ಹಾವೇರಿ | ಹಳೆ ಮಾದರಿಯಲ್ಲಿಯೇ ರೈತರಿಗೆ ರಸಗೊಬ್ಬರ  ವಿತರಿಸಲು ರೈತ ಸಂಘ ಮನವಿ

Date:

“ರಾಜ್ಯ ಸರ್ಕಾರ ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ರೈತರಿಗೆ ರಸ ಗೊಬ್ಬರ ನೀಡುವಲ್ಲಿ ವಿಫಲವಾಗಿದೆ. ಎಫ್.ಐ.ಡಿ. ಮುಖಾಂತರ ರಸಗೊಬ್ಬರ ನೀಡುವುದನ್ನು ನಿಲ್ಲಿಸಬೇಕು. ಹಳೆ ಮಾದರಿಯಲ್ಲಿಯೇ ರೈತರಿಗೆ ರಸಗೊಬ್ಬರ ವಿತರಿಸಬೇಕು” ರೈತ ಮುಖಂಡರು ಒತ್ತಾಯಿಸಿದರು.

- Advertisement -

ಹಾವೇರಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಎಫ್ಐಡಿ ನಿಲ್ಲಿಸಿ ರೈತರಿಗೆ ರಸಗೊಬ್ಬರ ನೀಡಲು ಹಾಗೂ ಬೆಳೆ ವಿಮೆ ಮಂಜೂರು ಮಾಡುವಂತೆ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, “ಹಾವೇರಿ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಭೌಗೋಳಿಕವಾಗಿ ವಿಸ್ತೀರ್ಣ ಒಟ್ಟು 4.85.156 ಹೆಕ್ಟೇ‌ರ್ ಈ ಪೈಕಿ 3.54.570 ಹೆಕ್ಟೇರ್ ನಿವ್ವಳ ಬಿತ್ತನೆ ಕ್ಷೇತ್ರವಾಗಿದ್ದು, ಜಿಲ್ಲೆಯಲ್ಲಿ ಮುಸುಕಿನ ಜೋಳ, ಕಬ್ಬು, ಕುಸುಬಿ, ಹತ್ತಿ, ಸೋಯಾಬೀನ್, ಸೂರ್ಯಕಾಂತಿ, ಭತ್ತ, ಜೋಳ, ಹಾವೇರಿ ಜಿಲ್ಲೆಯ ಮುಖ್ಯ ಬೆಳೆಗಳಾಗಿವೆ. ಜಿಲ್ಲೆಯಲ್ಲಿ ಸುಮಾರು ಮೂರು ತಲೆಮಾರುಗಳಿಂದ ಅರಣ್ಯ ಭೂಮಿ ಮತ್ತು ಬಗರ್ ಹುಕುಂ, ಇತರೆ ಸರ್ಕಾರಿ ಜಮೀನು ಸಾಗುವಳಿ ಮಾಡಿದ ಸಾವಿರಾರು ಕುಟುಂಬಗಳಿದ್ದು ಅಂದಾಜು 25.000 ಕ್ಕೂ ಹೆಚ್ಚು ಹೆಕ್ಟೇರ್ ಸಾಗುವಳಿ ಜಮೀನು ಇರುತ್ತದೆ. ಈ ರೈತರಿಗೆ ಇನ್ನೂ ಜಮೀನು ಹಕ್ಕು ಪತ್ರ ನೀಡಿಲ್ಲ. ಇವರಿಗೆ ಸರ್ಕಾರ ಯಾವುದೇ ಸಾಲ ಸೌಲಭ್ಯ ಕೊಟ್ಟಿಲ್ಲ. ಈಗ ಸರ್ಕಾರ ಎಫ್.ಐ.ಡಿ. ಮುಖಾಂತರ ರಸಗೊಬ್ಬರ ನೀಡುವುದಾಗಿ ಹೇಳುತ್ತದೆ. ಹಕ್ಕು ಪತ್ರ ನೀಡದ ರೈತರಿಗೆ ಯಾವ ರೀತಿ ಗೊಬ್ಬರ ನೀಡುತ್ತದೆ ? ಹಳೆ ಮಾದರಿಯಲ್ಲಿ ರೈತರಿಗೆ ರಸಗೊಬ್ಬರ ನೀಡಬೇಕು” ಎಂದು ಒತ್ತಾಯಿಸಿದರು.

