ಗುಬ್ಬಿ | ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡುವುದಿಲ್ಲ : ಹೋರಾಟಗಾರರ ದಿಟ್ಟ ನಿಲುವು

Date:

 ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಮಗಾರಿ ಮುಂದುವರೆಸುವ ಹೇಳಿಕೆ ನೀಡಿದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಎಲ್ಲಾ ಮುಖಂಡರು ಸಭೆ ನಡೆಸಿ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ದಿಟ್ಟ ಪ್ರತಿಕ್ರಿಯೆ ವ್ಯಕ್ತ ಪಡಿಸಿ ರೈತರ ಉಗ್ರ ಹೋರಾಟಕ್ಕೆ ಸಜ್ಜಾಗಲು ಇಡೀ ಜಿಲ್ಲೆಯ ರೈತರಿಗೆ ಕರೆ ನೀಡಿದರು.

- Advertisement -

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಮುಖಂಡರು ಒಕ್ಕೊರಲಿನ ಆಗ್ರಹವಾಗಿ ಕಾಮಗಾರಿ ನಿಲ್ಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರು ನೋಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಸಭೆಯ ಆರಂಭದಲ್ಲೇ ಸಂಸದರು ಕೇಂದ್ರ ಸಚಿವ ಸೋಮಣ್ಣ ಅವರ ಮೌನ ಬಗ್ಗೆ ತೀವ್ರ ಆಕ್ಷೇಪ ಸಭೆಯಲ್ಲಿ ಕಂಡು ಬಂತು. ಅತೀ ಹೆಚ್ಚು ಮತ ನೀಡಿದ ಜಿಲ್ಲೆಯ ಜನತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಕೆನಾಲ್ ಕಾಮಗಾರಿ ಮುಂದುವರೆಸಲು ತೆರೆಮರೆಯ ಒಪ್ಪಿಗೆ ನೀಡಿದ್ದಾರೆ ಎಂದು ಕೆಲ ಹೋರಾಟಗಾರರು ನೇರ ಆರೋಪ ಮಾಡಿದರು. ಶಿವಕುಮಾರ್ ಹೇಳಿಕೆಗೆ ಮೊದಲು ಸೋಮಣ್ಣ ಅವರು ಹಾಗೂ ಬಿಜೆಪಿ ಜೆಡಿಎಸ್ ಶಾಸಕರು ಪ್ರತ್ಯುತ್ತರ ನೀಡಬೇಕಿತ್ತು ಎಂದು ಕಿಡಿಕಾರಿದರು.

ನಂತರ ಸಭೆಯನ್ನುದ್ದೇಶಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಕೇಂದ್ರ ಸಚಿವರಿಗೆ ಲೋಕಸಭಾ ಸದಸ್ಯರಾಗಿ ಹೋರಾಟಕ್ಕೆ ಬರಲು ಆಹ್ವಾನ ನೀಡೋಣ. ಯಾರು ಬರಲಿ ಬಿಡಲಿ ನಾನಂತೂ ದಿಟ್ಟ ಹೋರಾಟಕ್ಕೆ ರೈತರ ಜೊತೆ ಇರ್ತೇನೆ. ಶಿವಕುಮಾರ್ ಏನೂ ಮಾಡಲು ಸಾಧ್ಯವಿಲ್ಲ. ಕೆನಾಲ್ ಕಾಮಗಾರಿ ಮಾಡಲು ಎಂದಿಗೂ ಬಿಡಲ್ಲ. ಅಬ್ಬಬ್ಬಾ ಅಂದರೆ ಲಾಠಿಚಾರ್ಜ್ ಮಾಡಬಹುದು ಅಷ್ಟೇ. ಇದಕ್ಕೆ ಜಿಲ್ಲೆಯ ರೈತರು ಜಗ್ಗುವುದಿಲ್ಲ ಎಂದ ಅವರು ಜಿಲ್ಲೆಯ ಕಾಂಗ್ರೆಸ್ ಶಾಸಕರು ನರಸತ್ತ ಶಾಸಕರಾಗಿದ್ದಾರೆ. ಹಿರಿಯ ಜಯಚಂದ್ರ ಅವರು ಮಾತನಾಡಿಲ್ಲ. ಜೊತೆಗಿದ್ದ ಶಾಸಕರು ಕಾಂಗ್ರೆಸ್ ಟಿಕೆಟ್ ಸಿಗಲ್ಲ ಎಂತ ಭಯ ಇದ್ರೆ ನಮ್ಮ ಪಕ್ಷಕ್ಕೆ ಬನ್ನಿ ಟಿಕೆಟ್ ಕೊಡಿಸ್ತೀನಿ. ನಮ್ಮ ಎನ್ ಡಿಎ ಸರ್ಕಾರ ರಾಜ್ಯದಲ್ಲಿ ಬರುತ್ತದೆ. ಈ ನಡುವೆ ಕುಣಿಗಲ್ ತಾಲ್ಲೂಕಿಗೆ ನಿಗದಿಗಿಂತ ಹೆಚ್ಚು ನೀರು ಹರಿದಿದೆ. ಒಟ್ಟು 6.50 ಟಿಎಂಸಿ ನೀರು ಅಲ್ಲಿಗೆ ಹೋಗುತ್ತಿದೆ. ಮೂರು ಭಾಗದಲ್ಲಿ ಹರಿಯುವ ನೀರು ಲೆಕ್ಕ ಕೊಡದ ಇಂಜಿನಿಯರ್ ಜಯಪ್ರಕಾಶ್ ಉಪ ಮುಖ್ಯಮಂತ್ರಿಗಳಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗುಡುಗಿದರು.

