ಹಾಸನ | ಸರ್ಕಾರಿ ಶಾಲೆ ನವೀಕರಣ; ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಶ್ಲಾಘನೆ

0
42
ಸರ್ಕಾರಿ ಶಾಲೆ ನವೀಕರಣ

ಹಳೆ ವಿದ್ಯಾರ್ಥಿಗಳು ಶಾಲೆಯ ಮಾದರಿಗೆ ಧಕ್ಕೆ ತರದಂತೆ ನವೀಕರಿಸಿ, ಖಾಸಗಿ ಶಾಲೆಯನ್ನೂ ಮೀರಿಸುವಂತ ವ್ಯವಸ್ಥೆ ಕಲ್ಪಿಸಿರುವುದು, ದಾಖಲಾತಿ ಹೆಚ್ಚಿಸಿರುವುದು ಹೆಮ್ಮೆಯ ವಿಷಯ ಎಂದು ಅರಕಲಗೂಡು ಶಾಸಕ ಎ ಮಂಜು ಪ್ರಶಂಸಿಸಿದರು.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ನಿರ್ಮಿಸಿದ್ದ ಎರಡು ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

“ಪೋಷಕರು, ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಕನ್ನಡ  ಶಾಲೆಗಳನ್ನು ಉಳಿಸಬೇಕು. ಕೊಣನೂರಿನ ಈ ಶಾಲೆಯು ಪಿಎಂ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ವಿಷಯ” ಎಂದು ಶ್ಲಾಘಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ತುಮಕೂರು | ಕನ್ನಡ ಭಾಷೆ ವಿಶ್ವದ ಎಲ್ಲ ಜ್ಞಾನವನ್ನೂ ಸೃಷ್ಟಿಸುವ ವೈವಿಧ್ಯತೆ ಹೊಂದಿದೆ: ಡಾ.ಗೀತಾ ವಸಂತ

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ ಜೆ ರಾಜ, ಪಂಚಾಯಿತಿ ಅಧ್ಯಕ್ಷೆ ಮಿಜ್ಬಾ ರಿಜ್ವಾನ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯ ಮಧುಮೋಹನ್, ಶಿವಣ್ಣ, ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಬಾಲರಾಜ್, ಇಸಿಒ ನಾಗರಾಜ್, ಬಿಎಸ್ಎಸ್ ಪ್ರೌಢಶಾಲೆಯ ಉಪಪ್ರಾಂಶುಪಾಲ ಕೆ.ಎ. ನಾಗರಾಜ್, ಶಾಲಾ ಮುಖ್ಯ ಶಿಕ್ಷಕ ಸಣ್ಣೇಗೌಡ ಸೇರಿದಂತೆ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here