ಹಾಸನ | ಭಗತ್ ಸಿಂಗ್ ಹುತಾತ್ಮ ದಿನದಂದು ಪ್ರತಿಜ್ಞೆ; ನಮ್ಮೂರ ಶಾಲೆ, ನಮ್ಮ ಹಕ್ಕು!

Date:

ಹಾಸನ ನಗರದಲ್ಲಿ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ವಿರುದ್ಧ,ನಮ್ಮೂರ ಶಾಲೆ ಉಳಿಸಲು ಹಾಸನದ ಮಹಾರಾಜ ಪಾರ್ಕ್, ಆನಂದ ಭಾರತಿ ಪ್ರೌಢಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಣಿವಿಲಾಸ ಹಾಗೂ ವಿವಿಧ ಹಳ್ಳಿಗಳಲ್ಲಿ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಜ್ಞಾ ದಿನವನ್ನು ಸೋಮವಾರ  ಆಚರಿಸಲಾಯಿತು. 

- Advertisement -

ಜಿಲ್ಲಾ ಕಾರ್ಯದರ್ಶಿಯಾದ ಸುಷ್ಮಾಮಾತನಾಡಿ  “ಮಾರ್ಚ್ 23,1931 ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ ದಿನ. ನಗುನಗುತ್ತ ಗಲ್ಲಿಗೇರಿದ ಮೂವರು ಅಪ್ರತಿಮ ದೇಶಪ್ರೇಮಿಗಳಿಗಾಗಿ ಇಡೀ ದೇಶ ಕಣ್ಣೀರಿಟ್ಟ ದಿನ. ಭಗತ್ ಸಿಂಗರ ವಿಚಾರಗಳನ್ನು ಈಡೇರಿಸಲು ಸಾವಿರಾರು ಜನಗಳು ಪ್ರಾಣ ತ್ಯಾಗಕ್ಕೆ ಅಂದು ಸಿದ್ದರಾಗಿ ಬೀದಿಗಿಳಿದರು. ಸ್ವಾತಂತ್ರ್ಯ ನಂತರ ಭಾರತ ದೇಶದ ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕೊಡುವುದು ಸರ್ಕಾರದ ಜವಾಬ್ದಾರಿಯಾಗಬೇಕು ಎಂದು ಕನಸು ಕಂಡಿದ್ದರು ಆದರೆ  ಇಂದಿನ ಎಲ್ಲ ಸರ್ಕಾರಗಳು ಬಡ, ರೈತ,ಕೂಲಿ ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಕಸಿಯುವ ಹುನ್ನಾರ ನಡೆಯುತ್ತಿದೆ. “ಮ್ಯಾಗ್ನೆಟ್” ಎಂಬ ನೆಪದಲ್ಲಿ ಸರ್ಕಾರವು ನಮ್ಮ ಊರಿನ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಹಂತ ಹಂತವಾಗಿ ಮುಚ್ಚಲು ಪ್ರಯತ್ನಿಸುತ್ತಿರುವಾಗ, ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಹೆಣ್ಣು-ಹಣ-ಚಾರಣ ಹಗರಣ: ಜಾಗತಿಕ ಚಿಪ್ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ...

ಚಿಪ್ ಸಾಮ್ರಾಜ್ಯದ ಸಿಇಒ ಸುತ್ತ ಹೆಣೆದುಕೊಂಡಿರುವ ವಿವಾಹೇತರ ಸಂಬಂಧ, ಚೀನಿ ಚಾರಣ ಜಾಲ ಮತ್ತು ಭದ್ರತಾ ಆರೋಪಗಳು ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಂತ್ರಜ್ಞಾನ ದೈತ್ಯರ ಒಳಸುಳಿಗಳೇನು? ಭಾರತದ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್...

