SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರದ ಕಗ್ಗೊಲೆ ಮಾಡಲು ಹೊರಟಿದೆಯೇ! ಜನ ಜಾಗೃತಿ ಮೂಡಿಸುತ್ತಿರುವುದೇಕೆ?

Date:

ಪ್ರಜಾತಂತ್ರ ಕೊಲ್ಲುವ ಅಸ್ತ್ರ SIR ವಿರೋಧಿಸಿ ಜನ ಜಾಗೃತಿ ಜಾಥವನ್ನು ಶಿರಸಿಯಿಂದ ಶುರು ಮಾಡಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಬಾಳೆಹೊನ್ನೂರ್ ಮಾರ್ಗವಾಗಿ ಆಲ್ದೂರು, ಮೂಡಿಗೇರೆ, ಚಿಕ್ಕಮಗಳೂರು, ಕಡೂರು, ಹಾಸನ ಜಿಲ್ಲೆಯ ಬೇಲೂರು ವ್ಯಾಪ್ತಿಯಲ್ಲಿ ಜನರಿಗೆ ಅರಿವನ್ನು ಮೂಡಿಸಿದರು.

- Advertisement -
Screenshot 2026 06 22 00 32 31 19 7352322957d4404136654ef4adb64504

ಈ ವೇಳೆಯಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತಾಡಿ ‘ ಸಂವಿಧಾನ ವಿರುದ್ಧವಾಗಿ ಜನರ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ತಿಳಿಸಿದರು. ಭದ್ರಕಾಡು ನಿಗಮದ ಅಧ್ಯಕ್ಷರಾದ ಅಂಶುಮಂತ್ ಮಾತಾಡಿ’ ದೇಶದಲ್ಲೇ ಈ SIR ಯೋಜನೆ ತಂದು ವೋಟ್ ಚೋರಿ ನಡೆಸಿದ್ದಾರೆ. ನಮ್ಮ ರಾಜ್ಯದಲ್ಲಿ ಪಕ್ಷ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಹಾಗೆಯೇ, ಇದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಆಲ್ದೂರಿನಲ್ಲಿ SDPI ಮುಖಂಡ ಮುಸ್ತಫಾ ಮಾತಾಡಿ’ ನಮ್ಮ ದೇಶ ಸೌಹಾರ್ದ ಪರಂಪರೆ ಹೊಂದಿದೆ. ಅದನ್ನು ಹೊಡೆಯುವ ಹೊನ್ನಾರ ಕೇಂದ್ರ ಸರ್ಕಾರ ಒಂದೊಂದು ರೀತಿಯ ಯೋಜನೆಗಳು ಮಾಡುತ್ತಿವೆ. ಅದೇ ರೀತಿಯಲ್ಲಿ SIR ಯೋಜನೆಯಿಂದ ಬಡ ಜನರು ನಶಿಸುತ್ತಿದ್ದಾರೆಂದು ಮಾತಾಡಿದರು.SIR ಮೂಲಕ ಜನರ ಮತಾಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರ BJP ಸರ್ಕಾರ ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ ಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ನಗರದಿಂದ ಮೂಡಿಗೆರೆಗೆ ಆಗಮಿಸಿದ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ಚುನಾವಣಾ ಆಯೋಗವನ್ನು ಬಳಸಿಕೊಂಡು ಪ್ರಜಾತಂತ್ರ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ನಾಶಪಡಿಸುತ್ತಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಎಲ್ಲಾ ಸಂಘಟನೆಗಳು ಒಟ್ಟುಗೂಡಿ SIRನಿಂದ ಆಗಬಹುದಾದ ಅನಾಹುತಗಳನ್ನು ಹಿಮ್ಮೆಟ್ಟಿಸಬೇಕಿದೆ, ಆ ನಿಟ್ಟಿನಲ್ಲಿ 30 ರಿಂದ ಪ್ರಾರಂಭವಾಗುತ್ತಿರು ಎಸ್ಐಆರ್ ನಲ್ಲಿ ಮತದಾರರ ಪಟ್ಟಿಯಿಂದ ಯಾರೊಬ್ಬರ ಹೆಸರು ತಪ್ಪಿಹೋಗದಂತೆ ಎಚ್ಚರವಹಿಸಬೇಕಿದೆ ಎಂದರು. ಸ್ವಾತಂತ್ರ ಬಂದ ಸಂದರ್ಭದಲ್ಲಿ ಶೂನ್ಯದಿಂದ ಈ ದೇಶವನ್ನು ಮಹನೀಯರ ನೇತೃತ್ವದಲ್ಲಿ ನಿರ್ಮಿಸಲಾಗಿದೆ, ಆದರೆ ಕಳೆದ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯೇ ಎಲ್ಲವನ್ನು ಮಾಡಿದ್ದೇವೆ ಎಂದು ಜನರಿಗೆ ಮಂಕುಬೂದಿ ಎರಚುತಗತಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಆಶಯಗಳನ್ನು ಹತ್ತಿಕುವ ಕೆಲಸ ಮಾಡುತ್ತಿರುವ ಬಿಜೆಪಿ ಅದನ್ನು SIR ಜಾರಿಯ ಮೂಲಕ  ಸುಲಭ ಮಾಡಿಕೊಂಡಿದೆ ಎಂದು ಕೇಂದ್ರ ಹುನ್ನಾರವನ್ನು ಎಳೆ ಎಳೆಯಾಗಿ ಬಿಚ್ಚಿಟರು. ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಎದ್ದೇಳು ಕರ್ನಾಟಕದ ಮುಖಂಡರಾದ ಗೌಸ್ ಮೊಹಿದೀನ್ ಮಾತನಾಡಿ ಮತದಾರರು ಸರ್ಕಾರವನ್ನು ಆಯ್ಕೆ ಮಾಡುವ ಬದಲಾಗಿ, ಸರ್ಕಾರವೇ ಮತದಾರರನ್ನು ಆಯ್ಕೆ ಮಾಡುವ ಹಂತಕ್ಕೆ ಪರಿಸ್ಥಿತಿ ಬದಲಾಗಿದೆ. ಆದರೆ ನಾವು ನಮ್ಮ ರಕ್ತ ಕೊಟ್ಟಾದರೂ ನಮ್ಮ ಮಗಳನ್ನು ಉಳಿಸಿಕೊಳ್ಳುತ್ತೇ ಎಂದು ಕೇಂದ್ರ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Screenshot 2026 06 22 00 34 11 91 7352322957d4404136654ef4adb64504

ಸಿಪಿಐ (ML) ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ SIR ಮೂಲಕ ಆದಿವಾಸಿ, ಬುಡಕಟ್ಟು, ದಲಿತ ಮತ್ತು ಅಲ್ಪಸಂಖ್ಯಾತರನ್ನು ಅವಕಾಶವಂಚಿತರನ್ನಾಗಿ ಮಾಡುತ್ತಿದೆ. ಜನರ ಹಕ್ಕುಗಳನ್ನು ಕಿತ್ತುಕೊಳ್ಳು ಮೂಲಕ ದೇಶದಲ್ಲಿ ಸರ್ವಾಧಿಕಾರ ತರಲು ಸಂಘಪರಿವಾರ ಪಿತೂರಿ ಮಾಡುತ್ತಿದೆ, ಅಸ್ಸಾಂ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ SIR ಜಾರಿ ಮಾಡುವ ಮೂಲಕ ಲಕ್ಷಾಂತರ ಅರ್ಹ ಮತದಾರರ ಹೆಸರನ್ನು ತೆಗೆಯಲಾಗಿದೆ. ಇದನ್ನು ಕರ್ನಾಟಕದಲ್ಲಿ ನಡೆಯದಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

