ಗದಗ | ಪ್ರಧಾನ ಮಂತ್ರಿ ಹೇಳಿಕೆ: ದೇಶದ ಬಡಜನರ ಮೇಲೆ ಆರ್ಥಿಕ ಹೊರೆ ಹಾಕುವ ಕುತಂತ್ರ; ಇಮ್ತಿಯಾಜ ಮಾನ್ವಿ

Date:

“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೌದರಾಬಾದಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ದೇಶದ ಆರ್ಥಿಕತೆ ಸುಧಾರಿಸಲು ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ, ದೇಶದ ಎಲ್ಲಾ ನಾಗರಿಕರು ಪಟ್ರೋಲ್ ಮತ್ತು ಡಿಸೇಲ್ ಮಿತವಾಗಿ ಬಳಸಿ, ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ, ಮನೆಯಿಂದಲೇ ಕೆಲಸ (ವರ್ಕ ಫ್ರಾಮ್ ಹೊಂ) ಮಾಡಿ, ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋ ಹಾಗೂ ಸಾರಿಗೆ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡಿ” ಎಂದು ಜನರಿಗೆ ಉಪದೇಶ ನೀಡಿದ್ದು, ದೇಶದ ಬಡಜನರ ಮೇಲೆ ಆರ್ಥಿಕ ಹೊರೆ ಹಾಕುವ ಕುತಂತ್ರವಾಗಿದೆ” ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರು ಇಮ್ತಿಯಾಜ.ಆರ್.ಮಾನ್ವಿ ಪ್ರಕಟನೆಯಲ್ಲಿ ಕಿಡಿಕಾರಿದ್ದಾರೆ.

- Advertisement -

ಗದಗ ಪಟ್ಟಣದಲ್ಲಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, “ಪ್ರಧಾನ ಮಂತ್ರಿಯವರ ಹೇಳಿಕೆಯನ್ನು ಖಂಡಿಸಿ, ಮಾತನಾಡಿ, “ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂರ್ಘಷದಿಂದಾಗಿ ಜಾಗತಿಕ ಪೊರೈಕೆ ಸರಪಳಿಗಳು ಒತ್ತಡದಲ್ಲಿ ಇರುವುದರಿಂದ ಭಾರತ ವಿದೇಶಿ ವಿನಿಮಯ ನಿಕ್ಷೇಪಗಳನ್ನು ಸಂರಕ್ಷಿಸಬೇಕು. ಇಂಧನ ಬಳಕೆಯನ್ನು ಕೆಡಿಮೆ ಮಾಡಬೇಕು’ ಎಂದು ಹೇಳಿರುವ ಪ್ರಧಾನ ಮಂತ್ರಿಗಳು ದೇಶದ ಆರ್ಥಿಕತೆಯ ನೆಪ್ಪದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವ ಮುನ್ಸೊಚನೆ ನೀಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

“ಈ ಹಿಂದೆ ಪಶ್ಚಿಮ ಏಷ್ಯಾದ ಯುದ್ಧದ ಪ್ರಾರಂಭದಲ್ಲಿ ನಮ್ಮ ದೇಶದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಜನರಿಗೆ ನೀಡಿದ ಭರವಸೆ ಸುಳ್ಳಾಗಿದೆ. ಕೇಂದ್ರ ಸರ್ಕಾರವು ದೇಶದಲ್ಲಿ ಮುಂದಾಗುವ ಇಂಧನ ಬಿಕ್ಕಟ್ಟಿಗೆ ಸಮರ್ಪಕವಾಗಿ ತಯಾರಿ ನಡೆಸುವಲ್ಲಿ ವಿಫಲವಾಗಿದ್ದರಿಂದ ದೇಶದ ಸಾಮಾನ್ಯ ಜನರ ಮೇಲೆ ಹೊರೆಯನ್ನು ಹಾಕಲಾಗುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಸರ್ಕಾರದ ಕೇಂದ್ರ ಸಚಿವರಿಗೆ ಸಂಸದರಿಗೆ ದೇಶದ ಎಲ್ಲಾ ರಾಜ್ಯದ ಜನಪ್ರತಿಧಿಗಳಿಗೆ ಕೊಟ್ಯಾಂತರ ಹಣವನ್ನು ಖರ್ಚು ಮಾಡಿ ರ‍್ಯಾಲಿ ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂದು ಕರೆ ನೀಡಬೇಕು. ನಮ್ಮ ದೇಶದ ಬಡ ಕೊಲಿ ಕಾರ್ಮಿಕರು ಪ್ರತನಿತ್ಯ ಶ್ರಮಪಟ್ಟು ಕೆಲಸ ಮಾಡಿ ತಮ್ಮ ಕಠಿಣವಾದ ಬದುಕನ್ನು ನಡೆಸುತ್ತಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ನೀಡಿರುವ ಹೇಳಿಕೆಯಿಂದ ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಘಾತ ತಂದಿದೆ” ಎಂದರು.

“ದೇಶನ ಪ್ರಧಾನ ಮಂತ್ರಿಗಳ ಹೇಳಿಕೆಯಿಂದ ಅಧಾನಿ ಮತ್ತು ಅಂಬಾನಿ ಅಂತಹ ಶ್ರೀಮಂತರಿಗೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಬದಲಾಗಿ ದೇಶದ ಕೊಟ್ಯಾಂತರ ಕೊಲಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರ ಬದುಕು ಕಷ್ಟಕರ ಆಗುವುದು ಸತ್ಯ. ಕೇಂದ್ರ ಸರ್ಕಾರ ತಮ್ಮ ವೈಫಲ್ಯವನ್ನು ದೇಶದ ಸಾಮಾನ್ಯ ನಾಗರಿಕರ ಮೇಲೆ ಹೊರೆ ಹಾಕುವುದನ್ನು ಬಿಟ್ಟು ದೇಶದ ಬಡವರ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು” ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರು ಇಮ್ತಿಯಾಜ.ಆರ್.ಮಾನ್ವಿ ಹಾಗೂ ಮುಖಂಡರು ಮೌಲಾಸಾಬ ಗಚ್ಚಿ ಪತ್ರಕಾ ಪ್ರಕಟನೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬಸ್, ಬೈಕ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ...

ಕಲಬುರಗಿ | ಗಾಂಜಾ ಮಾರಾಟ; ಮೂವರು ಬಂಧನ, ₹7,500 ಮೌಲ್ಯದ ವಸ್ತು ವಶ

ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ...

ಕಲಬುರಗಿ | ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶವ ಪತ್ತೆ; ಕೊಲೆ ಶಂಕೆ

ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರ ಮೃತದೇಹ...