ಕಲಬುರಗಿ | ಕಬ್ಬಿಗೆ ದರ ನಿಗದಿಗೊಳಿಸಿ ಸರ್ಕಾರ ಆದೇಶ : ಡಿಸಿ ಬಿ.ಫೌಜಿಯಾ ತರನ್ನುಮ್

Date:

ಕಳೆದ 2023-24ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ 2024-25ನೇ ಸಾಲಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ನುರಿಸುವ ಕಬ್ಬಿಗೆ ಮೊದಲ ಕಂತಿನ ರೂಪದಲ್ಲಿ ರೈತರಿಗೆ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯ ದರ (ಎಫ್.ಆರ್.ಪಿ) ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

- Advertisement -

ಪ್ರಸಕ್ತ 2024-25ನೇ ಸಾಲಿನಲ್ಲಿ 01.07.2024 ರಿಂದ 30.06.2025ರ ವರೆಗೆ ಅಳಂದ ತಾಲೂಕಿನ ಭೂಸನೂರ ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆ 9,34,763 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 91,956 ಸಕ್ಕರೆ ಉತ್ಪಾದಿಸಲಿದೆ. ಶೇ.9.84 ಸಕ್ಕರೆ ಇಳುವರಿ ಬರಲಿದ್ದು, ಪ್ರತಿ ಮೆ.ಟನ್ ಕಬ್ಬಿಗೆ 3,264 ರೂ.ದರ ನಿಗದಿ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಅಫಜಲಪುರ ತಾಲೂಕಿನ ಚೌಡಾಪುರ ಕೆ.ಪಿ.ಆರ್. ಶುಗರ್ಸ್ ಕಾರ್ಖಾನೆ 11,35,389 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 91,170 ಸಕ್ಕರೆ ಉತ್ಪಾದಿಸಲಿದೆ. ಶೇ.10.12 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,357 ರೂ. ದರ ನಿಗದಿ ಮಾಡಲಾಗಿದೆ.

ಅಫಜಲಪುರ ತಾಲೂಕಿನ ಹವಳಗಾದ ರೇಣುಕಾ ಶುಗರ್ಸ್ ಕಾರ್ಖಾನೆ 8,92,152 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 56,828 ಸಕ್ಕರೆ ಉತ್ಪಾದಿಸಲಿದೆ. ಶೇ.9.15 ಸಕ್ಕರೆ ಇಳುವರಿ ಹೊಂದಿದ್ದು, ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ.ದರ ನಿಗದಿಪಡಿಸಲಾಗಿದೆ.

ಯಡ್ರಾಮಿ ತಾಲೂಕಿನ ನಾಗರಹಳ್ಳಿಯ ಉಗಾರ ಶುಗರ್ಸ್ ಕಾರ್ಖಾನೆ 3,79,352 ಮೆಟ್ರಿಕ್ ಟನ್ ಕಬ್ಬು ನುರಿಸಲಿದ್ದು, 34,890 ಸಕ್ಕರೆ ಉತ್ಪಾದಿಸಲಿದೆ. ಶೇ.9 ಸಕ್ಕರೆ ಇಳುವರಿಯೊಂದಿಗೆ ಪ್ರತಿ ಮೆ.ಟನ್ ಕಬ್ಬಿಗೆ 3,151 ರೂ. ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕನ್ನಡ ಸಾಹಿತ್ಯದ ಹಿರಿಮೆ ಹೆಚ್ಚಿಸಿದ ಶರಣರು : ಗುರುಬಸವ ಪಟ್ಟದ್ದೇವರು

ರೈತರು ಆಯಾ ಸಮೀಪದ ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡುವ ಮೂಲಕ ಸೌಲಭ್ಯ ಪಡೆಯಬೇಕು ಎಂದು ಡಿ.ಸಿ.ಫೌಜಿಯಾ ತರನ್ನುಮ್ ಅವರು ಕೋರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ವೈಚಾರಿಕ ತಳಹದಿಯ ಚರ್ಚೆಗೆ ಸದಾ ಸ್ವಾಗತವಿದೆ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

ಜನರು ಅಜ್ಞಾನದ ಅಂಧಕಾರದಲ್ಲಿಯೇ ಇರಬೇಕು ಎಂದು ಬಯಸುವುದು ಮಾನಸಿಕ ಭಯೋತ್ಪಾದನೆಯಾಗಿದೆ. ಮೌಢ್ಯ...

ಬೀಳಗಿ |ಬೀಳಗಿಯಲ್ಲಿ ಜಾನಪದ ಸಂಭ್ರಮ: 20 ಚೌಡಕಿ ಗಾಯನ ತಂಡಗಳಿಂದ ಸಾಂಪ್ರದಾಯಿಕ ಹಾಡುಗಳ ಅನಾವರಣ

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ, ಲಿಂಗೈಕ್ಯ...

ವಿಜಯಪುರ | ಜಿಪಂನಿಂದ ಉಚಿತ ಕಂಪ್ಯೂಟರ್ ತರಬೇತಿ: ಅಭ್ಯರ್ಥಿಗಳಿಗೆ ₹1,500 ಸಹಾಯಧನ

ನಿರುದ್ಯೋಗಿ ಯುವಜನರನ್ನು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯ...

ಯಾದಗಿರಿ | ಜಮೀನು ವಿವಾದ; ಮುಸ್ಲಿಂ ಮುಖಂಡರಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ

ಸರ್ಕಾರಿ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಿದ ಸ್ಥಳವು ಮುಸ್ಲಿಂ ಸಮುದಾಯದ ಈದ್ದಾ ಜಾಗಕ್ಕೆ...