ಹಾವೇರಿ ಪಟ್ಟಣದ ಬಸವೇಶ್ವರ ನಗರದ ಉದ್ಯಾನವನದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗು ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನಕ್ಕೆ ಐವತ್ತನೇ ಗ್ರಂಥಾಲಯವನ್ನು ಸಚಿವ ರುದ್ರಪ್ಪ ಲಮಾಣಿ ಅವರು ಉದ್ಘಾಟಿಸಿ ಮಾತನಾಡಿದರು.
“ಪ್ರಸ್ತುತ ಕಾಲಘಟ್ಟದಲ್ಲಿ ಟವಿ, ಮೊಬೈಲ್ ಬಂದ ಮೇಲೆ ಪುಸ್ತಕ ಓದುವ ಹವ್ಯಾಸ ಯುವಕರಲ್ಲಿ ಕಡಿಮೆಯಾಗಿದೆ. ಬರಿ ಆನ್ಲೈನ್ ನಲ್ಲಿ ಯುವಕರು ಇರುವರು. ಆದರೂ ಕನ್ನಡ ಪುಸ್ತಕ ಪ್ರಾಧಿಕಾರ ದೈರ್ಯದಿಂದ, ಮನೆಗೊಂದು ಗ್ರಂಥಾಲಯ ಯೋಜನೆ ಆರಂಭ ಮಾಡಿ, ಮುಖ್ಯಮಂತ್ರಿ ಅವರ ಮನೆಯಿಂದ ಆರಂಭವಾದರೆ, ಹಾವೇರಿಯಲ್ಲಿ ಅಲೆಮಾರಿ ಸಮುದಾಯದ ಜೋಪಡಿಯಲ್ಲಿ ಆರಂಭ ಆಗಿದ್ದು, ಸಂತೋಷ” ಎಂದು ಹೇಳಿದರು.
ಮನೆ ಮನೆಗೂ ಗ್ರಂಥಾಲಯ ಆಗಬೇಕು. ಎಲ್ಲರೂ ಪುಸ್ತಕ ಓದಬೇಕು. ಓದಿಸುವ ಕೆಲಸ ಕನ್ನಡ ಪುಸ್ತಕ ಪ್ರಾಧಿಕಾರ ಮಾಡುತ್ತಿದೆ. ಅದು ಹೀಗೆ ಮುಂದುವರೆಯಲಿ. ಪ್ರತಿ ವರ್ಷ ನನ್ನ ಅನುದಾನದಲ್ಲಿ ಈ ಕೆಲಸಕ್ಕೆ ಐದು ಲಕ್ಷ ಕೊಡುವುದಾಗಿ ಭರವಣೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ಮಾತನಾಡಿ, ” ಮನೆಗೊಂದು ಗ್ರಂಥಾಲಯ ಯೋಜನೆ ತರಲು ಮೂಲ ಪ್ರೇರಣೆ ಡಾ. ಬಿ.ಆರ್ ಅಂಬೇಡ್ಕರ್ ಅವರು. ಅವರು ಹೇಳಿದ ಮಾತು ‘ನೀನು ಸಂಪಾದನೆ ಮಾಡಿದ ಎರಡು ರೂಪಾಯಿಯಲ್ಲಿ ಒಂದನ್ನು ಇಂದು ಬದುಕಿಗೆ, ಇನ್ನೊಂದು ರೂಪಾಯಿ ಪುಸ್ತಕಕ್ಕೆ ಬಳಕೆ ಮಾಡಬೇಕು” ಎನ್ನುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ರೂಪಿಸಲಾಗಿದೆ” ಎಂದರು.