SIR ಜನಜಾಗೃತಿ ಜಾಥದ ಮಾರ್ಗ-3ರ ನೇತೃತ್ವ ವಹಿಸಿರುವ.ತಂಡದಲ್ಲಿ ಒಬ್ಬರಾದ ಸುರೇಶ್ ನಾಯ್ಕ್ ರವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಕೂಡಲೆ ಎಚ್ಚೆತ್ತುಕೊಂಡು ಯಾವೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಹೊಣೆಯನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಬೇರೆ ಬೇರೆ ರಾಜ್ಯಗಳಲ್ಲಿ ಆದಂತೆ ಇಲ್ಲೂ ಕೂಡ ಸಾಕಷ್ಟು ಮತದಾರರ ಹೆಸರು ಹೊರಗುಳಿಯುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಇಂದು ನಿಧನರಾದ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರಿಗೆ ಎಲ್ಲರೂ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅಧಿಕಾರಿಗಳ ಕೊರತೆಯಿಂದ ಪುರಸಭೆ  ಕಾರ್ಯ ಹಿನ್ನಡೆ 

ಕಾಂಗ್ರೆಸ್ ಹಿರಿಯ ಮುಖಂಡರು ಬಿದರಹಳ್ಳಿ ಜಯರಾಂ, BSP ತಾಲ್ಲೂಕು ಅಧ್ಯಕ್ಷರಾದ ರಮೇಶ್, BSP ರಾಜ್ಯ ಉಪಾಧ್ಯಕ್ಷರು,ಜಾಕೀರ್ ಹುಸೇನ್, SDPI ತಾಲ್ಲೂರು ಅಧ್ಯಕ್ಷರಾದ ಷರೀಫ್ M.U ಸಾಮಾಜಿಕ ಹೋರಾಟಗಾರರಾದ ಹರೀಶ್ ಮತ್ತಿತರರು ಉಪಸ್ಥಿತರಿದ್ದರು. ಜಾಥಾದ ನೇತೃತ್ವವನ್ನು ಸುರೇಶ್ ನಾಯ್ಕ್, ಮುನ್ನ ಕಡೂರು, ರಾಮು ಕೌಳಿ, ಪವಿತ್ರ, ಸುಮಂತ್ ಮತ್ತು ಗಿರಿಜಾ ವಹಿಸಿದ್ದರು, ಬಹಿರಂಗ ಸಭೆಯ ವೇಳೆ ಹಲವು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಧಿಕಾರಿಗಳ ನಿರ್ಲಕ್ಷ್ಯದಿಂದ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ : ಸಂಜೀವ ಬಳ್ಕೂರು

ರಾಯಚೂರು ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ...

ಗದಗ | ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ: ಕಡಿವಾಣಕ್ಕೆ ಆಗ್ರಹ

ಗದಗ ಜಿಲ್ಲೆಯ ಬಡ ಅಲ್ಪಸಂಖ್ಯಾತರ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ಪ್ರಮಾಣಿಕವಾಗಿ ದೊರಕಿಸಿ...

ಕೋಲಾರ | ವಿದ್ಯಾರ್ಥಿನಿಯ ನಾಲ್ಕು ವರ್ಷದ ವಿದ್ಯಾಭ್ಯಾಸಕ್ಕೆ ಎಲ್.ಜಿ. ಫೌಂಡೇಶನ್ ನೆರವು

ವಕ್ಕಲೇರಿ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ ಅವರ ಪುತ್ರಿಯ ನಾಲ್ಕು ವರ್ಷದ...

ಬಾಗೇಪಲ್ಲಿ | ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ಸೂತ್ರವನ್ನುಮುಂದುವರಿಸಬೇಕು ಎಂದು ಬೆಂಗಳೂರು ಛಲೋ

ರಾಜ್ಯದಲ್ಲಿ 15 ಸಾವಿರ ಹಿಂದಿ ಶಿಕ್ಷಕರು ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ...