ಹಾಸನ ಮಣ್ಣಿನ ಹೆಣ್ಣು ಬೇರುಗಳು | ಕಾಯಕ ಯೋಗಿನಿ ಕಾಂಚನಮಾಲಾ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...

”ಪರೋಪಕಾರಾರ್ಥಂ ಇದಂ ಶರೀರಂ”- ಪರೋಪಕಾರಕ್ಕಾಗಿಯೇ ಈ ಶರೀರ ಎಂಬ ತತ್ವಕ್ಕೆ ಬದ್ಧರಾಗಿ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಿರುವ ಕಾಂಚನಮಾಲಾರಂತಹವರು ಅಪರೂಪ. ಇವರು ಸೇವೆಯನ್ನೇ ಧ್ಯೇಯವಾಗಿಸಿಕೊಂಡವರು. ಎಲ್ಲಿ ಯಾವುದೇ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸ್ವಚ್ಛತಾ ಕಾರ್ಯ, ಆರೋಗ್ಯ ತಪಾಸಣೆ, ಮಧ್ಯವರ್ಜನ ಶಿಬಿರ, ಕೆರೆ ಹೂಳೆತ್ತುವ ಕಾರ್ಯ, ಪುಷ್ಕರಣಿಗಳ ಸ್ವಚ್ಛತೆ, ಪರಿಸರ ಜಾಗೃತಿ, ಪ್ಲಾಸ್ಟಿಕ್ ನಿರ್ಮೂಲನೆ… ಹೀಗೇ ಇನ್ನೂ ಯಾವುದೇ ಸಮಾಜಪರ ಕಾರ್ಯಕ್ರಮಗಳು ನಿರಾತಂಕವಾಗಿ, ಶಿಸ್ತಿನಿಂದ ಸಾಗುತ್ತಿದೆ ಎಂದರೆ ಅಲ್ಲಿ ಶಿಸ್ತಿನ ಸಿಪಾಯಿ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಕಾಂಚನಮಾಲ ಇದ್ದೇ ಇರುತ್ತಾರೆ ಎಂಬುದು ಖಚಿತ! ಅದು ದೊಡ್ಡದೇ ಇರಲಿ ಸಣ್ಣ ಕಾರ್ಯವೇ ಇರಲಿ ಎಲ್ಲೆಡೆಯೂ ಯಾವುದೇ ತಾರತಮ್ಯವಿಲ್ಲದ ಇವರ ಸೇವಾನಿಷ್ಠೆ, ಶ್ರದ್ಧೆ, ಕಾರ್ಯಕ್ಷಮತೆ ಯಾವುದೇ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯಲು ಸಹಕಾರಿಯಾಗಿದೆ.

- Advertisement -

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಹೀಗೆ ಕಾಂಚನಮಾಲಾ ಅವರ ನಿಷ್ಪಕ್ಷಪಾತ ಸೇವಾ ನಿಷ್ಠೆ, ಸಹಕಾರಕ್ಕೆ ಒಂದು ವೈಯಕ್ತಿಕ ಪ್ರಸಂಗವನ್ನು ಸ್ಮರಿಸಲೇಬೇಕು. ಹಿಂದೆ ಒಮ್ಮೆ ಒಂದು ಸಂಘಟನೆಯ ರಾಜ್ಯ ಸಮಿತಿ ಆಶಯದಂತೆ, ಜಿಲ್ಲಾ ಮಹಿಳಾ ಸಮಾವೇಶ ಏರ್ಪಾಟು ಮಾಡುವಂತೆ ದಿಢೀರನೆ ನಮಗೆ ತಿಳಿಸಲಾಯಿತು. ಭಾರತ್ ಬಂದ್‌ನ ನಡುವೆಯು ಆರಕ್ಷಕ ಠಾಣೆಯ ಅನುಮತಿ ಪಡೆದು, ಮರುದಿನ ಬೆಳಗಿನ ಜಿಲ್ಲಾ ಮಹಿಳಾ ಸಮಾವೇಶಕ್ಕೆ ನೀಡಲಾಗಿದ್ದ ವೇದಿಕೆ ಸಿದ್ಧತೆಯಲ್ಲಿರುವಾಗ, ಛತ್ರದ ಮಾಲೀಕರು ಕ್ಷುಲ್ಲಕ ಕಾರಣ ಒಡ್ಡಿ ಕಡೇ ಘಳಿಗೆಯಲ್ಲಿ ಸ್ಥಳವನ್ನು ಕೊಡಲು ಖಡಾಖಂಡಿತವಾಗಿ ನಿರಾಕರಿಸಿದರು. ಅದಾಗಲೇ ರಾಜ್ಯ ಸಮಿತಿಯವರು ಆಗಮಿಸಿದ್ದರು. ಕೊನೆಗೆ ಬೆಳಗ್ಗೆ ಮಾಡಬೇಕಾದ ಕಾರ್ಯಕ್ರಮವನ್ನು ಬೇರೆಡೆ ಮಾಡಿಕೊಡುವುದಾಗಿ ಒಪ್ಪಿಸಿದೆ. ಮುಂಜಾನೆ ಬೇಗನೆ ಮನೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೊರಟು, ಜೇಡರ ಬಲೆ, ದೂಳು, ಬೇಡದ ವಸ್ತು, ಕಸಕಡ್ಡಿಯಿಂದ ತುಂಬಿದ್ದ ಬೇರೊಂದು ಸ್ಥಳವನ್ನು ಒಳ ಹೊರಗೆಲ್ಲಾ ಸ್ವಚ್ಛಗೊಳಿಸಿ ಸಿಂಗರಿಸಿ ನಿಗದಿತ ಸಮಯ 9 ಗಂಟೆಗೆಲ್ಲಾ ಸಮಾವೇಶದ ಉದ್ಘಾಟನೆಗೆ ಸಿದ್ಧಪಡಿಸಲಾಯಿತು. ಅಂತಹಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾವೇಶದ ಸ್ಥಳಕ್ಕೆ ನಸುಕಿನಲ್ಲೇ ಆಗಮಿಸಿ ಆಪದ್ಬಾಂಧವರಾಗಿ ಕೈಜೋಡಿಸಿದ ಏಕೈಕ ವ್ಯಕ್ತಿ ಸಹೃದಯಿ ಕಾಂಚನಮಾಲರವರು. ಈ ಘಟನೆಯನ್ನು ಬದುಕಿನುದ್ದಕ್ಕೂ ಮರೆಯುವಂತೆಯೇ ಇಲ್ಲ.

