ಗಜೇಂದ್ರಗಡ ನಗರ ಪ್ರಮುಖ ವಾಣಿಜ್ಯ ನಗರವಾಗಿದ್ದು, ಸುತ್ತಮುತ್ತಲಿನ ನೂರಾರು ಗ್ರಾಮದ ಜನರಿಗೆ ವ್ಯಾಪಾರ ವಹಿವಾಟಕ್ಕೆ ಪ್ರಮುಖ ನಗರವಾಗಿದೆ. ಆದ್ದರಿಂದ ವ್ಯಾಪಾರಸ್ಥರು, ರೈತರ ಟಿವಿಸಿ ಕಮಿಟಿ 2014ರ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯನ್ನು ಜಾರಿಗೂಳಿಸಬೇಕು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶೀಲ್ದಾರ್ ಆವರಣದಿಂದ ಪ್ರತಿಭಟ ಮೆರವಣಿಗೆ ಪ್ರಾರಂಭಿಸಿ ನಗರದ ಡಬಲ್ ರಸ್ತೆ ಮೂಲಕ ಕೆ ಕೆ ಸರ್ಕಲ್ ನಲ್ಲಿ ಪ್ರತಿಭಟಿಸಿ ಬೀದಿ ಬದಿ ವ್ಯಾಪಾರಸ್ಥರ ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿಯನ್ನು ಉಪಾ ತಹಸಿಲ್ದಾರ್ ಸೇವಾಲಾಲ್ ನಾಯಕ್ ಮುಖ್ಯಾಧಿಕಾರಿಗಳಾದ ಬಳಗಾನೂರ ರವರಿಗೆ ಮನವಿ ನೀಡಲಾಯಿತು
ಸಿಐಟಿಯು ಜಿಲ್ಲಾ ಮುಖಂಡರಾದ ಪೀರು ರಾಠೋಡ ಮಾತನಾಡಿ, “ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ೨೦೦೪ ಹಾಗೂ ೨೦೧೪ ಮತ್ತು ೨೦೧೯ ಕಾಯ್ದೆ ಜಾರಿಗಾಗಿ ಕ್ಷೇತ್ರದ ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಎಲ್ಲಾ ವ್ಯಾಪಾರಸ್ಥರ ನಡುವೆ ಒಂದು ಒಂಟಿ ಸಭೆಯನ್ನು ನಡೆಸಬೇಕು. ಹಾಗೂ ತರಕಾರಿ ಮಾರುಕಟ್ಟೆಯ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಕುಡಿಯುವ ನೀರು, ಶೌಚಾಲಯ, ವಿದ್ಯುತ್ತ ದೀಪಗಳು ಅಳವಡಿಸಬೇಕು.ರಸ್ತೆ ಬದಿ ಹಣ್ಣು ಎಗ್ ರೈಸ್, ಕಬ್ಬಿನ ಹಾಲು, ಬಟ್ಟೆ, ವ್ಯಾಪಾರ, ಚಪ್ಪಲಿ, ಎಲೆ ಅಡಿಕೆ, ಹಗದ ವ್ಯಾಪಾರ, ಪಾನಿಪುರಿ, ಹೂವು ಹಾಗೂ ವಿವಿಧ ಎಲ್ಲಾ ವ್ಯಾಪಾರಸ್ಪರಿಗೆ ಬೀದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು” ಎಂದರು.
ಬೀದಿ ವ್ಯಾಪಾರಸ್ಥರ ತಾಲೂಕಾಧ್ಯಕ್ಷರು ಶಾಮೀದ್ ಅಲಿ ಮಾತನಾಡಿ, “ನೋಂದಣಿಯಾಗಿರುವರ ಗುರುತಿನ ಚೀಟಿ ವಿತರಣೆ. ವಿಮೆ, ಆರೋಗ್ಯ, ಸಾಲ ಸೌಲಭ್ಯ ಮತ್ತು ಇತರೆ ಸಾಮಾಜಿಕ ಭದ್ರತಾ, ಯೋಜನೆಗಳ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು. ಬೀದಿ ವ್ಯಾಪಾರ, ರಸ್ತೆ ಬದಿಯ ವ್ಯಾಪಾರ ಮಾಡುವ ಸ್ಥಳವನ್ನು ನಿಗದಿತ ರೇಖೆಯ ಮೂಲಕ ನಿಗದಿಪಡಿಸಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ರಾತ್ರಿ ಹೊತ್ತಿನಲ್ಲಿ ಹಾಗೂ ಇತರೆ ರಜಾ ದಿನಗಳಲ್ಲಿ ಮಾರುಕಟ್ಟೆಯನ್ನು ಆಯೋಜಿಸಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
“ಚಲಿಸುವ ವಾಹನಗಳಲ್ಲಿ ಹಣ್ಣಿನ ವ್ಯಾಪಾರ ಬೆಳ್ಳುಳ್ಳಿ ತರಕಾರಿ ಬಟ್ಟೆ ವ್ಯಾಪಾರಗಳನ್ನು ಗಜೇಂದ್ರಗಡದ ಪ್ರಮುಖ ರಸ್ತೆಗಳಾದ ಜೋಡು ರಸ್ತೆ. ಕುಷ್ಟಗಿ ರಸ್ತೆ ರೋಣದ ರಸ್ತೆ. ಬಸ್ಟ್ಯಾಂಡ್ ರಸ್ತೆಗಳಲ್ಲಿ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಬಗ್ಗೆ ಯಾರಾದರೂ ದೂರು ನೀಡಿದರೆ ಸಂಘಟನೆ ಮುಖಂಡರು. ದೂರುದಾರರು ಬೀದಿ ಬದಿ ವ್ಯಾಪಾರಸ್ಥರ ಒಳಗೊಂಡ ಸಭೆ ಮಾಡಿ ಆ ದೂರಿಗೆ ಪರಿಹಾರ ಮಾಡಿಕೊಡಬೇಕು ಬೀದಿ ಬದಿ ವ್ಯಾಪಾರಸ್ಥರ ಪ್ರಮಾಣ ಪತ್ರ ಮರು ನವೀಕರಣ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷರು ಬಾಲು ರಾಠೋಡ ಮಾತನಾಡಿ, “ಹಲವು ಸ್ಥಳೀಯ ಸಮಸ್ಯೆಗಳಿಗೆ ಟಿವಿಸಿ ಕಮಿಟಿ ಸದಸ್ಯರು ಸಿಐಟಿಯು ಸಂಘಟನೆಯ ಮುಖಂಡರು. ಪೋಲಿಸ್ ಅಧಿಕಾರಿಗಳು ಹಾಗೂ ಮಾನ್ಯ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಪರವಾನಿಗೆ ಇಲ್ಲದೆ ವ್ಯಾಪಾರ ಮಾಡುವವರಿಗೆ ಪರವಾನಿಗೆ ಪತ್ರ ನೀಡಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಕಾನೂನು ನಿಯಮಗಳನ್ನು ತಿಳಿಸಬೇಕು” ಎಂದರು.
ಇದನ್ನು ಓದಿದ್ದೀರಾ? ಗದಗ | ಪಂಚಗ್ಯಾರಂಟಿ ಯೋಜನೆಗಳ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿಯೇ ತಲುಪಲಿ: ಅಶೋಕ ಮಂದಾಲಿ
“ಯಾವುದೇ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವು ಗೊಳಿಸಬೇಕಾದರೆ ಬೀದಿ ಬದಿ ವ್ಯಾಪಾರಸ್ಥರ ಕಾಯಿದೆ ೨೦೦೪ ರ ಅಡಿಯಲ್ಲಿ 30 ದಿನ ಮುಂಚಿತ ಲಿಖಿತ ನೋಟಿಸ್ ನೀಡಬೇಕು ಹಾಗೂ ಪರ್ಯಾಯ ವ್ಯಾಪಾರ ಸ್ಥಳವನ್ನು ಗುರುತಿಸಿ ಕೊಡಬೇಕು. ಇದು ಟಿವಿಸಿ ಕಮಿಟಿ ಜವಾಬ್ದಾರಿ ಎಂದು ಕಾನೂನು ನಿಯಮದಂತೆ ಜಾರಿಗೆ ತರಬೇಕು .ಈಗಾಗಲೇ ಅನದಿಕೃತ ತೆರವು ಗೊಳಿಸಿದ ಅಂಗಡಿಗಳನ್ನು ವ್ಯಾಪಾರಸ್ಥರಿಗೆ ಮರಳಿ ಕೊಡಬೇಕು. ಬೀದಿ ಬದಿ ವ್ಯಾಪಾರಸ್ಥರ ಅರ್ಥಿಕ ನೆರವಿಗಾಗಿ ಬಂದ ಅನುಧಾನವನ್ನು ಸಮರ್ಕಪವಾಗಿ ಸದ್ಬಳಕೆ ಮಾಡಬೇಕು . ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆ ಸಮೀತಿ ರಚಿಸಬೇಕು” ಎಂದು ಒತ್ತಾಯಿಸಿದರು .
ಈ ಪ್ರತಿಭಟನೆಯಲ್ಲಿ ರಾಜು ಮಾಂಡ್ರೆ, ಉಮೆಶ ನಾವಡೆ, ಜೆ.ಸಿ.ಗೋಡೇಕಾರ, ಚೌಡಮ್ಮ ಯಲ್ಪು, ಮೈಬೂಸಾಬ್ ಮಾಲ್ದಾರ, ಮುತ್ತಣ್ಣರಾ ರಾಠೋಡ, ಅಂಬರೇಶ ಚವ್ಹಾಣ, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ, ವೀಷ್ಣು ಚಂದುಕರ, ಮಹಾಂತೇಶ ಹೀರೇಮಠ, ಗಂಗಾಧರ ಸತ್ಯನಣ್ಣವರ, ಯಮನೂರಸಾಬ್ ಗಾದಿ, ಮರ್ತುಜಾ ದಿಂಡವಾಡ, ಅಶೋಕ್ ಚವ್ಹಾಣ, ಕಳಕಪ್ಪ ಮಾಳೋತ್ತರ, ಸುರೇಶ್ ಅಕ್ಕಸಾಲಿ, ನಾಗರಾಜ ಆಶ್ಮೀರ, ದೇವಕ್ಕೆ ರಾಠೋಡ, ಭದ್ರೇಶ್ ರಾಠೋಡ, ದಾನಪ್ಪ ರಾಠೋಡ, ಅನ್ವರ ಹೀರೆಕೊಪ್ಪ ಮುಂತಾದವರು ಭಾಗವಹಿಸಿದ್ದರು.




