ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

Date:

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ ನೋಡದೆ, ಅವರು ಹೊಂದಿದ್ದ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಅರ್ಥಮಾಡಿಕೊಳ್ಳಬೇಕು ಎಂದು ಡಾ. ಎಚ್ ಆರ್ ಸ್ವಾಮಿ ಅವರು ಅಭಿಪ್ರಾಯಪಟ್ಟರು.

- Advertisement -

ಭಗತ್‌ ಸಿಂಗ್‌ ಹುಟ್ಟುಹಬ್ಬದ ಅಂಗವಾಗಿ ಹಾಸನ ನಗರದಲ್ಲಿ ಹಮ್ಮಿಕೊಂಡಿದ್ದ ‘ನಾನೇಕೆ ನಾಸ್ತಿಕ’ ಕಾರ್ಯಕ್ರಮದ ಅಧ್ಯಕ್ಷೀಯ ನುಡಿಯಲ್ಲಿ ʼನಾಸ್ತಿಕತೆ ಎಂದರೇನು?ʼ ಎಂಬುದರಲ್ಲಿ ನಾಸ್ತಿಕತೆ, ವೈಚಾರಿಕತೆ ಮತ್ತು ಭಗತ್ ಸಿಂಗ್ ಅವರ ವಿಚಾರಧಾರೆಯ ಕುರಿತು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಹಾಸನ ಜಿಲ್ಲೆಯಲ್ಲಿ ವೈಚಾರಿಕ ಚಿಂತನೆಗಳನ್ನು ಬೆಳೆಸುವ ಹಲವು ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದ ಅವರು, 2012ರಲ್ಲಿ ಬೇಲೂರಿನಲ್ಲಿ ನಡೆದ ವೈಚಾರಿಕ ಚಿಂತನೆಯ ಕಾರ್ಯಕ್ರಮಗಳು ಸೇರಿದಂತೆ ಜಿಲ್ಲೆಯಲ್ಲಿ ವೈಚಾರಿಕ ಚಳವಳಿಗೆ ಸಂಬಂಧಿಸಿದಂತೆ ನಡೆದ ವಿವಿಧ ಚಟುವಟಿಕೆಗಳನ್ನು ಅವರು ನೆನಪಿಸಿಕೊಂಡರು.

“ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ ಬೆಳೆಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಪ್ರಶ್ನಿಸುವ, ಚರ್ಚಿಸುವ ಮತ್ತು ವಿಚಾರಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಭಗತ್ ಸಿಂಗ್ ಅವರ ‘ನಾನು ನಾಸ್ತಿಕನಾಗಿರುವುದೇಕೆ?’ ಎಂಬ ಬರಹವನ್ನು ಉಲ್ಲೇಖಿಸಿದ ಅವರು, “ನಾಸ್ತಿಕತೆ ಎಂದರೆ ಕೇವಲ ದೇವರನ್ನು ವಿರೋಧಿಸುವುದಲ್ಲ; ದೇವರ ಅಸ್ತಿತ್ವದ ಕುರಿತು ಪ್ರಶ್ನಿಸುವುದು, ಯಾವುದೇ ನಂಬಿಕೆಯನ್ನು ಕುರುಡಾಗಿ ಸ್ವೀಕರಿಸದೆ ಅದರ ಆಧಾರವನ್ನು ಪರಿಶೀಲಿಸುವುದು ಹಾಗೂ ಮನುಷ್ಯನ ಬದುಕಿನ ಸಮಸ್ಯೆಗಳನ್ನು ವೈಚಾರಿಕವಾಗಿ ಅರ್ಥಮಾಡಿಕೊಳ್ಳುವುದು ನಾಸ್ತಿಕ ಚಿಂತನೆಯ ಪ್ರಮುಖ ಅಂಶಗಳಾಗಿವೆ” ಎಂದು ವಿವರಿಸಿದರು.

ಭಗತ್ ಸಿಂಗ್ ಅವರು ತಮ್ಮ ಕಾಲದಲ್ಲಿಯೇ ಧರ್ಮ, ದೇವರು, ನಂಬಿಕೆ ಹಾಗೂ ಸಾಮಾಜಿಕ ವ್ಯವಸ್ಥೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. 1928ರ ಅವಧಿಯಲ್ಲಿ ಅವರು ಬರೆದ ಪತ್ರಗಳು ಮತ್ತು ಲೇಖನಗಳಲ್ಲಿ ಅಸ್ಪೃಶ್ಯತೆ, ಧರ್ಮಾಂತರ, ಸಾಮಾಜಿಕ ಅಸಮಾನತೆ ಹಾಗೂ ಮಾನವ ಹಕ್ಕುಗಳಂತಹ ಪ್ರಶ್ನೆಗಳ ಕುರಿತು ಚರ್ಚಿಸುತ್ತಿದ್ದರು” ಎಂದು ಅವರ ನುಡಿಗಳನ್ನು ನೆನಪಿಸಿದರು.

