“ಜಾನಪದ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಷಯಗಳಿಗೆ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಂಡಿದ್ದು, 2024-25ನೇ ಸಾಲಿನ ಮೊದಲ(ಮಾರ್ಚ/ಎಪ್ರಿಲ್) ತಿಂಗಳದ ವೇತನವನ್ನು ತಲಾ 25,000(ಇಪ್ಪತ್ತೈದು ಸಾವಿರ)ದಂತೆ ನೀಡಿದ್ದು, ಈಗ ಮೇ ಮತ್ತು ಜೂನ್ ವೇತನವನ್ನು ಮಾಡುವಾಗ ತಲಾ 12,500(ಹನ್ನೆರಡುಸಾವಿರ ಐದನೂರ)ರಂತೆ ಮಾಡಿರುವಿರಿ. ಇದನ್ನು ಸರಿಪಡಿಸಿ ನಮಗೆ ಬರಬೇಕಾದ ಪೂರ್ಣಪ್ರಮಾಣದ ವೇತನವನ್ನು ಕೊಡಬೇಕು” ಎಂದು ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಪ್ರತಿಭಟನೆ ನಡೆಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಗೊಟಗೋಡಿಯ ಜಾನಪದ ವಿಶ್ವವಿದ್ಯಾಲದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು, “ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳಲ್ಲಿ ಪೂರ್ಣಕಾಲಿಕ(16 ಅವಧಿ) ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾಗಿ, 2024-25 ಮತ್ತು 2025-26ನೇ ಸಾಲಿನ ಶೈಕ್ಷಣಿಕ ವರ್ಷಗಳ ಎಲ್ಲಾ ಚಾತುರ್ಮಾಸಗಳ ವೇಳಾಪತ್ರಿಕೆಗಳ ಅನುಗುಣವಾಗಿ ಸೇವೆ ಸಲ್ಲಿಸಿದ್ದೇವೆ. ಈ ವೇಳಾಪತ್ರಿಕೆಯನ್ನು ತಮ್ಮ ಮತ್ತು ವಿಭಾಗದ ಅಧ್ಯಕ್ಷರು/ಸಂಯೋಜಕರ ಗಮನಕ್ಕೆ ತಂದು, ನಿಮ್ಮ ಮತ್ತು ಅವರುಗಳ ಅನುಮತಿ ಸಹಿ ಪಡೆದು ಪಾಠ ಬೋಧನೆ ಮಾಡಿದ್ದೇವೆ” ಎಂದು ಹೇಳಿದರು.
“ಈ ಪಾಠಗಳ ಬೋಧನೆ ಮಾಡಿ ಆಯಾ ಚಾತುರ್ಮಾಸಗಳಲ್ಲಿಯ ಪಠ್ಯಕ್ರಮವನ್ನು ಪೂರ್ಣಗೊಳಿಸಿರುವುದರ ಬಗ್ಗೆ ನಮ್ಮಿಂದ ಅಧಿಕೃತವಾಗಿ ಪತ್ರ ಬರೆಸಿಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದೀರಿ. ಅಲ್ಲದೇ ಪರೀಕ್ಷಾ ಕೆಲಸಗಳಿಗೂ ಸಹ ನಮ್ಮನ್ನು ಬಳಸಿಕೊಂಡಿದ್ದೀರಿ. ಆಯಾ ಶೈಕ್ಷಣಿಕ ವರ್ಷದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ಪತ್ರವನ್ನು ನಾವು ಆಗಾಗ ಕೇಳಿದರೂ ಸಹ, ನಮಗೆ ಆತ್ಮೀಯವಾದ ಭರವಸೆಯ ಮಾತುಗಳನ್ನು ಆಡಿ ನಮ್ಮನ್ನು ನಂಬಿಸಿ ದುಡಿಸಿಕೊಂಡಿರಿ. ನಾವುಗಳು ನಿಮ್ಮ ಮೇಲೆ ಗೌರವದ ಭಾವನೆ ಮತ್ತು ಭರವಸೆಯನ್ನು ಇಟ್ಟು, ಪ್ರಾಮಾಣಿಕವಾಗಿ ದುಡಿದಿದ್ದೇವೆ” ಎಂದು ಹೇಳಿದರು.
“ಇದರಂತೆ ನಮಗೆ 2024-25ನೇ ಸಾಲಿನ ಮೊದಲ(ಮಾರ್ಚ/ಎಪ್ರಿಲ್) ತಿಂಗಳದ ವೇತನವನ್ನು ತಲಾ 25,000(ಇಪ್ಪತ್ತೈದು ಸಾವಿರ)ದಂತೆ ನೀಡಿದ್ದಿರಿ. ಈಗ ಮೇ ಮತ್ತು ಜೂನ್ ವೇತನವನ್ನು ಮಾಡುವಾಗ ತಲಾ 12,500(ಹನ್ನೆರಡುಸಾವಿರ ಐದನೂರ)ರಂತೆ ಮಾಡಿರುವಿರಿ. ಇದನ್ನು ಸರಿಪಡಿಸಿ ನಮಗೆ ಬರಬೇಕಾದ ಪೂರ್ಣಪ್ರಮಾಣದ ವೇತನವನ್ನು ನೀಡಲು ಮುಂದಾಗಿದ್ದು, ಇದನ್ನು ಖಂಡಿಸುತ್ತೇವೆ” ಎಂದರು.
“ಈ ನಮ್ಮ ನ್ಯಾಯಯುತ ಬೇಡಿಕೆಯನ್ನು ಇಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಅಹೋರಾತ್ರಿ ಪ್ರತಿಭಟನೆ ನಿರಿತ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಡಾ.ನದಾಫ ಎಚ್.ಎಚ್, ಡಾ. ಅಭಿಲಾಸ ಎಚ್.ಕೆ, ಡಾ. ಶಿಲಿನಾ ಕೋಟೆ, ಡಾ. ಸುವರ್ಣಾ ಶೃಂಗೇರಿ, ಪ್ರೀತಮ್ ಬಾಯರ್ ಇದ್ದರು.