1002061336

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಐಐಟಿ ಮೂಲಕ ಈ ಯೋಜನೆ ಬಗ್ಗೆ ಪರಿಶೀಲಿಸಲು ಶಾಸಕರ ಸಭೆಯಲ್ಲಿ ತಿಳಿಸಿದ ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಕೆಲಸ ಈಗಾಗಲೇ 400 ಕೋಟಿ ಬಿಡುಗಡೆಯಾಗಿದೆ. ಕೆಲಸ ಮಾಡುತ್ತೇವೆ ಎಂದು ಉದ್ಧಟತನ ಮಾತುಗಳಾಡಿರುವುದು ಸರಿಯಲ್ಲ. ಜೊತೆಯಲ್ಲಿ ಬಂದು ಮೌನ ಸಮ್ಮತಿ ನೀಡಿದ ಶಾಸಕರಿಬ್ಬರ ನಡೆಗೆ ರೈತರಲ್ಲಿ ಆಕ್ರೋಶ ಮೂಡಿದೆ. ಮತ್ತೂಮ್ಮೆ ದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕಾನೂನಾತ್ಮಕ ಹಾಗೂ ರೈತರ ದಂಗೆ ಎರಡೂ ಹೋರಾಟ ನಡೆಸಲಿದ್ದೇವೆ. ಜನರ ದಂಗೆ ಎದ್ದರೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ನೀರಿಗಾಗಿ ರಾಜಕಾರಣ ಮಾಡದೆ ರೈತರು ಒಗ್ಗೂಡಿ ಬರಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ದಂಗೆ ಏಳುತ್ತಾರೆ. ಕಾಮಗಾರಿ ಮಾಡಲು ಬಿಡುವುದಿಲ್ಲ. ಡಿಕೆಶಿ ಅವರ ಗೂಂಡಾ ವರ್ತನೆಗೆ ಯಾರು ಜಗ್ಗಲ್ಲ. ಆದರೆ ಡಿಸಿಎಂ ಪಕ್ಕ ತುಟಿ ಬಿಚ್ಚದೆ ಕುಳಿತ ನಮ್ಮ ಶಾಸಕರು ನಾಮರ್ಧ ಕೆಲಸ ಮಾಡಿದ್ದಾರೆ. ತಾಲ್ಲೂಕಿನ ರೈತರನ್ನು ಅಡವಿಟ್ಟು ಬಾಯಿಗೆ ಬೆಲ್ಲ ಹಾಕಿಕೊಂಡು ತೆಪ್ಪಗೆ ಕುಳಿತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ರೈತರ ನೀರಾವರಿ ಹೋರಾಟಕ್ಕೆ ಶಾಸಕ ಸ್ಥಾನ ಬಿಟ್ಟು ಹೋರಾಟಕ್ಕೆ ದುಮುಕಬೇಕಿದೆ. ಆದರೆ ಮಾಧ್ಯಮ ಮುಂದೆ ವಿರೋಧ ಇದೆ ಎಂದು ಹೇಳುತ್ತಲೇ ಡಿಸಿಎಂ ಜೊತೆ ಸೈಲೆಂಟ್ ಆಗಿ ಸ್ಥಳಕ್ಕೆ ಬಂದು ಚೂರು ಮಾತನಾಡದೆ ಹೋದರೆ ರೈತರಿಗೆ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ರೈತರು ಒಗ್ಗೂಡಿ ಯಾವ ರಾಜಕಾರಣಿಯನ್ನು ಕಾಯದೆ ದೊಡ್ಡ ಹೋರಾಟಕ್ಕೆ ಸಜ್ಜಾಗಬೇಕು. ಯಾವುದೇ ಕಾರಣಕ್ಕೂ ಕೆನಾಲ್ ಮಾಡಲು ಬಿಡದಂತೆ ದಿಟ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.

ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ  ರಾಜಕೀಯ ಹೊರತಾದ ಹೋರಾಟ ನೀರಿಗಾಗಿ ನಡೆಯಬೇಕಿದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟ ಬದ್ಧತೆಯಲ್ಲಿ ಒಗ್ಗೂಡಿ ನಡೆಸಿದರೆ ಜೊತೆಯಲ್ಲಿ ಎಲ್ಲಾ ಜನ ಪ್ರತಿನಿಧಿಗಳು ಓಡಾಡಿ ಬರುತ್ತಾರೆ. ರೈತರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಮನೆ ಮನೆಗೆ ತಲುಪಿ ಹೋರಾಟ ಬಗ್ಗೆ ತಿಳಿಸಬೇಕಿದೆ ಎಂದರು

ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿಕುಣಿಗಲ್ ತಾಲ್ಲೂಕಿಗೆ ನೀರು ಹರಿಸಿಕೊಳ್ಳಲು ಯಾರ ಅಭ್ಯಂತರವಿಲ್ಲ. ನಾಲೆ ಅಗಲೀಕರಣ ಮಾಡಲಾಗಿದೆ. ನಿಗದಿತ ನೀರು ನಾಲೆಯಲ್ಲೇ ಹರಿಯಲಿದೆ. ಆದರೆ ಪೈಪ್ ಲೈನ್ ಅಕ್ರಮವಾಗಿ ಮಾಡಿದ್ದು ಮುಂದಿನ ಮಾಗಡಿ ರಾಮನಗರದತ್ತ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಲಿಂಕ್ ಕೆನಾಲ್ ಕಾಮಗಾರಿ ಎಂದಿಗೂ ಮಾಡಲು ಬಿಡುವುದಿಲ್ಲ ಎಂದರು

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ 25 ವರ್ಷದಿಂದ ನಿರಂತರ ಶಾಸಕರಾಗಿ ರೈತರ ಬವಣೆ ಬಗ್ಗೆ ಈ ಮಟ್ಟದ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ. ಡಿಸಿಎಂ ಪಕ್ಕದಲ್ಲಿ ದಂತದ ಗೊಂಬೆಯಂತೆ ಕುಳಿತು ಮೌನ ಸಮ್ಮತಿ ನೀಡಿದ್ದು ರೈತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರೈತರನ್ನು ಕಡೆಗಣಿಸಿ ಎಂದಿಗೂ ರಾಜಕೀಯ ಮಾಡಲಾಗದು. ಮುಂದಿನ ರೈತರ ಹೋರಾಟಕ್ಕೆ ಬಂದರೆ ಗೌರವ ಎಂದರು

ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ಬಿಜೆಪಿ ಮುಖಂಡರಾದ ಎಚ್.ಟಿ.ಭೈರಪ್ಪ, ಬ್ಯಾಟರಂಗೇಗೌಡ, ಬಲರಾಮಯ್ಯ, ಪಪಂ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಎಸ್.ನಂಜೇಗೌಡ, ಬೀರಮಾರನಹಳ್ಳಿ ನರಸೇಗೌಡ, ಜಗದೀಶ್, ತಿರುಮಲೇಶ್ ಸೇರಿದಂತೆ ರೈತಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೋರಾಟಗಾರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಜನರ ಬಳಿಗೇ ಅಧಿಕಾರಿಗಳು ತೆರಳಿ ಸಮಸ್ಯೆ ಪರಿಹರಿಸಬೇಕು: ಗುರುರಾಜ್ ಶೆಟ್ಟಿ ಗಂಟಿಹೊಳೆ

ಪ್ರಜಾಸೇವಾ ಆಂದೋಲನ ಸಭೆಯು ಜನಪರ ಕಾಳಜಿಯ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ...

ಉಡುಪಿ | ನಿವೇಶನ ರಹಿತರಿಂದ ನಿವೇಶನಕ್ಕಾಗಿ ಅರ್ಜಿ ಆಹ್ವಾನ

ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿಲ್ಲದ...

ತುಮಕೂರು | ಅ.5ರಿಂದ ಮೂರು ದಿನಗಳ ಮಾಧ್ಯಮ ಕಾರ್ಯಾಗಾರ : ‘ರೇಡಿಯೋ ಬರವಣಿಗೆಯಿಂದ ಛಾಯಾಗ್ರಹಣದವರೆಗೆ’ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠ

 ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮ ಲೋಕದ ಪ್ರಾಯೋಗಿಕ ಅನುಭವ ಕಟ್ಟಿಕೊಡಲು ಶ್ರೀ ಸಿದ್ಧಾರ್ಥ...