“ನಾಸ್ತಿಕತೆ ಎಂದರೆ ದೇವರನ್ನು ವಿರೋಧಿಸುವುದಷ್ಟೇ ಅಲ್ಲ; ಅದು ವೈಚಾರಿಕತೆಯ ಒಂದು ರೂಪ” ಎಂಬ ಅರ್ಥದಲ್ಲಿ ಅವರು ತಮ್ಮ ವಿಚಾರವನ್ನು ಮಂಡಿಸಿದರು. ಮನುಷ್ಯನಿಗೆ ಎದುರಾಗುವ ಯಾವುದೇ ಸಮಸ್ಯೆಗೆ ಅತೀಂದ್ರಿಯ ಶಕ್ತಿಗಳಲ್ಲಿ ಪರಿಹಾರ ಹುಡುಕುವುದಕ್ಕಿಂತ, ಅದರ ಕಾರಣಗಳನ್ನು ತಿಳಿದುಕೊಂಡು ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ವೈಚಾರಿಕವಾಗಿರುವವರು ಮತ್ತು ನಾಸ್ತಿಕರು ಸಮಾಜದಲ್ಲಿ ಎದುರಿಸುವ ವಿರೋಧದ ಬಗ್ಗೆಯೂ ಮಾತನಾಡಿದ ಅವರು, “ಪ್ರಶ್ನಿಸುವವರನ್ನು ಮತ್ತು ವೈಜ್ಞಾನಿಕವಾಗಿ ಚಿಂತಿಸುವವರನ್ನು ಸಮಾಜದಲ್ಲಿ ಕೆಲವೊಮ್ಮೆ ಅನುಮಾನದಿಂದ ನೋಡಲಾಗುತ್ತದೆ. ಆದರೆ ಸಾಮಾಜಿಕ ಪ್ರಗತಿಗೆ ಪ್ರಶ್ನಿಸುವ ಮನೋಭಾವ ಅತ್ಯಗತ್ಯ” ಎಂದು ಹೇಳಿದರು.

ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡುವಾಗ, “ವ್ಯಕ್ತಿಯ ವೈಯಕ್ತಿಕ ನಂಬಿಕೆಯನ್ನು ಮಾತ್ರ ಪ್ರಶ್ನಿಸುವುದಲ್ಲ; ಆ ನಂಬಿಕೆಗಳು ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪರಿಶೀಲಿಸಬೇಕು. ದೇವರು ಎಲ್ಲವನ್ನೂ ಸರಿಪಡಿಸುತ್ತಾನೆ ಎಂಬ ನಂಬಿಕೆಯ ಬದಲು, ಮನುಷ್ಯನೇ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಬಾಗೇಪಲ್ಲಿ | 13ನೇ ರಾಜ್ಯಮಟ್ಟದ ಡಿ.ವೈ.ಎಫ್.ಐ ಯುವಜನ ಸಮ್ಮೇಳನ ಅಂಗವಾಗಿ ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಂದ ವಿಚಾರ ಸಂಕಿರ್ಣ

“ಮನೆ, ಶಾಲೆ, ಸಮಾಜ ಹಾಗೂ ಸಾರ್ವಜನಿಕ ಜೀವನದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಗೋಡೆಯ ಮೇಲೆ ದೇವರ ಚಿತ್ರ ಹಾಕಿರುವುದರಿಂದ ಅಥವಾ ಪೂಜೆ ಮಾಡುವುದರಿಂದ ಮಾತ್ರ ಸಮಾಜದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಮಸ್ಯೆಗಳ ಮೂಲವನ್ನು ಅರ್ಥಮಾಡಿಕೊಂಡು, ಮನುಷ್ಯನ ಪ್ರಯತ್ನದ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು” ಎಂಬ ಸಂದೇಶವನ್ನು ನೀಡಿದರು.

“ಭಗತ್ ಸಿಂಗ್ ಅವರ ನಾಸ್ತಿಕತೆಯನ್ನು ಕೇವಲ ದೇವರ ನಿರಾಕರಣೆಯಾಗಿ ಅರ್ಥೈಸದೆ, ಸ್ವತಂತ್ರ ಚಿಂತನೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಹಾಗೂ ಮನುಷ್ಯನ ಮೇಲಿನ ನಂಬಿಕೆಯಾಗಿ ಅರ್ಥಮಾಡಿಕೊಳ್ಳಬೇಕು” ಎಂದು ಡಾ. ಎಚ್ ಆರ್ ಸ್ವಾಮಿ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಮರಗಳ ಹರಾಜು ಅಕ್ರಮ, ತನಿಖೆಗೆ ವಿಶೇಷ ತಂಡ ರಚಿಸಲು ರೈತ ಸಂಘ ಆಗ್ರಹ

ಕೋಲಾರ–ವೇಮಗಲ್ ರಸ್ತೆ ವಿಸ್ತರಣೆಗೆ ಮರಗಳ ತೆರವು ಸಂಬಂಧ ನಡೆದಿರುವ ಹರಾಜು ಪ್ರಕ್ರಿಯೆಯಲ್ಲಿ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...

ಕೋಲಾರ | ನರಸಾಪುರ ಕೆ ಬಿ ಹೊಸಹಳ್ಳಿ ಬಂಡೆಯಲ್ಲಿ ಯಲಹಂಕ ಬಾಗಲೂರು ಮೂಲದ ಲಾರಿ ಚಾಲಕನ ಸಾವು

ಜಿಲ್ಲೆಯ ಕೆ.ಬಿ. ಹೊಸಹಳ್ಳಿ ಬಂಡೆಯಲ್ಲಿ ಯಲಹಂಕ ಮೂಲದ ಲಾರಿ ಚಾಲಕ ಮೃತಪಟ್ಟಿರುವ...