ಹಾಸನ | ದಲಿತರ ಮೇಲೆ ದೌರ್ಜನ್ಯ, ಅಕ್ರಮ ಭೂಮಿ ವಶ; ಖಂಡಿಸಿ DHS ಪ್ರತಿಭಟನೆ

Date:

ದಲಿತರಿಗೆ ಸೇರಿದ ಜಮೀನನ್ನು ಅಕ್ರಮವಾಗಿ ದಬ್ಬಾಳಿಕೆಯಿಂದ ಒತ್ತುವರಿ ಮಾಡಿ, ದೌರ್ಜನ್ಯವೆಸಗುತ್ತಿರುವವರ ಮೇಲೆ ಕ್ರಮ ಜರುಗಿಸಿ, ನೊಂದ ದಲಿತ ಕುಟುಂಬಗಳಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಒತ್ತಾಯಯಿಸಿ, ದಲಿತ ಹಕ್ಕುಗಳ ಸಮಿತಿಯಿಂದ ಹೊಳೆನರಸೀಪುರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

- Advertisement -

ಹಳ್ಳಿ ಮೈಸೂರು ಹೋಬಳಿಯ ಜೋಡಿಗುಬ್ಬಿ ಗ್ರಾಮದ ಕಾಳಯ್ಯ ಬಿನ್ ಸಣ್ಣಯ್ಯ, ಚಿಕ್ಕಮ್ಮ ಬಿನ್ ಕಲ್ಯಾಣಯ್ಯ, ಕೃಷ್ಣಪ್ಪ ಬಿನ್ ಕರಿಯಯ್ಯ, ಉದ್ದೂರು ಗ್ರಾಮದ ಸಣ್ಣ ಮರಿಯಯ್ಯ, ರಾಮೇನಹಳ್ಳಿ ಗ್ರಾಮದ ವೆಂಕಟಯ್ಯ ಮತ್ತು ಜವರಯ್ಯ ಹಾಗು ಕೆರಗೋಡು ಗ್ರಾಮದ ಸಣ್ಣ ನಿಂಗಯ್ಯ ಈ ಎಲ್ಲರೂ ಪರಿಶಿಷ್ಟ ಜಾತಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಇವರುಗಳಿಗೆ ಉಯ್ಯಗೌಡನಹಳ್ಳಿ ಸರ್ವೆ ನಂಬರ್ 23, 24, 31, 32 ಇಲ್ಲಿ ಸರ್ಕಾರದಿಂದ ಮಂಜೂರಾದ  ಜಮೀನುಗಳಿದ್ದು ಅದರಲ್ಲಿ ಉಳುಮೆ ಮಾಡಿಕೊಂಡು ಅನುಭವದಲ್ಲಿದ್ದು, ತಮ್ಮ ಜೀವನ ನಡೆಸುತ್ತಿದ್ದಾರೆ.  ಇವರುಗಳಿಗೆ ಸೇರಿದ ಸದರಿ ಜಮೀನುಗಳನ್ನು ಜೊಡಿಗುಬ್ಬಿ ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಸೇರಿದವರುಗಳಾದ ಸುರೇಶ ಬಿನ್ ಕಿಟ್ಟೇಗೌಡ, ಪ್ರಕಾಶ ಬಿನ್ ನಂಜುಂಡೇಗೌಡ, ಶಿವಣ್ಣೇಗೌಡ ಬಿನ್ ಬಾಗೇಗೌಡ, ಹರೀಶ್ ಗೌಡ ಬಿನ್ ಸಣ್ಣಾರಿಗೌಡ, ಗಂಗಮ್ಮ ಕೋಂ ಸಣ್ಣಾರಿಗೌಡ, ರಾಮೇಗೌಡ ಮತ್ತು ಶಿವೇಗೌಡ ಎಂಬುವವರುಗಳು ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ದಬ್ಬಾಳಿಕೆಯಿಂದ ಒತ್ತುವರಿ ಮಾಡಿಕೊಂಡಿರುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ದಲಿತರು ತಮ್ಮ ಜಮೀನು ಒತ್ತುವರಿಯಾಗಿದೆ, ಬಿಟ್ಟುಕೊಡಿ ಎಂದು ಕೇಳಲು ಹೋದ ಸಂದರ್ಭದಲ್ಲಿ ದಲಿತರ ಮೇಲೆಯೇ ದೌರ್ಜನ್ಯ ನಡೆಸಲು ಮುಂದಾಗಿರುತ್ತಾರೆ. ಸುರೇಶ ಬಿನ್ ಕಿಟ್ಟೇಗೌಡ ಎಂಬುವವರು ದಲಿತರ ಜಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡುವುದ ಜೊತೆಗೆ ತನ್ನ ಕುಟುಂಬದವರೊಂದಿಗೆ ಸಣ್ಣನಿಂಗಯ್ಯ ಸೇರಿದ ಜಮೀನಿನಲ್ಲಿ ದನಕರುಗಳಿಗೆ ನಿರ್ಮಿಸಿದ್ದ ಗುಡಿಸಲಿಗೆ ಬೆಂಕಿ ಹಾಕಿ ಅವರ ಜಮೀನನನ್ನು ಒತ್ತುವರಿ ಮಾಡಿ ಜೆಸಿಬಿ ಇಂದ ಕಾಲುವೆ ತೆಗೆದು, ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ ಸಣ್ಣನಿಂಗಯ್ಯ ರವರ ಮಗ ಪರಮೇಶ್ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿರುತ್ತಾರೆ. ಈ ಬಗ್ಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಎಷ್ಟು ಬಾರಿ ದೂರು ನೀಡಿದರೂ ದೌರ್ಜನ್ಯ ನಡೆಸಿದವರ ಮೇಲೆ ಎಫ್ಐಆರ್ ಮಾಡದೇ,  ಕ್ರಮ ಕೈಗೊಳ್ಳದಿರುವುದು ಸರಿಯಾದುದಲ್ಲ.

