ಹಾಸನ | ಬೆಳೆಗಾರರು ಕೃಷಿ ಮಾಡಿ ಅರಣ್ಯ ಉಳಿಸದಿದ್ದರೆ ಕಾಡು ಉಳಿಯುತ್ತಿರಲಿಲ್ಲ: ಶಾಸಕ ಮಂಜು

Date:

ರಾಜ್ಯದಲ್ಲಿ ಅರಣ್ಯ ಉಳಿಸಿದ್ದೆ ಬೆಳೆಗಾರರು. ಬೆಳೆಗಾರರು ಕೃಷಿ ಮಾಡಿ ಅರಣ್ಯ ಉಳಿಸದಿದ್ದರೆ ಇಂದು ಅರಣ್ಯ ಉಳಿಯುತ್ತಲೇ ಇರಲಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ಹಾನುಬಾಳುನಲ್ಲಿ ನಡೆದ ಬೆಳಗಾರರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. “ಈ ಭಾಗದಲ್ಲಿ ಆನೆಗಳ ಸಮಸ್ಯೆಯೇ ದೊಡ್ಡ ತೊಂದರೆ ಎಂದು ತಿಳಿದು ಕೊಂಡರೆ ಅದಕ್ಕಿಂತ ಕೂಡ ದೊಡ್ಡ ತೊಂದರೆ ಅರಣ್ಯ ಇಲಾಖೆಯದ್ದು. ಅವರು ಈ ಭಾಗದಲ್ಲಿ ಸೆಕ್ಷನ್ 4ರ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದಾರೆ” ಎಂದು ಹೇಳಿದರು.

“ಅರಣ್ಯ ಇಲಾಖೆಯ ಅರಣ್ಯ ಉಳಿಸಲು ಅರಣ್ಯ ಅಧಿಕಾರಿಗಳ ಸಹಕಾರವೇ ಇಲ್ಲ. ಅರಣ್ಯ ಇಲಾಖೆಯ ಸಮಸ್ಯೆ ಬಗ್ಗೆ ಸಚಿವರಲ್ಲಿ ಎಲ್ಲರೂ ಸೇರಿ ಮಾತುಕತೆ ನಡೆಸಬೇಕು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, “ಸಕಲೇಶಪುರದ ಸಮಸ್ಯೆ ಇನ್ನೂ ಕೂಡ ಸಮಸ್ಯೆ ಆಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ” ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿಶ್ವನಾಥ್, ಹಿರಿಯ ಬೆಳೆಗಾರರಾದ ಬಿಳಿ ಗೌಡ್ರು, ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ್, ಕೆಜಿಎಫ್ ಅಧ್ಯಕ್ಷ ಡಾ. ಹೆಚ್.ಟಿ ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಬಿ ಕೃಷ್ಣಪ್ಪ, ಹೆಚ್‌ಡಿಪಿಎ ಅಧ್ಯಕ್ಷ ಸುಬ್ರಹ್ಮಣ್ಯ, ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಹಾನು ಬಾಳು ಭಾಸ್ಕರ್, ಸಂಘದ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬೈಕ್‌ಗೆ ಸಾರಿಗೆ ಬಸ್ ಢಿಕ್ಕಿ; ಒಂದೇ ಊರಿನ ಮೂವರು ಯುವಕರು ದುರ್ಮರಣ

ಸಾರಿಗೆ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಮೇಲೆ...

ಬೆಳಗಾವಿ | ಕರ್ನಾಟಕಕ್ಕೆ ಹರಿದುಬರುತ್ತಿದ್ದ ನೀರು ತಡೆದ ಮಹಾರಾಷ್ಟ್ರ; ಬ್ಯಾರೇಜ್‌ ಸುತ್ತ ಪೊಲೀಸ್‌ ನಿಯೋಜನೆ

ಮಹಾರಾಷ್ಟ್ರದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಂಬಿರುವ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ...

ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯ ಕೆಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ...

ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದೇ ದಿನ 51 ಮಂದಿ ಸಾವು; ಎಡಿಜಿಪಿ ಅಲೋಕ್ ಕುಮಾರ್

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಕ್ರಮೇಣ...