ಶುದ್ಧ ಕುಡಿಯುವ ನೀರಿನ ಬೃಹತ್ ಪ್ರಮಾಣದ ಪೈಪ್ ಒಡೆದು ರಸ್ತೆಯ ಬದಿಯಲ್ಲಿ ಇಂದು ಅಪಾರ ವ್ಯರ್ಥವಾಗಿ ಹರಿಯುತ್ತಿರುವುದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಹಾಗೂ ಮೇವುಂಡಿ ಗ್ರಾಮಗಳ ಮಧ್ಯದ ರಸ್ತೆಯಲ್ಲಿ ಕಂಡುಬಂದಿದೆ.
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಿಂದ ಗದಗ, ಬೇಟಗೆರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಈ ಪೈಪ್ ಮೂಲಕ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.
ಸೋಮವಾರ ಮಧ್ಯಾಹ್ನ ಸುಮಾರು 12ಗಂಟೆಗೆ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಅಕ್ಕಪಕ್ಕದ ಜಮೀನುಗಳಿಗೆ ಹರಿಯತೊಡಗಿತು. ಅಕ್ಕಪಕ್ಕದ ರೈತರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ನೀರು ಸರಬರಾಜು ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಒಡೆದು ಹೋಗಿದ್ದ ಪೈಪ್ ದುರಸ್ತಿಗೊಳಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಹೆಣ್ಣಿನ ನೋವುಗಳು ಕವಿತೆಗಳಾಗುತ್ತವೆ: ಉರ್ದು ಲೇಖಕಿ ನಿಶತ್ ಜಮೀಲಾ
This video cannot be played in your browser. Open the video directly
ಇದರಿಂದಾಗಿ ವ್ಯರ್ಥವಾಗಿ ಹರಿಯಬಹುದಾಗಿದ್ದ ಅಪಾರ ಪ್ರಮಾಣದ ಶುದ್ಧ ಕುಡಿಯುವ ನೀರು ಉಳಿಯುವಂತಾಯಿತು. ಪೈಪ್ ಒಡೆದದ್ದರಿಂದ ಮೇ 18ರಂದು ಗದಗ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು ಎಂದು ತಿಳಿದುಬಂದಿದೆ.





