ಹಾಸನದಲ್ಲಿ ಸಂಚಲನ ಮೂಡಿಸಿದ ಪ್ರಭಾವಿ ರಾಜಕಾರಣಿಯ ಸೆಕ್ಸ್‌ ‘ಪೆನ್‌ಡ್ರೈವ್‌’

Date:

ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರದ್ದು ಎನ್ನಲಾದ ಸೆಕ್ಸ್‌ ವಿಡಿಯೋಗಳು ವಾಟ್ಸ್‌ಆಪ್‌ಗಳಲ್ಲಿ ಹರಿದಾಡುತ್ತಿದ್ದು ಜಿಲ್ಲೆಯಲ್ಲಿ ಗುಸುಗುಸು ಚರ್ಚೆಗೆ ಕಾರಣವಾಗಿದೆ.

ಯುವ ನಾಯಕರೊಬ್ಬರು ಹಲವು ಮಹಿಳೆಯರೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿ, ತಾವೇ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ವಿಡಿಯೊಗಳು ಲಭಿಸಿದ್ದು ಯಾರೋ ಅವುಗಳನ್ನು ಪೆನ್‌ಡ್ರೈವ್‌ಗಳಲ್ಲಿ ತುಂಬಿ ಹಾಸನದ ಹಲವು ಕಡೆ ಎಸೆದಿದ್ದಾರೆ. ಅವು ಜನರ ಕೈಗೆ ಸಿಕ್ಕಿ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ.

ಸೋಮವಾರ ಸಂಜೆ ಈ ವಿಡಿಯೊಗಳು ಬಯಲಿಗೆ ಬಂದಿವೆ. ಹಲವು ಹೆಣ್ಣುಮಕ್ಕಳನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿರುವ ದೃಶ್ಯಗಳಿರುವ ವಿಡಿಯೋಗಳು ವಾಟ್ಸಾಪ್‌ಗಳಲ್ಲಿ ಓಡಾಡುತ್ತಿದ್ದು ಕೆಲವರು ಮಹಿಳೆಯರ ಮುಖವನ್ನು ಬ್ಲರ್‌ ಮಾಡದೇ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯುವ ರಾಜಕೀಯ ನಾಯಕನೊಬ್ಬನು ಅನೇಕ ಮಹಿಳೆಯರೊಂದಿಗೆ ಪಾಲ್ಗೊಂಡಿರುವ ಕಾಮಕೇಳಿಯ ದೃಶ್ಯಗಳ ಪೆನ್‌ ಡ್ರೈವ್‌ಗಳು ಸಿಕ್ಕಿರುವ ಬಗ್ಗೆ ಸೋಮವಾರ ಕನ್ನಡ ಪ್ಲಾನೆಟ್‌ ಮೊದಲ ವರದಿ ಪ್ರಕಟಿಸಿತ್ತು. ಹಾಸನದ ಸಂಜೆ ದಿನಪತ್ರಿಕೆ ‘ಸತ್ಯದ ಹೊನಲು’ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಪ್ರಕಟಿಸಿದೆ. ಜಿಲ್ಲಾಮಟ್ಟದ ಹಲವು ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿವೆ.

ಹಾಸನದ ನಾಯಕರೊಬ್ಬರ ಅಶ್ಲೀಲ ವಿಡಿಯೋಗಳು ತಮ್ಮ ಬಳಿ ಇರುವುದಾಗಿ ವರ್ಷದ ಹಿಂದೆಯೇ ಬಿಜೆಪಿಯ ನಾಯಕರೊಬ್ಬರು ಪ್ರೆಸ್‌ಮೀಟ್‌ ಮಾಡಿ ಹೇಳಿದ್ದರು. ಅದು ಬಹಿರಂಗಗೊಂಡಲ್ಲಿ ಹಾಸನ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದು ತಲೆತಗ್ಗಿಸುವಂಥ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. ತಮ್ಮದೇ ಮೊಬೈಲ್‌ನಲ್ಲಿ ಸೇವ್‌ ಆಗಿದ್ದ ವಿಡಿಯೊ ಲೀಕ್‌ ಆಗಿರುವ ಬಗ್ಗೆ ಗೊತ್ತಾಗಿ, ಆ ನಾಯಕ ಕೋರ್ಟ್‌ನಿಂದ ಸ್ಟೇ ಕೂಡ ತಂದಿದ್ದರು.

