ಹಾವೇರಿ | ಬೆಟಗೇರಿ ಕೃಷ್ಣಶರ್ಮ, ವಿ.ಕೃ. ಗೋಕಾಕರು ಕನ್ನಡ ವಿವೇಕ ಕಟ್ಟಿದವರು: ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

Date:

ಬೆಟಗೇರಿ ಕೃಷ್ಣಶರ್ಮ ಮತ್ತು ವಿ.ಕೃ. ಗೋಕಾಕರು ತಮ್ಮ ಬರವಣಿಗೆಯಲ್ಲಿ ನೆಲದ ಸಂವೇದನೆಗಳ ಮೂಲಕ ಕನ್ನಡ ವಿವೇಕವನ್ನು ಕಟ್ಟಿದವರು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿದ ದಿಗ್ಗಜರು” ಎಂದು ಹಿರಿಯ ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ನುಡಿದರು.

- Advertisement -

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪೂರ ಪಟ್ಟಣದ ನಾಡ ಶಿಕ್ಷಣ ಸಮಿತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ವಿ.ಕೃ. ರಾಷ್ಟ್ರೀಯ ಸ್ಮಾರಕ ಟ್ರಸ್ಟ ಮತ್ತು ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟಿನ ಸಂಯುಕ್ತ ಆಶ್ರಯದಲ್ಲಿ ‘ಕನ್ನಡದ ವಿವೇಕ : ಕಾವ್ಯಾನುಸಂಧಾನ’ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷರು ಡಾ.ವಿನಯಾ ವಕ್ಕುಂದ ಮಾತನಾಡಿ, “ಗೋಕಾಕ ಮತ್ತು ಬೆಟಗೇರಿ ಅವರ ಸಾಧನೆ ಮತ್ತು ಸಾಹಿತ್ಯವನ್ನು ಯುವ ಜನಾಂಗಕ್ಕೆ ಬೆಸೆಯುವುದೇ ಸಂಕಿರಣದ ಉದ್ದೇಶ ಎಂದು ಹೇಳಿ,  ಇರ್ವರು ಬದುಕಿನ ವಿಶಾಲತೆಯನ್ನು ಸದಾಕಾಲ ಹುಡುಕಿದವರು” ಎಂದರು.

ಸಮಾರೋಪದಲ್ಲಿ ಪ್ರಾಚಾರ್ಯ ಡಾ. ರಮೇಶ ಎನ್ ತೆವರಿ ಮಾತನಾಡಿ, “ಮನುಷ್ಯತ್ವವನ್ನು ಎತ್ತಿ ಹಿಡಿಯುತ್ತ ಬದುಕಿನ ಸರಿ ತಪ್ಪುಗಳನ್ನು ವಿಮರ್ಶಿಸುವುದೇ ಕನ್ನಡದ ವಿವೇಕ” ಎಂದು ಹೇಳಿ ಪಂಪ, ಕುವೆಂಪು, ಬೆಟಗೇರಿ ಹಾಗೂ ಗೋಕಾಕರಂತವರ ಸಾಹಿತ್ಯವನ್ನು ವಿವೇಕದಿಂದ ಸ್ಮರಿಸುವದೇ ಕವ್ಯಾನುಸಂಧಾನ” ಎಂದರು.

“ವಿ.ಕೃ.ಗೋಕಾಕರ ಕಾವ್ಯದಲ್ಲಿ ಕನ್ನಡ ಜಗತ್ತು ಮತ್ತು ಬೆಟಗೇರಿ ಕೃಷ್ಣಶರ್ಮರ ಕಾವ್ಯದಲ್ಲಿ ಕನ್ನಡದ ಲೋಕದೃಷ್ಠಿ ಎಂಬೆರಡು ವಿಷಯಗಳ ಮೇಲೆ ಅನುಕ್ರಮವಾಗಿ ಅಕ್ಕಿಆಲೂರ ಸಿ.ಜಿ. ಬೆಲ್ಲದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಆರ್ ಮತ್ತು ಧಾರವಾಡದ ಡಾ. ಶ್ರೀಧರ ಹೆಗಡೆ ಭದ್ರನ್ ಪ್ರಬಂಧಗಳನ್ನು ಮಂಡಿಸಿದರು.