ಇದನ್ನು ಓದಿದ್ದೀರಾ?: ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

ಇಂತಹದು ನನ್ನೊಬ್ಬಳ ಅನುಭವವಲ್ಲ. ಹೀಗೇ ಎಲ್ಲೇ ಏನೇ ಕೆಲಸ ನಡೆದರೂ ಅದಕ್ಕಾಗಿಯೇ ತಾನು ಮುಡಿಪಾಗಿರುವಂತೆ, ಅತ್ಯಂತ ಮುತುವರ್ಜಿ ವಹಿಸಿ, ಕಾಳಜಿಯಿಂದ ಅದು ನನ್ನದೇ ಎಂಬ ಶ್ರದ್ಧೆ ನಿಷ್ಠೆಯಿಂದ ಮುಂದಾಗುವ ನಮ್ಮ ಹೆಮ್ಮೆಯ ಮಹಿಳೆ ಕಾಂಚನಮಾಲಾರ ಕೊಡುಗೆ ಸ್ಮರಣೀಯ. ಅವರೆಷ್ಟು ಗಿಡ ನೆಟ್ಟಿದ್ದಾರೆ, ಅದೆಷ್ಟು ಗಿಡಗಳನ್ನು ಬೆಳೆಸಿದ್ದಾರೆ, ಅದೆಷ್ಟು ಕಲ್ಯಾಣಿಗಳ ಹೂಳೆತ್ತಲು ಶ್ರಮದಾನ ಮಾಡಿದ್ದಾರೆ… ಎಂಬುದು ಅವರಿಗೇ ಗೊತ್ತಿಲ್ಲ! ಸ್ಕೌಟ್ಸ್, ಗೈಡ್ಸ್ ಮಕ್ಕಳನ್ನು ಕಟ್ಟಿಕೊಂಡು ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಂಡು, ಈ ಇಳಿ ವಯಸ್ಸಿನಲ್ಲೂ ಬಸ್‌ನಲ್ಲೇ ಹಳ್ಳಿಹಳ್ಳಿ ಸುತ್ತಿ ಪರಿಸರದ ಕೆಲಸವನ್ನು, ಸ್ವಚ್ಛತೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ತಾನು ಹುಟ್ಟಿರುವುದೇ ಈ ಕೆಲಸ ಮಾಡುವುದಕ್ಕೆಂಬಂತೆ ಬದುಕನ್ನು ಗಂಧದಂತೆ ತೇಯುತ್ತಿರುವ ತಾಯಿ ಮನಸಿನ ಕಾಂಚನಮಾಲರಂತವರು ಅಪರೂಪದಲ್ಲಿ ಅಪರೂಪ.