ವಿಡಿಯೋದಲ್ಲಿ ಭಾಗಿಯಾಗಿರುವ ಯುವನಾಯಕ ಬೇರೆ ಬೇರೆ ಕಾರಣಗಳಿಗೆ ತನ್ನ ಬಳಿ ಬಂದ ಹೆಣ್ಣಮಕ್ಕಳನ್ನು ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿರುವುದಲ್ಲದೆ, ಎಲ್ಲರ ಜೊತೆಗಿನ ಕಾಮದಾಟವನ್ನು ತಾನೇ ರೆಕಾರ್ಡ್‌ ಮಾಡಿ ಇಟ್ಟುಕೊಂಡಿದ್ದಾನೆ. ಇದು ಇಡೀ ರಾಜ್ಯವೇ ಕಂಡುಕೇಳರಿಯದ ಲೈಂಗಿಕ ಹಗರಣ ಎಂಬ ಮಾತುಗಳು ಹಾಸನದಲ್ಲಿ ಕೇಳಿಬರುತ್ತಿವೆ. ವಿಡಿಯೋ ತುಣುಕುಗಳು ಸಾರ್ವಜನಿಕಗೊಂಡು ಮೂರು ದಿನಗಳಾದರೂ ಈ ಬಗ್ಗೆ ಆ ನಾಯಕನಾಗಲಿ, ಅವರ ಕುಟುಂಬವಾಗಲಿ, ಪಕ್ಷದವರಾಗಲಿ, ಮೈತ್ರಿ ಮಾಡಿಕೊಂಡಿರುವ ಪಕ್ಷದವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

ಒಂದು ಸುದ್ದಿಯಲ್ಲಿ ತಮ್ಮ ಹೆಸರು ಬಳಸದಿರುವಂತೆ ಸಂಸದ ಪ್ರಜ್ವಲ್‌ ರೇವಣ್ಣ ಈ ಹಿಂದೆಯೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಪೂರ್ಣಚಂದ್ರ ತೇಜಸ್ವಿ ರಂಗ ಮಂದಿರದಲ್ಲಿ ಮೇ 15ರಂದು ʼಮಲೆಯಾದ್ರಿ ನಾಟಕʼ ಪ್ರದರ್ಶನ

ಹಾಸನದ ಸಕಲೇಶಪುರ ತಾಲೂಕಿನ ರಕ್ಷದಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಪ್ರಾಕೃತಿಕ...

ಪ್ರಜ್ವಲ್ ಲೈಂಗಿಕ ಹಗರಣ | ಪೆನ್‌ಡ್ರೈವ್‌ ಕೇಸ್‌ನಲ್ಲಿ ಕಾರ್ತಿಕ್‌ ಸೇರಿ ನಾಲ್ವರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ...

ಹಾಸನ | ರೌಡಿಶೀಟರ್ ಮಾಸ್ತಿಗೌಡ ಹತ್ಯೆ ಪ್ರಕರಣ; 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕಳೆದ ವರ್ಷ, ರೌಡಿಶೀಟರ್ ಮಾಸ್ತಿಗೌಡ ಎಂಬಾತನನ್ನು ಹತ್ಯೆಗೈದಿದ್ದ ರೌಡಿಶೀಟರ್ ಯಾಚೇನಹಳ್ಳಿ ಚೇತು...

ಪ್ರಜ್ವಲ್ ಲೈಂಗಿಕ ಹಗರಣ | ದೇವರಾಜೇಗೌಡ ಆರೋಪ ಸುಳ್ಳು – ಬಹಿರಂಗ ಚರ್ಚೆಗೆ ಬರಲಿ; ಶ್ರೇಯಸ್ ಪಟೇಲ್ ಸವಾಲು

ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ...