ಹಾವೇರಿ | ಕಬ್ಬಿನ ದರಕ್ಕಾಗಿ ಸಾಮೂಯಿಕ ನಾಯಕತ್ವದಲ್ಲಿ ಹೋರಾಟ; ನ.18ರಂದು ಸಚಿವ ರುದ್ರಪ್ಪ ಲಮಾಣಿ ಮನೆ ಮುತ್ತಿಗೆ

Date:

“ಕಬ್ಬಿನ ದರಕ್ಕಾಗಿ ಎಲ್ಲ ರೈತ ಸಂಘಟನೆಗಳು ಹೋರಾಟ ಮಾಡುತ್ತಿದ್ದವು. ಆದರೆ ವೇದಿಕೆ ಬೇರೆ ಬೇರೆ ಇದ್ದವು. ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ರಚಿಸಿ ಹೋರಾಟಕ್ಕೆ ಸಜ್ಜಾಗಿದ್ದು, ನ. 18ಕ್ಕೆ ಸಚಿವ ರುದ್ರಪ್ಪ ಲಮಾಣಿ ಮನೆ ಮುತ್ತಿಗೆ ಹಾಕುತ್ತೇವೆ” ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

- Advertisement -

ಹಾವೇರಿ ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, “ಹಾವೇರಿ ಜಿಲ್ಲೆಯಲ್ಲಿ ಇರುವ ಎಲ್ಲ ರೈತ ಸಂಘಟನೆಗಳು ಒಂದೇ ಎನ್ನುವ ಸಂದೇಶವನ್ನ ಈಡೀ ರಾಜ್ಯಕ್ಕೆ ಮಾದರಿಯಾಗಿ ಮಾಡಿದ್ದು ಇದರಲ್ಲಿ ಗೆದ್ದೇ ಗೆಲ್ಲುತ್ತೇವೆ. ನ್ಯಾಯ ಸಿಗುವವರೆಗೂ ಹಿಂದಕ್ಕೆ ಸರಿಯುವುದಿಲ್ಲ” ಎಂದು ಕಡಕ್ ಸಂದೇಶ ಸಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಈ ಹೋರಾಟಕ್ಕೆ ಕಬ್ಬು ಬೆಳೆಗಾರರಷ್ಟೆ ಅಲ್ಲ, ರೈತರೆನ್ನುವವರೆಲ್ಲರೂ ಬರ್ತಾರೆ. ಎಲ್ಲರ ನಾಯಕತ್ವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಚಿವ ರುದ್ರಪ್ಪ ಲಮಾಣಿ ಮನೆಯನ್ನು ಮುತ್ತಿಗೆ ಹಾಕುತ್ತೇವೆ” ಎಂದರು.

“2009ರಿಂದ ಇಲ್ಲಿಯವರಗೂ ಎಮ್.ಎಸ್.ಪಿಯನ್ನು ನಿಗದಿಪಡಿಸಿಲ್ಲ. ಆವತ್ತು ಸಕ್ಕರೆಗೆ ₹31 ನಿಗದಿ ಮಾಡಿದ್ದಾರೆ. ಎರಡು ಮೂರು ವರ್ಷಗಳಿಂದ ಯಾರು ₹31 ಮಾರಾಟ ಮಾಡಿಲ್ಲ. ಹೆಚ್ಚಿಗೆ ಮಾರಾಟ ಮಾಡಿದ್ದಾರೆ.  ಹೆಚ್ಚಿಗೆ ಆದಾಗ ಎಫ್.ಆರ್.ಪಿ ಕೋಡಬೇಕಿತ್ತು. ಆದರೆ ಇದುವರೆಗೂ ಕೊಟ್ಟಿಲ್ಲ. ರೈತರ ಹೋರಾಟದಿಂದ ಕೇಂದ್ರ ಸರಕಾರ ನ. 26ಕ್ಕೆ ಎಮ್.ಎಸ್.ಪಿ ಹಾಗೂ ಎಫ್.ಆರ್.ಪಿ ಘೋಷಣೆ ಮಾಡ್ತಾರೆ ಎಂದು ಹೇಳಿದ್ದಾರೆ. ಅಲ್ಲಿವರೆಗೂ ನಾವು ಕಾಯುತ್ತೇವೆ. ಮಾಡದಿಂದರೆ ಹೋರಾಟವನ್ನು ದೊಡ್ಡ ಪ್ರಮಾಣದಲ್ಲಿ ಒಯ್ಯುತ್ತೇವೆ” ಎಂದು ಹೇಳಿದರು.

