ಹುಬ್ಬಳ್ಳಿ | ಹೆಣ್ಣಿನ ನೋವುಗಳು ಕವಿತೆಗಳಾಗುತ್ತವೆ: ಉರ್ದು ಲೇಖಕಿ ನಿಶತ್ ಜಮೀಲಾ

Date:

ಸಾಹಿತ್ಯ ಅಭಿವ್ಯಕ್ತಿಯ ಮಾರ್ಗ ಆದ್ದರಿಂದ ಬರೆಯುತ್ತಲೇ ಇರಬೇಕು. ಬರಹ ಕಟ್ಟಿಕೊಡುವ ಕಲ್ಪನೆ ಸತ್ಯವನ್ನು ಹೊರಹಾಕುತ್ತದೆ ಅದು ಕೇವಲ ಕಲ್ಪಾನಕೃತಿ (ಫ್ಯಾಂಟಸಿ) ಅಲ್ಲ, ಅದು ವಾಸ್ತವದ ಒಂದು ಭಾಗ. ಎಂದು ಉರ್ದು ಲೇಖಕಿ ಹೋರಾಟಗಾರ್ತಿ ನಿಶತ್ ಜಮೀಲಾ ಹೇಳಿದರು.

- Advertisement -

ಹುಬ್ಬಳ್ಳಿ ಪಟ್ಟಣದ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ 12ನೇ ಮೇ ಸಾಹಿತ್ಯ ಮೇಳ ಎರಡನೇ ದಿನದ ಕವಿಗೋಷ್ಠಿಯಲ್ಲಿ ಮಾತಾನಾಡಿದ ಅವರು, “ಏಕೆ ಬರೆಯಬೇಕು ಎಂಬ ಪ್ರಶ್ನೆಯೊಂದಿಗೆಯೇ ನಾವು ನಿರಂತರ ಬರೆವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ನಾನು ಇದುವರೆಗೂ ಲೆಕ್ಕವಿರದಷ್ಟು ಕವನಗಳನ್ನು ಓದಿದ್ದೇನೆ. ಕಾವ್ಯ ಅಭಿವ್ಯಕ್ತಿಯ ಸಾಧನ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

“ನಾನು ಹೈದರಬಾದ್‌ನಲ್ಲಿ ಮಹಿಳೆಯರಿಗಾಗಿ ಒಂದು ಸಂಸ್ಥೆಯನ್ನು ಆರಂಭಿಸಿದೆ, ಅಲ್ಲಿ ಸಮುದಾಯದ ನಡುವೆ ನಡೆವ ಸಂಘರ್ಷಗಳಲ್ಲಿ ಮಹಿಳೆಯರು ಸತತ ದಬ್ಬಾಳಿಕೆಗೆ ಒಳಗಾಗುತ್ತಾರೆ. ಒಬ್ಬ ಹೆಣ್ಣಾಗಿ ಇತರೆ ಹೆಣ್ಣುಗಳ ನೋವನ್ನು ನಾನು ಸ್ವತಃ ಅನುಭಾವಿಸುತ್ತೇನೆ. ಈ ನೋವುಗಳೇ ಕವಿತೆಗಳಾಗುತ್ತವೆ, ಹಿಂಸಾಚಾರದ ವಿರುದ್ಧ ಮಹಿಳೆಯರ ಪ್ರತಿಭಟನೆ ಕವ್ವಾಲಿ ಹಾಡಾಗಿ ರೂಪ ಪಡೆದು ಹಾಡಾಗುತ್ತದೆ. ಸಾಂಸ್ಕೃತಿಕ ಅನುವಾದವು ಮಾತಿಲ್ಲದವರ ನೋವನ್ನು ವ್ಯಕ್ತಪಡಿಸುವ ಸಾಧನ, ಸಾಹಿತ್ಯ ಬಿತ್ತುವ ಇಂತಹ ವೈಚಾರಿಕ ಪ್ರಜ್ಞೆಯಿಂದ ಹೆಣ್ಣು ಬುರ್ಖಾ ಬಿಚ್ಚಿಟ್ಟು, ಕಂಪ್ಯೂಟರ್‌ ಕಲಿಯಲು ದಾರಿಯಾಯಿತು” ಎಂದು ಅಭಿಪ್ರಾಯಿಸಿದರು.

ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, “ಇಂದಿನ ಕವಿಗಳ ಕಾವ್ಯವಸ್ತು ಮತ್ತು ಅನುಭವ ಆಳ ಮತ್ತು ಸೂಕ್ಷ್ಮವಾಗಿದೆ, ಆದರೆ ಕಾಲಭಾಷೆ ಕಾಣುತ್ತಿಲ್ಲ, ಇದು ಕಾವ್ಯ ಪರಂಪರೆಯ ಮುಂದುವರಿಕೆಗೆ ದೊಡ್ಡ ತೊಡಕಾಗಿದೆ. ಇಂದಿನ ಕಾಲಭಾಷೆ ಪಕ್ವಗೊಳ್ಳಬೇಕಾದರೆ ಬಸವಣ್ಣ, ಸರ್ವಜ್ಞ, ಮುಂತಾದ ನೆಲಮೂಲ ಕವಿಗಳ ವಚನ/ಕವಿತೆಗಳ ಅಧ್ಯಯನ ಅವಶ್ಯ” ಎಂದರು.

ಎರಡನೇ ಕವಿಗೋಷ್ಠಿಯಲ್ಲಿ ಆರನಕಟ್ಟೆ ರಂಗನಾಥ, ದೀಪಾ ಗೋನಾಳ, ಸೂರ್ಯಕೀರ್ತಿ, ಬಿ.ವಿ ಸುನಿತಾ, ಕೆ.ಬಿ ವೀರಲಿಂಗನಗೌಡ್ರ, ಜಬೀವುಲ್ಲಾ ಅಸಾದ್, ನಾಗರಾಜ ಹರಪನಹಳ್ಳಿ , ಶಮೀಮ ಕುತ್ತಾರ್ ಕಾಸರಗೋಡು, ಸಿ.ಬಿ ಐನಳ್ಳಿ ಮರ್ಸಿ ಮಾರ್ಗರೆಟ್ ಹೈದರಾಬಾದ್, ಸದಾಶಿವ ಸೊರಟೂರು, ಎಂ.ಎಂ ಮುಲ್ತಾನಿ, ಅಶೋಕ ಹೊಸಮನಿ, ಶಿಲ್ಪಾ ಮ್ಯಾಗೇರಿ, ಮಧು ಕಾರಗಿ ಕವಿತೆಗಳನ್ನು ವಾಚಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...

ಬಾಗಲಕೋಟೆ | ಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್‌ನಿಂದ ಸ್ವಚ್ಛತಾ ಅಭಿಯಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...