ಜಿಲ್ಲಾ ಉಪಾಧ್ಯಕ್ಷರಾದ ಅಭಿಷೇಕ್ ಮಾತನಾಡಿ “ನಮ್ಮ ಈ ಮುಂದಿನ ಹಂತದ ಹೋರಾಟಕ್ಕೆ ಸ್ಫೂರ್ತಿ ತುಂಬಲು, ನಾವು ಶಹೀದ್-ಎ-ಅಜಮ್ ಭಗತ್ ಸಿಂಗ್ ಅವರ ಅದ್ವಿತೀಯ ಸಂಘರ್ಷದ ಕಡೆ ನೋಡಬೇಕಿದೆ. ಇದು ಕೇವಲ ಸಾಂಕೇತಿಕ ಗೌರವ ಸಲ್ಲಿಸುವ ಸಮಯವಲ್ಲ, ಬದಲಾಗಿ ‘ಪೂರ್ಣ ಪ್ರತಿರೋಧದ ಪ್ರತಿಜ್ಞೆ’ ಮಾಡುವ ಸಮಯ. “ಕ್ರಾಂತಿಯ ಖಡ್ಗವು ವೈಚಾರಿಕತೆಯ ಸಾಣೆಕಲ್ಲಿನ ಮೇಲೆ ಹರಿತಗೊಳ್ಳುತ್ತದೆ” ಎಂದು ಭಗತ್ ಸಿಂಗ್ ನಮಗೆ ನೆನಪಿಸಿದ್ದರು. ಕಳೆದ ನಾಲ್ಕು ತಿಂಗಳುಗಳಿಂದ ನಾವು ನಮ್ಮ ಧ್ವನಿಯನ್ನು ಬಳಸಿದ್ದೇವೆ; ಈಗ, ಮಹಾನ್ ಕ್ರಾಂತಿಕಾರಿಯ ವಿಚಾರಗಳನ್ನು ಬಳಸಿಕೊಂಡು ನಮ್ಮ ಸಂಕಲ್ಪವನ್ನು ಹರಿತಗೊಳಿಸಬೇಕು. ಕರ್ನಾಟಕದ ಅತ್ಯಂತ ದೂರದ ಮೂಲೆಯಲ್ಲಿರುವ ಬಡ ಮಗುವಿನ ಶಿಕ್ಷಣದ ಹಕ್ಕನ್ನು ಯಾವ ನೀತಿಯೂ ಕಿತ್ತುಕೊಳ್ಳದಂತೆ ನಾವು ನೋಡಿಕೊಳ್ಳಬೇಕು.

ಕೆ.ಪಿ.ಎಸ್ ಮ್ಯಾಗ್ನೆಟ್ ನೀತಿಯು ಭಗತ್ ಸಿಂಗ್ ಅವರು ಯಾವ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೋ ಅಂದರೆ ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಸಮಾಜ—ಆ ದೃಷ್ಟಿಕೋನದ ಮೇಲಿನ ನೇರ ದಾಳಿಯಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವ ಬದಲು “ಅನುಕೂಲಕ್ಕೆ ತಕ್ಕಂತೆ ಬಳಸುವ ಸಂಪನ್ಮೂಲ” ಎಂದು ನೋಡುವ ಮೂಲಕ, ರಾಜ್ಯ ಸರ್ಕಾರವು ಒಂದು ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಕೇವಲ ಕೆಲವು “ಕೇಂದ್ರಗಳು”  ಮಾತ್ರ ಉಳಿಯುತ್ತವೆ ಮತ್ತು ನಮ್ಮ ಹಳ್ಳಿಯ ಶಾಲೆಗಳು ನಶಿಸಿಹೋಗುತ್ತವೆ. ಅವರ ಎಚ್ಚರಿಕೆಯನ್ನು ನಾವು ನೆನಪಿಸಿಕೊಳ್ಳಲೇಬೇಕು.

“ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ ಮತ್ತು ಬದಲಾವಣೆಯ ಕಲ್ಪನೆಯನ್ನು ಕೇಳಿಯೇ ನಡುಗುತ್ತಾರೆ. ಈ ಜಡ ಮನೋಭಾವದ ಜಾಗದಲ್ಲಿ ಕ್ರಾಂತಿಕಾರಿ ಚೈತನ್ಯ ಬರಬೇಕಿದೆ.” ನಮ್ಮ ಶಾಲೆಗಳ ಮುಚ್ಚುವಿಕೆಗೆ ಒಗ್ಗಿಕೊಳ್ಳಲು ನಾವು ನಿರಾಕರಿಸುತ್ತೇವೆ. ಆಡಳಿತಾತ್ಮಕ ಅನುಕೂಲಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಗೊಡುವ ಈ “ಜಡ ಮನೋಭಾವ”ವನ್ನು ನಾವು ಒಪ್ಪುವುದಿಲ್ಲ ಎಂದು ಘೋಷಿಸುವ ಸಮಯ ಇದಾಗಿದೆ. ಭಗತ್ ಸಿಂಗ್ ಅವರು ತಮ್ಮ ವಿಚಾರಣೆಯ ಸಮಯದಲ್ಲಿ ಧೈರ್ಯವಾಗಿ ಹೇಳಿದಂತೆ, “ಕ್ರಾಂತಿ ಎಂದರೆ ಕೇವಲ ರಕ್ತಪಾತವಲ್ಲ. ಅದು ಸೇಡಿನ ಕ್ರಮವೂ ಅಲ್ಲ. ಅದು ಸಾಮಾಜಿಕ ಬದಲಾವಣೆಯ ಒಂದು ನಿರ್ದಿಷ್ಟ ಪ್ರಕ್ರಿಯೆ.” ನಮ್ಮ ಚಳುವಳಿಯು ಅದೇ ಬದಲಾವಣೆಯ ಪ್ರಕ್ರಿಯೆಯಾಗಿದೆ ಎಂದರು.

ಆಲೂರು ತಾಲೂಕಿನ ದೇವರಾಜಪುರ, ಅಜ್ಜೇನಹಳ್ಳಿ ಹಾಗೂ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಾಗೇನಹಳ್ಳಿ, ಯಲಗುಂದ, ಸಿಂಗಟಗೆರೆ, ಹಂಗರಹಳ್ಳಿ, ಹೊಸೂರು ಹಾಗೂ ಗೊರೂರಿನ ತ್ಯಾಗಟೂರು, ಅಂಬೇಡ್ಕರ್ ನಗರ ಮತ್ತು ಮೂಲ ಸರ್ಕಾರಿ ಶಾಲೆಗಳಲ್ಲಿ ಭಗತ್ ಸಿಂಗ್ ಹುತಾತ್ಮ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚೈತ್ರ, ಉಪಾಧ್ಯಕ್ಷರಾದ ಅಭಿಷೇಕ್, ಕಾರ್ಯದರ್ಶಿ ಸುಷ್ಮಾ, ಸದಸ್ಯರುಗಳಾದ ಭಾನುಶ್ರೀ, ಶ್ರೇಷ್ಠ, ಧನುಶ್ರೀ, ಪರಶುರಾಮ್ ಸುಶ್ಮಿತಾ, ಪಲ್ಲವಿ ಹಾಗೂ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಜನರ ಅಹವಾಲು ಆಲಿಸಲು ಸಚಿವ ಕಾಶಪ್ಪನವರ ನೂತನ ಕಚೇರಿ ಆರಂಭ

ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳಿಗೆ ನೇರವಾಗಿ ಸ್ಪಂದಿಸುವ ಉದ್ದೇಶದಿಂದ ಸಣ್ಣ ಕೈಗಾರಿಕೆ...

ಕೆಂಚಲಗೂಡು ರೈತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದ ರೈತರಿಗೆ ಜಿಲ್ಲಾಡಳಿತದೊಂದಿಗೆ ಮಾಡಿಕೊಂಡ...