ಗುಬ್ಬಿ | ಚಾಣಾಕ್ಷತನದಲ್ಲಿ ಅಡಕೆ ಗೊನೆ ಕಳುವು : ಕಡಿವಾಣಕ್ಕೆ ಎಚ್.ಟಿ.ಭೈರಪ್ಪ ಆಗ್ರಹ

Date:

 ಅಡಕೆ ಗೊನೆ ಕೊಯ್ಲು ಸಮಯವನ್ನು ಅರಿತ ಕಳ್ಳರು ಯಾವ ದಿನ ಅಡಕೆ ಗೊನೆ ಕೊಯ್ಲು ಮಾಡಿದ ರಾತ್ರಿಯೇ ಚಾಣಾಕ್ಷತನ ಪ್ರದರ್ಶಿಸಿ ತೋಟದಲ್ಲಿ ಗೊನೆ ಕೀಳುತ್ತಾರೆ. ತೋಟದ ಮಾಲೀಕರಿಗೆ ಗೊಂದಲ ಮೂಡಿಸುವ ರೀತಿ ಕದಿಯುವ ಕೈ ಚಳಕ ತೋರುವ ಕಳ್ಳರ ಹಾವಳಿ ತಪ್ಪಿಸುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಆಗ್ರಹಿಸಿದರು.

- Advertisement -

ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಮ್ಮನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮದಲ್ಲಿ ಅಡಕೆ ಕದಿಯುವ ಚಾಣಾಕ್ಷತನ ತೋರಿದ್ದಾರೆ. ರೈತರು ಅಡಕೆ ಗೊನೆ ಇಳಿಸಿದ್ದ ರಾತ್ರಿಯೇ ಉಳಿದ ಗಿಡದಲ್ಲಿ ಗೊನೆ ಕೊಯ್ಲು ಮಾಡುತ್ತಾರೆ. ಈ ಬಗ್ಗೆ ರೈತರಿಗೂ ಲೆಕ್ಕ ಸಿಗದಂತೆ ಕಳ್ಳತನ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡು ರೈತರನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಆಗ್ನೇಯ ಪದವೀಧರ ಕ್ಷೇತ್ರ: ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ!

ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ಪಡೆದುಕೊಂಡಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನಿಂದ ಶಶಿ ಹುಲಿಕುಂಟೆಮಠ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ...

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಈಗಾಗಲೇ ಕ್ವಿಂಟಾಲ್ ಅಡಕೆ 55 ಸಾವಿರ ರೂ ದಾಟುತ್ತಿದೆ. ಅಡಕೆ ಸೀಸನ್ ಸಮಯದಲ್ಲಿ ರೈತರು ತಮ್ಮ ತೋಟದಲ್ಲಿ ಅಡಕೆ ಗೊನೆ ಕೊಯ್ಲು ಮಾಡುವ ಆತುರದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿದ ರಾತ್ರಿಯೇ ಕಳ್ಳರು ತಮ್ಮ ಕೈ ಚಳಕ ತೋರುತ್ತಾರೆ. ಕೆಲವೇ ಗಂಟೆಗಳಲ್ಲಿ ಕದ್ದು ಸಾಗಿಸುವ ಕಳ್ಳರ ಹಾವಳಿ ದಿನ ಕಳೆದಂತೆ ಮಿತಿ ಮೀರುತ್ತಿದೆ ಎಂದು ತಿಳಿಸಿದರು.

ಹೊನ್ನವಳ್ಳಿ, ಜೈನಿಗರಹಳ್ಳಿ, ಅಮ್ಮನಘಟ್ಟ, ಗೌರಿಪುರ, ಭೂತಪ್ಪನ ಹಟ್ಟಿ, ಬಿದರೆಗಾವಲ್ ವ್ಯಾಪ್ತಿಯಲ್ಲಿ ಈಗಾಗಲೇ ಅಡಕೆ ಕಳುವು ಪ್ರಕರಣ ಬೆಳಕಿಗೆ ಬಂದಿದೆ. ಬೆಳಿಗ್ಗೆ ಸೂಕ್ಷ್ಮವಾಗಿ ಗಮನಿಸುವ ರೈತರಿಗೆ ಮಾತ್ರ ಕಳ್ಳತನ ತಿಳಿಯುತ್ತಿದೆ. ತೋಟಯೊಂದರಲ್ಲಿ ಒಂದು ದಿನದಲ್ಲಿ ಕೊಯ್ಲು ನಡೆದ ಸಾಲಿನಲ್ಲೇ ಮುಂದುವರೆಯುವ ಕಳ್ಳರು ಅರಿವಿಗೆ ಬಾರದಂತೆ ಸಾವಿರಾರು ಬೆಲೆ ಬಾಳುವ ಅಡಕೆ ಗೊನೆ ಕದ್ದು ಸಾಗಿಸುತ್ತಾರೆ. ಕಾವಲು ಕಾಯುವ ರೈತರ ಕೈಗೆ ಕಳ್ಳರು ಸಿಕ್ಕರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಎಚ್ಚೆತ್ತು ಪ್ರಕರಣ ಬೇದಿಸಿ ರೈತರನ್ನು ಉಳಿಸಬೇಕು ಎಂದು ಸಲಹೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸಿಇಒ ಹೇಮಂತ್‌ಗೆ ಬೀಳ್ಕೊಡುಗೆ; ನೂತನ ಸಿಇಒ ರಿಷಿ ಆನಂದ್‌ ಸ್ವಾಗತಿಸಿದ ಜಿ.ಪಂ

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ನಿಕಟಪೂರ್ವ...

ಅಭಿಮಾನಿಗಳ ಆಸೆಯಂತೆ ದಸರೆಗೆ ಮರಳಿದ ಅಭಿಮನ್ಯು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು...

ದೆಹಲಿಯಲ್ಲಿ ಪತ್ರಕರ್ತೆಯರ ಮೇಲೆ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ ಶಿವಮೊಗ್ಗ ಕಾನಿಪಸ ಆಗ್ರಹ

ದೆಹಲಿಯ ಜಂತರ್‌ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ...

ತೀರ್ಥಹಳ್ಳಿ | ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? ತಹಶೀಲ್ದಾರ್‌ಗೆ ಪತ್ರ ಬರೆದಿದ್ದ ಬಿಜೆಪಿ ಮುಖಂಡ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...