ಇದನ್ನು ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ 

ಅವರು ಹುಟ್ಟಿದ್ದು 28.9.1949ರಂದು ಆಲೂರು ತಾಲ್ಲೂಕಿನ ಹಂಜಿಳಿಗೆ ಮಠದಲ್ಲಿ. ಮಧ್ಯಮ ವರ್ಗದ ಅವಿಭಕ್ತ ಕುಟುಂಬದ ಶ್ರೀ ಗುರುಬಸವಯ್ಯ, ಈರಮ್ಮ ದಂಪತಿಗಳ ಜ್ಯೇಷ್ಠ ಪುತ್ರಿಯಾಗಿ ಅವರು ಜನಿಸಿದರು. ಪ್ರಾಥಮಿಕ ಹಂತ ಕಲ್ಲಾರೆಯಲ್ಲಿ ಮುಗಿಸಿ, ಶೆಟ್ಟಿಹಳ್ಳಿ ರಾಯರಕೊಪ್ಪಲಿನಲ್ಲಿ 10ನೆಯ ತರಗತಿವರೆಗೆ ಶಿಕ್ಷಣ ಮುಗಿಸಿದರು. ನಂತರ ಹಿಂದಿ ರತ್ನ ಪರೀಕ್ಷೆ ಮುಗಿಸಿ, ಮೈಸೂರಿನಲ್ಲಿ ಹಿಂದಿ ಶಿಕ್ಷಕ ತರಬೇತಿ ನಂತರ, ಹಾನುಬಾಳಿನ ಬಾಳ್ಳುಪೇಟೆ ಸಿದ್ದಣ್ಣಯ್ಯ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡರು. ಪೂರ್ಣಾವಧಿಯಾಗಿ ಅದೇ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿ ‘ಜನ ಮೆಚ್ಚಿದ ಶಿಕ್ಷಕಿ’ ಪುರಸ್ಕಾರದೊಂದಿಗೆ ಅದೇ ಶಾಲೆಯಲ್ಲಿ ನಿವೃತ್ತಿ ಹೊಂದಿದರು. ಅವರು ಸದಾ ಮಕ್ಕಳ ಪ್ರೀತಿಯ ಶಿಕ್ಷಕಿಯಾಗಿದ್ದರು.

ಇದನ್ನು ಓದಿದ್ದೀರಾ?: ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ

Kanchanamala hassan1

ಅವರ ತಂದೆ ಹಿಂದಿನ ಎಲ್.ಎಸ್. ಪಾಸು ಮಾಡಿದ್ದರು. ಸರ್ಕಾರಿ ಉದ್ಯೋಗ ಪಡೆಯುವ ಅವಕಾಶವಿದ್ದರೂ ಒಬ್ಬನೇ ಮಗನಾಗಿದ್ದು ಅವರ ತಂದೆ ತಾಯಿ ಉದ್ಯೋಗಕ್ಕೆ ಕಳುಹಿಸಲು ಇಚ್ಛಿಸಲಿಲ್ಲವಂತೆ. ಇದರಿಂದಾಗಿ ಕಲಾವಿದರಾಗಿ, ಕಲಾ ಪೋಷಕರಾಗಿ, ಕಲಾರಾಧಕರಾಗಿ, ಗೊಂಬೆ ಮೇಳ, ಹರಿಕಥೆಯಂತಹ ಕಲೆಗಳನ್ನು ಪ್ರೋತ್ಸಾಹಿಸುತ್ತಾ ಸಮಾಜಸೇವೆಯಲ್ಲಿ ಮುಳುಗಿ ಹೋಗಿದ್ದರಂತೆ. ಮಕ್ಕಳು ಚೆನ್ನಾಗಿ ಓದಿ, ನೌಕರಿ ಮಾಡಲಿ ಎಂದು ಅಪೇಕ್ಷೆಪಟ್ಟರೂ, ಮಕ್ಕಳ ವಿವಾಹದ ವಿಷಯದಲ್ಲಿ, ಭವಿಷ್ಯ ರೂಪಿಸುವ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಲೇ ಇಲ್ಲ. ಹೀಗಾಗಿ ಅವರ ಮೂವರು ತಮ್ಮಂದಿರು ಮತ್ತು ಒಬ್ಬ ತಂಗಿಯ ಭವಿಷ್ಯ ರೂಪಿಸುವಲ್ಲಿ ಹಾಗೂ ಅವರ ವಿವಾಹದ ಜವಾಬ್ದಾರಿಯನ್ನು ಕಾಂಚನಮಾಲ ಅವರೇ ಹೊತ್ತು ನಿರ್ವಹಿಸಿದ್ದಾರೆ. ಅವರ ಒಡಹುಟ್ಟಿದವರ ಹೊಣೆಗಾರಿಕೆಯಲ್ಲಿ ಮೈಮರೆತು ತಮ್ಮ ವಿವಾಹದ ಬಗ್ಗೆ ನಿರಾಸಕ್ತಿ ತಳೆದು, ಅವಿವಾಹಿತರಾಗಿಯೇ ಉಳಿದುಬಿಟ್ಟರು. ವೃದ್ಧ ತಾಯಿಯ ಸೇವೆಯನ್ನು ಕೊನೆಯವರೆಗೂ ನಿಸ್ಪೃಹತೆಯಿಂದ ಮಾಡಿದರು. ನಿವೃತ್ತಿಯ ನಂತರವಂತೂ ಸಂಪೂರ್ಣ ಸಮಾಜಸೇವೆಯಲ್ಲಿ ನಿರತರಾದರು. ಈಗ 76ರ ವಯೋಮಾನದ ಕಾಂಚನಮಾಲಾ. ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಪ್ರೀ.ಎ.ಎಲ್.ಟಿ ತರಬೇತಿ ಪಡೆದು ಹಾಸನದಲ್ಲಿ ಆಯುಕ್ತರಾದರು. ನಂತರ, ಡಿಸ್ಟ್ರಿಕ್ಟ್ ಟ್ರೈನಿಂಗ್ ಕಮಿಷನರ್ ಆಗಿ, ತದನಂತರ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ರಾಜ್ಯದ ಮತ್ತು ಹೊರರಾಜ್ಯದ ಹಲವು ಭಾಗಗಳಲ್ಲಿ ಅಪೂರ್ವ ಸೇವೆಯನ್ನು ಇವರು ಸಲ್ಲಿಸಿದ್ದಾರೆ. ಪ್ರಸ್ತುತ ಕಾಂಚನಮಾಲಾ ಅವರು ಸೀನಿಯರ್ ಗೈಡ್ ಆಗಿ ಹಾಸನದಲ್ಲಿ ಸೇವಾ ನಿರತರಾಗಿದ್ದಾರೆ.

ಇದನ್ನು ಓದಿದ್ದೀರಾ?: ಅರ್ಥಶಾಸ್ತ್ರಜ್ಞೆ, ಐರನ್‌ಲೇಡಿ ಸುಶೀಲಾ ಸುಬ್ರಹ್ಮಣ್ಯ

ಕಾಂಚನಮಾಲಾ ಅವರ ನಿರಂತರ ಅನನ್ಯ ಸೇವೆಯನ್ನು ಗುರುತಿಸಿ ಸಂದಿರುವ ಪ್ರಶಸ್ತಿ ಪುರಸ್ಕಾರಗಳು ಅನೇಕ. ಅದರಲ್ಲಿ ಮುಖ್ಯವಾದುದನ್ನು ಮಾತ್ರ ಇಲ್ಲಿ ದಾಖಲಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ‘ಏಶಿಯಾ ಫೆಸಿಫಿಕ್ ಅವಾರ್ಡ್’, ಶಿಕ್ಷಣ ಇಲಾಖೆಯಿಂದ ‘ಜನ ಮೆಚ್ಚಿದ ಶಿಕ್ಷಕಿ’ ಪ್ರಶಸ್ತಿ, ಹಾಸನ ಸರ್ಕಾರಿ ಕಲಾ ಕಾಲೇಜಿನ ‘ವರ್ಷದ ವ್ಯಕ್ತಿ’ ಪುರಸ್ಕಾರ, ಯುನೈಟೆಡ್ ಅಕಾಡೆಮಿಯಿಂದ ‘ಕರ್ಮಯೋಗಿ’ ಪುರಸ್ಕಾರ, ರೋಟರಿ ಮತ್ತು ಲಯನ್ಸ್ ಸಂಸ್ಥೆಯಿಂದ ‘ಸೇವಾರತ್ನ’ ಪ್ರಶಸ್ತಿ… ಇನ್ನೂ ಮುಂತಾದ ಹಲವಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಅಜಾತಶತ್ರುವೂ, ತಮ್ಮ ನಿಷ್ಕಲ್ಮಶ ಸೇವೆಯಿಂದಾಗಿ- ಆದರ್ಶ ಮಹಿಳೆಯೂ ಆಗಿರುವ ಕಾಂಚನಮಾಲರನ್ನು ಎಲ್ಲ ವಯೋಮಾನದವರು ಗೌರವಿಸುತ್ತಾರೆ. ಅವರು ಹೆಣ್ಣುಸಂಕುಲಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅವರಿಗೆ ಆಯಸ್ಸು, ಆರೋಗ್ಯ ವೃದ್ಧಿಸಿ ಮುಂದಿನ ಜನಾಂಗಕ್ಕೆ ಇನ್ನಷ್ಟು ಪ್ರೇರಣೆಯಾಗಲಿ, ಮಾದರಿಯಾಗಲಿ ಎಂದು ಹಾರೈಸೋಣ.

-ಕಲಾವತಿ ಮಧುಸೂದನ, ಹಾಸನ

ಇದನ್ನು ಓದಿದ್ದೀರಾ?: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದೆ- ದಾಕ್ಷಾಯಿಣಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...