“ಕನ್ನಡ ಭಾಷೆಯನ್ನು ಭಾರತದೆತ್ತರಕ್ಕೆ ಪರಿಚಯಿಸಿದ ಗೋಕಾಕರು ಭಾಷೆ ಮತ್ತು ಅನುಭಾವಗಳನ್ನು, ಕಟ್ಟುವ ರೀತಿಯಲ್ಲಿ ಸಾಹಿತ್ಯವನ್ನು ರಚಿಸಿದವರು. ಆಧ್ಯಾತ್ಮ ಮತ್ತು ದಾರ್ಶನಿಕತ್ವ ಒಳಗೊಂಡ ಗೋಕಾಕರ ಸಾಹಿತ್ಯ ನವ್ಯಕ್ಕೆ ದಾರಿ ಮಾಡಿತು ಎಂದು ಡಾ. ಕೃಷ್ಣಮೂರ್ತಿ ಹೇಳಿದರು.

“ಆನಂದಕಂದರದು ನೆಲದಿಂದ ಹುಟ್ಟಿದ ಕಾವ್ಯ, ಪಾಶ್ಚಾತ್ಯ ಸಾಹಿತ್ಯದ ಯಾವ ಸೋಂಕು ಇಲ್ಲದ ಅಪ್ಪಟ ದೇಶೀ ಪ್ರೀತಿಯದು. ಜನಪದ ಎಳೆಗಳಲ್ಲಿ ಹೆಣೆಯಲ್ಪಟ್ಟ ಅವರ ಕಾವ್ಯಗಳಲ್ಲಿ ಬದುಕಿನ ವೈವಿಧ್ಯಮಯ ಜಗತ್ತು” ಎಂದು ಡಾ. ಭದ್ರನ್ ಹೇಳೀದರು. 

ಅಧ್ಯಕ್ಷತೆಯನ್ನು ಗೋಕಾಕ ಟ್ರಸ್ಟಿನ ಅಧ್ಯಕ್ಷರು ಡಾ. ಸತೀಶ ಕುಲಕರ್ಣಿ ಅವರು ವಹಿಸಿದ್ದರು. ಸಮಾರಂಭದಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ, ಡಾ. ನಾಜನೀನ ಹಿರೇಕುಂಬಿ, ಟ್ರಸ್ಟಿನ ಸದಸ್ಯರುಗಳಾದ ಮಾರುತಿ ಶಿಡ್ಲಾಪೂರ, ಲಿಂಗರಾಜ ಸೊಟ್ಟಪ್ಪನವರ ಮುಂತಾದವರಿದ್ದರು. ಡಾ. ಜಗನ್ನಾಥ ಹೇನಣ್ಣವರ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಬದಲ್ಲಿ ಆನಂದಕಂದ ಗೆಳೆಯರ ಬಳಗದ ರವೀಂದ್ರ ಕುಲಕರ್ಣಿ ಹಾಗೂ ಸಂಗಡಿಗರಿಂದ ಗೋಕಾಕ ಮತ್ತು ಆನಂದಕಂದರ ಗೀತೆಗಾಯನ ಜರುಗಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ, SIR ನಿಲ್ಲಿಸಿ; ಸಿಪಿಐಎಂ-ಸಿಪಿಐ ಪ್ರತಿಭಟನೆ 

ತಪ್ಪಾಗಿ ಹೊರಗಿಡಲಾದವರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಿ. ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು...

ರಾಯಚೂರು | ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ: ಅ.15ರಿಂದ ಜಂತರ ಮಂಥರ್‌ನಲ್ಲಿ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಘನತೆಗೆ ಧಕ್ಕೆ ಉಂಟುಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಾರಣರಾಗಿದ್ದಾರೆ...

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...