ಹಾವೇರಿ | ರಾಣೆಬೆನ್ನೂರಲ್ಲಿ ರವಿ ಹಂಜ್ ವಿರುದ್ಧ ಬುಗಿಲೆದ್ದ ಪ್ರತಿಭಟನೆ; ಕಠಿಣ ಕ್ರಮಕ್ಕೆ ಆಗ್ರಹ

Date:

“ಬಸವ ಮಂಟಪ ಲೇಖಕ ರವಿ ಹಂಜ್ ಬರೆದಿರುವ ವಿವಾದಿತ ಲೇಖನ ನಾಡಿನ ಸಮಸ್ತ ಸಮುದಾಯದ ಮೇಲೆ ಪರಿಣಾಮ ಬೀರಿದೆ. ಕೂಡಲೇ ಆತನನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಿ, ಪುಸ್ತಕ ವಶಪಡಿಸಿಕೊಳ್ಳಬೇಕು” ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

- Advertisement -

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ತಹಶೀಲ್ದಾರರ ಕಚೇರಿ ಎದುರು ವಿಶ್ವಗುರು ಬಸವ ಸಮಿತಿ ಹಾಗೂ ಬಸವ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡ ಉಮೇಶ ಗುರುಲಿಂಗಪ್ಪ ಗೌಡ್ರ ಮಾತನಾಡಿ, ” ಮಹಾನ್ ಮಾವತ ಮಾನವ ತಾವಾದಿ ಧಾರ್ಷನಿಕರಾದ ಶ್ರೀ ಬಸವೇಶ್ವರರ ಕುರಿತು ಬಸವ ಮಂಟಪದಲ್ಲಿ ಅವಹೇಳನಕಾರಿಯಾಗಿ ಪ್ರಕಾಶಿಸಿದ್ದಾರೆ. 12ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದ್ದ ಅನುಭವದ ಮಂಟಪ ಮೂಲಕ ಎಲ್ಲಾ ಜಾತಿ ಧರ್ಮದವರನ್ನು ಓಗ್ಗೂಡಿಸಿ ಮಹಿಳೆ ಮತ್ತು ಶೋಷಣೆಗೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲರನ್ನು ಒಗ್ಗೂಡಿಸಿ ಸಮಾನತೆಯನ್ನು ಕಂದ ಮಹಾನ್ ಸಂತ ಅವರಾಗಿದ್ದಾರೆ” ಎಂದರು.

“ಬಸವಾದಿ ಶರಣರು ಅಂದು ನಿರಂತರ ಹೋರಾಟ ಮಾಡಿದ್ದಾರೆ. ಹೋರಾಟದ ಪರಿಣಾಮ ಸಾವಿರಾರು ಶರಣರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಶರಣರ ಜೀವನ ತೆರೆದಿಟ್ಟ ಪುಸ್ತಕದಂತೆ ಎನ್ನುವದನ್ನು ಅರಿತು ಅರಿಯದ ರವಿ ಹಂಜ್ ಅವರು ಅವಹೇಳನ ರೀತಿಯಲ್ಲಿ ಬರೆದಿರುವುದು ಆಕ್ಷಮೈ  ಅಪರಾಧ.

 ಬಸವ ಮಂಟಪ ಪುಸ್ತಕದಲ್ಲಿ ರವಿ ಹಂಜ್ ಶರಣ ಪರಂಪರೆಯ ಸ್ವಾತಂತ್ರದ ಅರಿವಿಲ್ಲದೆ ಅವರನ್ನು ಸುಳ್ಳುಗಾರ, ಕೊಲೆಗಡುಕ, ಮೋಸಗಾರ ಎನ್ನುವಂತೆ ಪದ ಬಳಕೆಯಲ್ಲಿ ಬಿಂಬಿಸಿದ್ದಾರೆ. ಇದು ಖಂಡನೀಯ” ಎಂದರು.

“ಸರ್ಕಾರ ತಕ್ಷಣವೇ ಸ್ಪಂದಿಸಿ ರವಿ ಹಂಜ್ ಅವರನ್ನು ಗಲ್ಲಿಗೆರಿಸಬೇಕು. ಪ್ರಕಾಶಕ ವಿಶ್ವೇಶ್ವರ ಭಟ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ಮನವಿ ಸಂದರ್ಭದಲ್ಲಿ ಸಮಾಜದ ಮುಖಂಡರು ಎಂ.ಎಫ್. ಕುಸಗೂರ, ಏಕಾಂತ್ ಮುದಿ ಗೌಡರ, ಪ್ರಭುಲಿಂಗಪ್ಪ ಹಲಗೇರಿ, ಜಿ.ಬಿ. ಬೆಳವಿಗಿ, ಬಿ.ಹೆಚ್. ಬುರಡಿಕಟ್ಟಿ, ಕೆ.ಸಿ. ಹಿತ್ತಲಮನಿ, ಕರಬಸಪ್ಪ ಮಾಕನೂರ, ರುದ್ರಪ್ಪ ಬಾಳೆಕಾಯಿ, ಕೆ. ಜಿ. ಮಠದ, ಬಾಬಣ್ಣ ಛತ್ರದ, ಚಂದ್ರಪ್ಪ ಹೊನ್ನಾಳಿ, ಮಂಜುನಾಥ ಕೆಂಚ ರೆಡ್ಡಿ, ಗುರುಶಾಂತಪ್ಪ ಮುದ್ದಪ್ಪಳ್ಳವರ, ಸಿದ್ದಪ್ಪ ಹುಗ್ಗಿ, ಉಮೇಶ್ ಪಟ್ಟಣಶೆಟ್ಟಿ, ರವಿ ಹುಚ್ಚಪ್ಪನವರ ಹೇಳಿದಂತೆ ಮತ್ತಿತರ ಮುಖಂಡರು ಸಮಿತಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾದಾಮಿ | ಕನಕದಾಸರ ಭಕ್ತಿ, ತತ್ವಜ್ಞಾನ, ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ

ಕನಕದಾಸರ ಭಕ್ತಿ, ತತ್ವಜ್ಞಾನ, ದಾಸಸಾಹಿತ್ಯ ಹಾಗೂ ಸಮಾನತೆಯ ಸಂದೇಶ ಇಂದಿನ ಸಮಾಜಕ್ಕೂ...

ಬಾಗಲಕೋಟೆ |ನಾಗರಾಳ ತಾಂಡದ 12 ಎಕರೆ ಜಮೀನು ಅಕ್ರಮ ವರ್ಗಾವಣೆ ಆರೋಪ

ನಾಗರಾಳ ತಾಂಡದ ಸುಮಾರು 12 ಎಕರೆ ಜಮೀನನ್ನು ಮೃತ ವ್ಯಕ್ತಿಗಳ ಹೆಸರಿನಲ್ಲಿ...

ರಬಕವಿ-ಬನಹಟ್ಟಿ |ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ; ರಾಜಶೇಖರ ಹಿರೇಮಠ

ಬಡವರು, ನಿರ್ಗತಿಕರು ಹಾಗೂ ಪ್ರತಿಭಾವಂತರಿಗೆ ನೆರವಾಗುವ ನಿಸ್ವಾರ್ಥ ಸಮಾಜಮುಖಿ ಸೇವೆಯಿಂದ ಮಾತ್ರ...