ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹೇಮಾವತಿ ನಾಲೆಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವಕ ಹೇಮಂತ್, ಎರಡು ದಿನಗಳ ಶೋಧ ಕಾರ್ಯದ ಬಳಿಕ ನಾಪತ್ತೆಯಾಗಿದ್ದ ಯುವಕ, ಮೃತದೇಹ ಪತ್ತೆಯಾಗಿದೆ.ತಾಲೂಕಿನ ಕ್ರೀಡಾಂಗಣದ ಹಿಂಭಾಗದಲ್ಲಿರುವ ಮಾಸ್ತಿಯಮ್ಮ ದೇವಾಲಯದ ಸಮೀಪ ನಾಲೆಯಲ್ಲಿ ಹೇಮಂತ್ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಬುಧವಾರ ಸಂಜೆ ಬೈಕ್ ಸ್ಕಿಡ್ ಆಗಿ ಹೇಮಂತ್ ಹೇಮಾವತಿ ನಾಲೆಗೆ ಬಿದ್ದಿರಬಹುದು ಎನ್ನಲಾಗಿದೆ. ಘಟನೆ ಬಳಿಕ ಅವರು ನಾಪತ್ತೆಯಾಗಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ಆತಂಕಗೊಂಡಿದ್ದರು. ಮಾಹಿತಿ ತಿಳಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಶ್ವರ್ ಮಲ್ಪೆ ತಂಡದ ಸದಸ್ಯರು ಶೋಧ ಕಾರ್ಯ ಆರಂಭಿಸಿದ್ದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು |ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣ
ಹೇಮಾವತಿ ನಾಲೆಯಲ್ಲಿ ನಿರಂತರವಾಗಿ ಹುಡುಕಾಟ ನಡೆಸಲಾಗುತ್ತಿತ್ತು. ನಾಲೆಯ ನೀರಿನ ಹರಿವು ಹಾಗೂ ಸ್ಥಳದ ಪರಿಸ್ಥಿತಿಯ ನಡುವೆಯೂ ತಂಡಗಳು ಹಲವು ಗಂಟೆಗಳ ಕಾಲ ಶೋಧ ನಡೆಸಿದ್ದವು. ಇದೀಗ ಚನ್ನರಾಯಪಟ್ಟಣ ಕ್ರೀಡಾಂಗಣದ ಹಿಂಭಾಗದ ಮಾಸ್ತಿಯಮ್ಮ ದೇವಾಲಯದ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.




