“ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಾನ್ ಯುಜಿಸಿ ಅತಿಥಿ ಉಪನ್ಯಾಸಕರುಗಳಿಗೆ ಶೈಕ್ಷಣಿಕ ಸಂಯೋಜಕ ಹುದ್ದೆಗಳನ್ನು ಸೃಜಿಸುವ ಮುಖಾಂತರ ಐದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರುಗಳಿಗೆ ಮರುಜೀವ ನೀಡಿದೆ” ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರು ಡಾ.ಹನುಮಂತಗೌಡ ಆರ್ ಕಲ್ಮನಿ ತಿಳಿಸಿದ್ದಾರೆ.
ಗದಗ ಪಟ್ಟಣದಲ್ಲಿ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು “೨೦೧೮ರ ಯುಜಿಸಿ ನಿಯಮಾವಳಿಗಳ ಪ್ರಕಾರ ಯುಜಿಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಇಲಾಖೆಯು ಸೇವೆ ಸಲ್ಲಿಸಲು ಅವಕಾಶ ನೀಡಿತು. ಆದರೆ ನಾನ್ ಯುಜಿಸಿ ಉಪನ್ಯಾಸಕರುಗಳನ್ನು ಬೋಧನಾ ಕಾರ್ಯಭಾರದಿಂದ ಹೊರಗೆ ಉಳಿದಿದ್ದರು. ಇವರ ಪರವಾಗಿ ಸರಕಾರದ ಮೇಲೆ ಹೋರಾಟದ ಮೂಲಕ ಒತ್ತಡ ಹೇರಲಾಗಿತ್ತು. ಅದರ ಅವಿರತದ ಫಲವಾಗಿ ಇಂದು ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಂಯೋಜಕ ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿದ್ದು ಸಂತಸದ ಸಂಗತಿಯಾಗಿದೆ” ಎಂದರು.
“ಈ ಹೋರಾಟಕ್ಕೆ ಸ್ಪಂದಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರಿಗೆ, ಇಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಮತ್ತು ನಾಡಿನ ಎಲ್ಲ ಪರಮಪೂಜ್ಯರುಗಳಿಗೆ, ಮಾಜಿ ಕಾನೂನು ಸಚಿವರು ಡಾ.ಎಚ್.ಕೆ.ಪಾಟೀಲ ಅವರಿಗೆ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರಿಗೆ, ವಿಧಾನ ಪರಿಷತ್ ಮಾಜಿ ಉಪಸಭಾಪತಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ ಅವರಿಗೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ.ಸಂಕನೂರ ಅವರಿಗೆ, ಶೈಕ್ಷಣಿಕ ತಜ್ಞರಾದ ಡಾ.ಆರ್.ಎಂ.ಕುಬೇರಪ್ಪ ಅವರಿಗೆ ಹಾಗೂ ಎಲ್ಲಾ ವಿಧಾನ ಪರಿಷತ್ ಸದಸ್ಯರುಳಿಗೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವೃಂದಕ್ಕೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪರವಾಗಿ ಅಭಿನಂದನೆಗಳು ಎಂದು ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್ ಕಲ್ಮನಿರವರು ತಿಳಿಸಿದ್ದಾರೆ.