ಇದು ದೌರ್ಜನ್ಯ ವೆಸಗಿದ ಬಲಾಢ್ಯರ ಪರವಾದ ಪೊಲೀಸರ ದಲಿತ ವಿರೋಧಿ ಮನಸ್ಥಿಯನ್ನು ತೋರಿಸುತ್ತದೆ. ಅಲ್ಲದೇ ಜೊಡಿಗುಬ್ಬಿ ಗ್ರಾಮದ ಜಿ.ಕೆ ಪರಮೇಶ್ ಎಂಬುವರು ನೊಂದ ದಲಿತರ ಪರವಾಗಿ ಇರುವುದನ್ನೂ ಸಹಿಸದ ಸುರೇಶ್ ಬಿನ್ ಕಿಟ್ಟೇಗೌಡ ತನ್ನ ಬಲಾಡ್ಯ ಜಾತಿ ಪ್ರಭಾವದಿಂದ ಜಿ. ಕೆ ಪರಮೇಶ್ ಎಂಬುವವರ ವಿರುದ್ಧ ಅಲ್ಲಿಯ ಜನರನ್ನು ಎತ್ತಿಕಟ್ಟುವುದು ಮತ್ತು ಶಾಸಕರಾದ ಎ. ಮಂಜು ರವರಿಗೆ ಇಲ್ಲ ಸಲ್ಲದ ಮಾಹಿತಿ ನೀಡಿ ಪಿತೂರಿ ನಡೆಸುವುದು ಹಾಗು ದಲಿತರ ವಿರುದ್ಧ ದಬ್ಬಾಳಿಕೆ ದೌರ್ಜನ್ಯ ನಡೆಸಲು ಕುಮ್ಮಕ್ಕು ನೀಡುತ್ತಿರುವ ಸುರೇಶ್ ಮೇಲೆ ಸೂಕ್ತ ಕಾನುನು ಕ್ರಮ ಜರುಗಿಸಬೇಕೆಂದು ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಡಿಎಚ್ಎಸ್  ಜಿಲ್ಲಾ ಸಂಚಾಲಕರಾದ ಎಂ.ಜಿ ಪೃಥ್ವಿ ಆಗ್ರಹಿಸಿದರು.

ಶತಮಾನಗಳಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಅಸ್ಪೃಶ್ಯತೆಯ ತುಳಿತಕ್ಕೆ ಒಳಗಾಗಿರುವ ದುರ್ಬಲ ದಲಿತ  ಸಮುದಾಯದವರಾದ ಸರ್ಕಾರದಿಂದ ಅಲ್ಪ‌ ಸ್ವಲ್ಪ ಭೂಮಿ ಮಂಜೂರಾಗಿದ್ದರೂ, ಅದರಲ್ಲಿ ಉಳುಮೆ ಮಾಡಿ ಬದುಕು ಸಾಗಿಸಲು ಬಿಡದೇ  ಈ ರೀತಿಯಲ್ಲಿ ಅಕ್ರಮವಾಗಿ ದಬ್ಬಾಳಿಕೆಯಿಂದ ಅವರ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವುದು ಅಕ್ಷಮ್ಯ. ದಲಿತರಿಗೆ ಮಂಜೂರಾಗಿರುವ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರಿಂದ ಜಮೀನನ್ನು ತೆರವುಗೊಳಿಸಿ ಸದರಿ ದಲಿತರಿಗೆ ಬಿಡಿಸಿ ಕೊಡಲು ಕೂಡಲೇ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸದಂತೆ ರಕ್ಷಣೆಗೆ ಕ್ರಮ ವಹಿಸಬೇಕೆಂದು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ (DHS) ಒತ್ತಾಯಿಸಿ ಮನವಿ ಮಾಡಲಾಯಿತು.

ಇದನ್ನೂ ಓದಿದ್ದೀರಾ?ಹಾಸನ ಮಣ್ಣಿನ ಹೆಣ್ಣು ಬೇರುಗಳು | ಕಾಯಕ ಯೋಗಿನಿ ಕಾಂಚನಮಾಲಾ

ಈ ವೇಳೆ ಪ್ರತಿಭಟನೆಯಲ್ಲಿ ಹೊಳೆನರಸೀಪುರ ತಾಲ್ಲೂಕು ಸಂಚಾಲಕರಾದ ರಾಜು ಸಿಗರನಹಳ್ಳಿ, ಸಿಐಟಿಯು ಮುಖಂಡ ಕುಮಾರಸ್ವಾಮಿ, ಜಿ.ಕೆ ಪರಮೇಶ್, ಕೃಷ್ಣಪ್ಪ, ಮರಿಯಯ್ಯ,ಕಾಳಯ್ಯ,ಸಣ್ಣನಿಂಗಯ್ಯ,ತಾಯಮ್ಮ, ಚಿಕ್ಕಮ್ಮ ಕರಿಯಯ್ಯ ವೆಂಕಟಯ್ಯ ಮತ್ತಿತರರು ಭಾಗವಹಿಸಿದ್ದರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...