“ಪ್ರತಿ ಜೀವಿಯ ಬದುಕಿಗೆ ಉತ್ತಮ ಸಮತೋಲನ ಪರಿಸರ ಅಗತ್ಯವಾಗಿದ್ದು, ಪರಿಸರ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ” ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರು ಸಂಜೀವಕುಮಾರ ನೀರಲಗಿ ಹೇಳಿದರು.
ಹಾವೇರಿ ಪಟ್ಟಣದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ವಿಕಲಚೇತನರ ಪುನವರ್ಸತಿ ಕೇಂದ್ರದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ಅವರು ಮಾತನಾಡಿದರು.
“ಉತ್ತಮ ಆರೋಗ್ಯಯುತ ಬದುಕಿಗೆ ಪರಿಸರ ಬಹಳ ಮುಖ್ಯವಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಗಿಡ ನೆಡುವ ಕಾರ್ಯ ಮಾಡಬೇಕಾಗಿದೆ. ಸರ್ಕಾರ ಅರಣ್ಯ ಇಲಾಖೆಯ ಜೊತೆಗೆ ಸಹಕಾರ ನೀಡೋಣ” ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಪರಿಸರ ಜಾಗೃತಿ ಘಟಕದ ನಿರ್ದೇಶಕರು ಸಿದ್ದರಾಜ ಕಲಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಂಘ,ಸಂಸ್ಥೆಯ ವತಿಯಿಂದ ಹೆಚ್ಚು ಸಸಿ ನೆಡುವ ಕೆಲಸ ಮಾಡಬೇಕಾಗಿದೆ. ಪರಿಸರದಲ್ಲಿನ ಗಿಡಗಳು ನಮಗೆ ಜೀವಾಳು ಆದ ಆಮ್ಲಜನಕ ನೀಡುತ್ತೇವೆ. ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ.ಪರಿಸರ ಉಳಿಸಿ ಬೆಳಿಸಲು ಎಲ್ಲರಿಗೂ ಪಣತೋಡಬೇಕಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು” ಎಂದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯರು ರವಿ ಮೆಣಸಿನಕಾಯಿ, ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಸಹಕಾರ್ಯದರ್ಶಿ ಡಾ.ಪ್ರದೀಪ ದೊಡ್ಡಗೌಡ್ರ, ಖಜಾಂಚಿ ಪ್ರಭು ಹಿಟ್ನಳ್ಳಿ, ಸದಸ್ಯರು ರವಿ ಹಿಂಚಿಗೇರಿ, ಹನುಮಂತಗೌಡ ಗೊಲ್ಲರ, ಉಡಚಪ್ಪ ಮಾಳಗಿ, ನಾಗಪ್ಪ ಇಚ್ಚಂಗಿ, ಶಿವಯೋಗಯ್ಯ ಹಿರೇಮಠ, ಡಾ|| ಪಿ.ಆರ್ ಹಾವನೂರ, ವಿಜಯಕುಮಾರ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಕೊಟುರ, ಉಜ್ವಲ ಹಿರೇಗೌಡ್ರ, ಡಿಡಿಆರ್‌ಸಿ ನೋಡಲ್ ಅಧಿಕರಿ ಶ್ರೀಮತಿ ಪುರ್ಣಿಮಾ ಮಠದ, ಪಿಜಿಯೋಥೇರಪಿಸ್ಟ್ ಡಾ|| ಅಂಕಿತ ಆನಂದ ಹಾಗೂ ಡಿಡಿಆರ್‌ಸಿ ಸಿಬ್ಬಂದಿಗಳು ಇರ್ಶಾದಲಿ ದುಂಡಸಿ, ಫಕ್ಕಿರೇಶ ಬಾರಕೇರ, ನವೀನ ಮುಗದೂರ, ಜಗದೀಶ ಬೇಟಗೇರಿ ಉಪಸ್ಥಿತರಿದ್ದರು.