“ಹಾವೇರಿ ಜಿಲ್ಲೆಯಲ್ಲಿ 2025-26 ರ ಬೆಳೆ ವಿಮೆ ತುಂಬಿದ ರೈತರಿಗೆ ಜಿಲ್ಲೆಯ 38 ಪಂಚಾಯತಗೆ ಜಮೆ ಆಗಿದೆ. ಇನ್ನೂ ಅನೇಕ ಗ್ರಾಮ ಪಂಚಾಯತಗಳಲ್ಲಿ ಬೆಳೆವಿಮೆ ಬಂದಿರುವುದಿಲ್ಲ. ಈ ಎಲ್ಲಾ ರೈತರಿಗೆ ಬೆಳೆವಿಮೆ ನೀಡಬೇಕು. ಸಣ್ಣ ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕಡು ಬಡವರು, ಬಿ.ಪಿ.ಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಪಡಿತರ ಚೀಟಿ ನೀಡಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಯಾವುದೇ ಯೋಜನೆ ಪಡೆಯಲು ಪಡಿತರ ಚೀಟಿ ಇರದೆ ಬಡವರಿಗೆ ಅನ್ಯಾಯವಾಗಿದೆ. ಸರ್ಕಾರ ಕಡುಬಡವರಿಗೆ ಬೇಗನೇ ಪಡಿತರ ಚೀಟಿ ವಿತರಣೆ ಮಾಡಬೇಕು” ಎಂದು ಒತ್ತಾಯಿಸಿದರು.

“2026 ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಣಿಕಲ್ಲು ಮಳೆಗೆ ತೋಟಗಾರಿಕಾ ಬೆಳೆಗಳಾದ ಎಲೆಬಳ್ಳಿ, ಕಲ್ಲಂಗಡಿ, ದಾಳಿಂಬರಿ ಇನ್ನೂ ಹಲವಾರು ತೋಟಗಾರಿಕಾ ಬೆಳೆಗಳು ಹಾನಿಯಾಗಿರುತ್ತವೆ. ಇವುಗಳಿಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

“2024-25 ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದನದ ಕೊಟ್ಟಿಗೆ, ಕುರಿಶೆಡ್ಡು, ಕೋಳಿಶೆಡ್ಡು. ಇನ್ನೂ ಅನೇಕ ವೈಯುಕ್ತಿಕ ಕಾಮಗಾರಿಗಳನ್ನು ಸಾಲಸೋಲ ಮಾಡಿ ರೈತರು ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿದ್ದಾರೆ. ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ನೀಡಿರುವುದಿಲ್ಲ” ಎಂದರು.

“ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೃಷಿ ಬೆಳೆ ಸಾಲವನ್ನು ಪಡೆದವರು, ಬೆಳೆ ಹಾನಿಯಾದಾಗ, ಅತೀವೃಷ್ಠಿ, ಅನಾವೃಷ್ಠಿಗೆ ಈಡಾದಾಗ ಸಕಾಲಕ್ಕೆ ಸಾಲ ಮರು ಪಾವತಿ ಮಾಡುವುದು ವಿಳಂಬವಾಗುತ್ತದೆ. ಮರುಪಾವತಿ ಮಾಡಿದ ರೈತರಿಗೆ ಕೃಷಿ ಸಾಲಕ್ಕೆ ಸಿಬಿಲ್ ಕಡ್ಡಾಯಗೊಳಿಸಬಾರದು. ಇದರಿಂದ ರೈತರಿಗೆ ಕೃಷಿ ಸಾಲ ಸಿಗದೇ ಖಾಸಗಿ ಲೇವಾದೇವಿದಾರರರಿಂದ ಸಾಲ ಪಡೆದ ರೈತರು ಬಡ್ಡಿ ಹೊರೆ ಜಾಸ್ತಿಯಾಗಿ ರೈತರ ಸರಣಿ ಆತ್ಮ ಹತ್ಯೆ ಹಾವೇರಿ ಜಿಲ್ಲೆಯಲ್ಲಿ ರಾಜ್ಯದಲ್ಲಿ ಹೆಚ್ಚಿದೆ. ಸರ್ಕಾರ ಸಿಬಿಲ್ ಸ್ಕೋರ್ ನಿಲ್ಲಿಸಬೇಕು” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರು ಅಶೋಕ ಶಿಗಡಿಹಳ್ಳಿ, ಪುಟ್ಟಪ್ಪ ಬೆಂತಿಹಳ್ಳಿ, ಗೀತಾ ಕ. ಹಿರೇಕೆರೂರು, ಚೆನ್ನಮ್ಮ ಸಾತೇನಹಳ್ಳಿ, ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...

ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು 

ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದ ಇಬ್ಬರು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...