ್ರಯೋಗಗಳು | ಬಾಯ ಬಗದಳ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಬಾಯ ಬಗದಳ
ಕಂಕುಳೆಂಬುದು ಕವುಚಿನ ತವರುಮನೆ
ಕರಸ್ಥಲವೆಂಬುದು ಕೈಕೆಟ್ಟ ಹುಣ್ಣು
ಅಮಳೋಕ್ಯವೆಂಬುದು ಬಾಯ ಬಗದಳ
ಅಂಗಸೋಂಕೆಂಬುದು ಪಾಪದ ತವರುಮನೆ
ಉತ್ತಮಾಂಗವೆಂಬುದು ನೆತ್ತಿಯ ಮೃತ್ಯು
ಕಂಠವೆಂಬುದು ಗಂಟಲ ಗಾಣ
ಮತ್ತೆ,
ಗುಹೇಶ್ವರನ ಮಾತು ನಿಮಗೇಕೆಲವೊ?

- Advertisement -

ಪದಾರ್ಥ:
ಕವುಚು  =  ಬಟ್ಟೆಯ ಗಂಟು
ಅಮಳೋಕ್ಯ  = ದೇಹವೇ ದೇವರೆಂಬ ಭಾವ
ಬಗದಳ =  ಹುಣ್ಣು
ಉತ್ತಮಾಂಗ  = ಶಿರಸ್ಸು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ವಚನಾರ್ಥ:
ಕಂಕುಳು, ಕೈ, ಮುಖ, ಎದೆ, ಶಿರಸ್ಸು ಹಾಗೂ ಕುತ್ತಿಗೆ ಇವೆಲ್ಲ ಲಿಂಗವನ್ನು ಧರಿಸಿಕೊಳ್ಳುವ ದೇಹ ಭಾಗಗಳು. ಶರಣನು ತನ್ನ ದೇಹದ ಯಾವ ಭಾಗದಲ್ಲಿ ಲಿಂಗವನ್ನು ಧರಿಸಿಕೊಳ್ಳುತ್ತಾನೆ ಎಂಬುದು ಮುಖ್ಯವಲ್ಲ. ಲಿಂಗಧಾರಣೆಯ ಉದ್ದೇಶವೇನೆಂದರೆ ಲಿಂಗಕ್ಕೂ ಅಂಗಕ್ಕೂ ಸದಾ ಭೌತಿಕ ಸ್ಪರ್ಶವಾಗುತ್ತಿದ್ದರೆ ಆ ಸ್ಪರ್ಶದ ದೆಸೆಯಿಂದ ಮನಸ್ಸಿನಲ್ಲಿ ದೈವಪ್ರಜ್ಞೆ ಯಾವಾಗಲೂ ಜಾಗೃತವಾಗಿರುತ್ತದೆ ಎಂಬುದು. ಅಂತರಂಗದಲ್ಲಿ ದೈವಪ್ರಜ್ಞೆ ಇಲ್ಲದವನು ದೇಹದ ಯಾವ ಭಾಗದಲ್ಲಿ ಲಿಂಗವನ್ನು ಧರಿಸಿದರೂ ಅದರಿಂದ ಪ್ರಯೋಜನವಿಲ್ಲ. ಕಂಕುಳಲ್ಲಿ ಕಟ್ಟಿಕೊಂಡ ಲಿಂಗವು ಬಟ್ಟೆಯ ಗಂಟನ್ನು ಕಂಕುಳಲ್ಲಿ ಇರಿಸಿಕೊಂಡಂತೆ. ಕೈಮೇಲಿಟ್ಟುಕೊಂಡ ಲಿಂಗ ಅಂಗೈ ಹುಣ್ಣಿನಂತೆ. ಅಮಳೋಕ್ಯ ಎಂದರೆ ದೇಹವನ್ನೇ ದೇವರ ರೂಪವೆಂದು ಭಾವಿಸಿ, ಶರಣನು ದೇಹದೊಳಗೆ ಶಿವಲಿಂಗವನ್ನು ನಿಲ್ಲಿಸಿ ಭಕ್ತಿ ಮಾಡುವ ಒಂದು ವಿಶಿಷ್ಟ ಸ್ಥಿತಿ. ಇಂತಹ ವಿಶಿಷ್ಟ ಸ್ಥಿತಿ ಅಮಳೋಕ್ಯವೂ ಬಾಯ ಬಗದಳ ಅಂದರೆ ಬಾಯಿ ಹುಣ್ಣು ಅಷ್ಟೇ. ಸದಾ ಅಂಗಕ್ಕೆ ಅಂಟಿಸಿ ಕಟ್ಟಿಕೊಂಡಿರುವ ಲಿಂಗ ಚರ್ಮ ಸಂಬಂದಿ ಸೋಂಕಿಗೆ ಕಾರಣವಾಗಬಹುದು. ತಲೆಮುಡಿಯಲ್ಲಿ ಹೊತ್ತು ಕಟ್ಟಿದ ಲಿಂಗ ಶಿರೋಭಾರವಾದೀತು. ಕುತ್ತಿಗೆಗೆ ಸುತ್ತಿದ ಲಿಂಗ ಗಂಟಲಿಗೆ ಉರುಳಾದೀತು. ಹೀಗೆ ತೋರಿಕೆಗೆ ಲಿಂಗಧಾರಣೆ ಮಾಡುವವರಿಗೆ ಗುಹೇಶ್ವರನ ವಿಚಾರ ಯಾಕೆ ಬೇಕು ಎಂಬುದು ಅಲ್ಲಮನ ಪ್ರಶ್ನೆ.

ಪದ ಪ್ರಯೋಗಾರ್ಥ:
ಅಮಳೋಕ್ಯವೆಂಬುದು ಬಾಯ ಬಗದಳ. ಅಮಳೋಕ್ಯ ಅಂದರೆ ಒಂದು ಭಾವನೆ. ದೇಹವನ್ನೇ ದೇವರ ರೂಪವೆಂದು ಭಾವಿಸಿ, ಶರಣನು ದೇಹದೊಳಗೆ ಲಿಂಗವನ್ನು ಅಂತರ್ಗತಗೊಳಿಸಿಕೊಳ್ಳುವ ವಿಶಿಷ್ಟ ಭಾವವೇ ಅಮಳೋಕ್ಯ. ಅಂತರಂಗದಲ್ಲಿ ದೈವಪ್ರಜ್ಞೆ ಇಲ್ಲದೆ ಅಮಳೋಕ್ಯವೆಂಬ ಬಾಯುಪಚಾರ ಮಾಡುವವನಿಗೆ ಬಾಯೊಳಗೆ ಬಗದಳ ಅಂದರೆ ಹುಣ್ಣು ಆದೀತು ಎಂಬುದು ಅಲ್ಲಮನ ಎಚ್ಚರಿಕೆ. ಬಾಯಿ ಹುಣ್ಣು ಬಾಯೊಳಗೆ ಮತ್ತು ಒಸಡಿನ ಮೇಲೆ ಆಗುವ ಚಿಕ್ಕ ಚಿಕ್ಕ ಬೊಕ್ಕೆ. ಇದು ಕಾಯಿಲೆಯಲ್ಲ. ಚಿಕಿತ್ಸೆಯಿಲ್ಲದೆಯೂ ಒಂದೆರಡು ದಿನದಲ್ಲಿ ಗುಣವಾಗುತ್ತದೆ. ಆದರೆ ಊಟೋಪಹಾರದಲ್ಲಿ ತೊಂದರೆ ಕೊಡುತ್ತದೆ. ಇದನ್ನು ಅಲ್ಲಮ ಬಾಯ ಬಗದಳ ಎಂದು ಕರೆದಿದ್ದು ಇದು ಅಪರೂಪದ ಪದಪ್ರಯೋಗ. ಇದಲ್ಲದೆ ವಚನದ ಉದ್ದಕ್ಕೂ ಅನನ್ಯವಾದ ಪದಗಳ ಬಳಕೆ ಇದೆ. ಕವುಚು, ತವರುಮನೆ, ಅಮಳೋಕ್ಯ, ಅಂಗಸೋಂಕು, ಉತ್ತಮಾಂಗ, ನೆತ್ತಿಯ ಮೃತ್ಯು, ಗಂಟಲ ಗಾಣ ಇವೆಲ್ಲಾ ಶಕ್ತಿಶಾಲಿ ಪದಗಳು. ಬಗದಳ ಅತ್ಯಂತ ವಿಶಿಷ್ಟ ಪದವಾಗಿದ್ದು ವಿಶೇಷವಾದ ಕನ್ನಡ ನಿಘಂಟುಗಳಲ್ಲಿ ಮಾತ್ರ ಸಿಗುತ್ತದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ಡೊರೊಥಿ- ಸ್ವೀಕಾರದಾಚೆಗೆ, ಒಳಗೊಳ್ಳುವಿಕೆಯ ಕಡೆಗೆ…

ಇದೊಂದು ಪರಿಪೂರ್ಣ ಸಿನಿಮಾ ಅಲ್ಲ. ಕೆಲವು ತಿರುವುಗಳು ಸರಳವಾಗಿವೆ. ಕೆಲವು ಪಾತ್ರಗಳು...

ಅಲ್ಲಮನ ಅನನ್ಯ ಪದಪ್ರಯೋಗಗಳು | ತಂದೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಅವಳ ಕಣ್ಣೋಟ | ಲಿಪ್‌ಸ್ಟಿಕ್‌ನ ಬಣ್ಣದ ಕೆಳಗೆ ಹುದುಗಿದ ಕನಸುಗಳು

ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ...

ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…

ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವುದಕ್ಕಿಂತಲೂ...