ರೈತ ಮುಖಂಡ ಅಶೋಕರೆಡ್ಡಿ ಮರ್ಚರೆಡ್ಡೇರ ಮಾತನಾಡಿ, “ಕಲಬುರಗಿಯ ಕಾರ್ಖಾನೆಯಿಂದ ಕಬ್ಬಿಗೆ ₹3600 ಬೆಲೆಯನ್ನು ಚೂನಪ್ಪ ಪೂಜಾರಿ ಅವರ ನೇತೃತ್ವದ ಹೋರಾಟದಿಂದ ಕೊಡಿಸಿದ್ದಾರೆ. ನಮ್ಮ ಕಾರ್ಖಾನೆಯಿಂದ 9.8 ಇಳುವರಿ ಇದ್ದು, ಜಿಲ್ಲೆಯ ಮೂರು ಕಾರ್ಖಾನೆಗಳು ಕಬ್ಬಿಗೆ ₹3600ದರ ನಿಗದಿ ಮಾಡಲೆಬೇಕು. ಈ ನಿಟ್ಟಿನಲ್ಲಿ ನ. 18ರಂದು ರುದ್ರಪ್ಪ ಲಮಾಣಿ ಅವರ ಮನೆ ಎದುರು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.

ಪತ್ರಿಕಾ ಗೋಷ್ಟಿಯಲ್ಲಿ ರೈತ ಮುಖಂಡರು ಹನುಮಂತಪ್ಪ ಹುಚ್ಚಣ್ಣನವರ, ಹನುಮಂತಪ್ಪ ಕಬ್ಬಾರ, ಮಾಲತೇಶ ಪೂಜಾರ, ಹನುಮಂತಪ್ಪ ದೇವಗಿಹಳ್ಳಿ, ಹೆಚ್ ಹೆಚ್ ಮುಲ್ಲಾ, ಅನಿಲ ಡೊಳ್ಳಿನ, ಮಂಜು ಅಸುಂಡಿ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟಿಲ, ಬಸವರಾಜ ತಳವಾರ, ಶಿವಾನಂದ ಜಡಿಮಠ. ಭುವನೇಶ್ವರ ಶೀಡ್ಲಾಪೂರ, ವೀರಣ್ಣ ಹಲಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕೋಟದಲ್ಲಿ ಶಿಕ್ಷಕರಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಸಮಾರೋಪ

ರಿಷಬ್ ಶೆಟ್ಟಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಾಗೂ ವಿ-ಶೈನ್ ಕೋಚಿಂಗ್ ಸೆಂಟರ್ ಸಹಭಾಗಿತ್ವದಲ್ಲಿ...

ದಕ್ಷಿಣ ಕನ್ನಡ | ನವೆಂಬರ್‌ 22ರಿಂದ ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ನವೆಂಬರ್ 22ರಂದು...

ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಮೇಳದ ಸಡಗರ

ಬೆಂಗಳೂರಿನ ಜಿಕೆವಿಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ 2026ರ ಕೃಷಿ ಮೇಳಕ್ಕೆ ಚಾಲನೆ...

ಚಿಕ್ಕಬಳ್ಳಾಪುರ | ಮಾದಕ ವಸ್ತುಗಳ ವಿರುದ್ಧ ಕಂಕಣಬದ್ಧರಾಗಿ ಕೈ ಜೋಡಿಸೋಣ: ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ

ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಮತ್ತು ಜೀವನ ಹಾಳಾಗು ವುದಲ್ಲದೆ,...