“ಪರಿಸರ ಸ್ವಚ್ಚತೆ ಹಾಗೂ ಮನಸ್ಸಿನ ಸ್ವಚ್ಚತೆಗೂ ಸೇರಿದಂತೆ ಈ ಕಾರ್ಯಕ್ರಮ ಪೂರಕವಾಗಿದೆ. ಒಂದು ಪುಸ್ತಕವನ್ನು ಓದಿದರೇ ಆ ಮನಸ್ಸು ಬೇರೆಯೇ ಆಲೋಚನೆಯೇ ಆಗುತ್ತದೆ. ಹಾಗಾಗಿ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಇರಬೇಕು. ಈ ಮೂಲಕ ನಮ್ಮೊಳಗಿನ ಕತ್ತಲನ್ನು ಓಡಿಸಬೇಕು” ಎಂದು ಹೇಳಿದರು.
ಹಿರಿಯ ಸಾಹಿತಿ ಸತೀಶ ಕುಲಕುರ್ಣಿ ಮಾತನಾಡಿ, “ಮನೆ ಹಾಗೂ ಮನಸ್ಸು ಸ್ವಚ್ಚಗೊಳಿಸುವ ಕಾರ್ಯ ಇಂದು ಮಾಡುತ್ತಿದ್ದೇವೆ. ಆರೋಗ್ಯ ಮತ್ತು ಪರಿಸರ ಬಹಳ ಮುಖ್ಯ. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಕ್ರಾಂತಿ ಉಂಟು ಮಾಡುತ್ತಿದೆ. ಇಲ್ಲಿ ಎಲ್ಲರೂ ಪುಸ್ತಕ ಪ್ರೀತಿಯಿಂದ ಈ ಕಾರ್ಯಕ್ರಮ ಮಾಡುತ್ತಿದೇವೆ. ಈ ಕಾರ್ಯಕ್ರಮ ಮುಖ್ಯಮಂತ್ರಿಯಿಂದ ಆರಂಭವಾದರೆ ನಾವು ಜೋಪಡಿಯಿಂದ ಸುಡುಗಾಡು ಸಿದ್ದರ ಜೋಪಡಿಯಲ್ಲಿ ಆರಂಭ ಮಾಡಿದ್ದೇವೆ” ಎಂದರು.
ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಸಂಜೀವಕೂಮಾರ ನೀರಲಗಿ ಮಾತನಾಡಿ, “ಸ್ವಚ್ಚತೆ ಕುರಿತು ಈ ಉದ್ಯಾನವನದಲ್ಲಿ ತರಬೇತಿ ಕೊಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾವೇರಿ ಪಟ್ಟಣವನ್ನು ಸುಂದರ ನಗರವನ್ನಾಗಿ ಮಾಡಲು ಎಲ್ಲರೂ ಸಹಕಾರ ಬಹಳ ಮುಖ್ಯ” ಎಂದರು.
“ಉದ್ಯಾನವನದಲ್ಲಿ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಆಗಿದೆ. ಈ ಉದ್ಯಾನವನಕ್ಕೆ ಬರುವ ವಾಯು ವಿಹಾರಿಗಳು ಪುಸ್ತಕ ಓದಬೇಕು. ಜೊತೆಗೆ ಪತ್ರಿಕೆಗಳ ತರಿಸುವ ಪ್ರಯತ್ನ ಮಾಡಲಾಗುವುದು. ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು.
ನಮ್ಮ ಸಚಿವರು ರುದ್ರಪ್ಪ ಲಮಾಣಿ ಅವರು ನಗರದಲ್ಲಿ 24×7 ಕುಡಿಯುವ ನೀರಿಗಾಗಿ ಕಾಮಗಾರಿ ನಡೆಯುತ್ತಿವೆ. ನಗರಕ್ಕೆ ಸಧ್ಯ ಏಳು ಎಮ್ಎಲ್ ನೀರು ಬರುತ್ತಿದೆ. ಮುಂದಿನ ದಿನಗಳಲ್ಲಿ ಇಪ್ಪತ್ತು ಎಮ್ಎಲ್ ನೀರು ತರುವ ಪ್ರಯತ್ನ ಮಾಡಲಾಗುತ್ತಿದ್ದು, ಈ ಪ್ರಯತ್ನ ನಮ್ಮ ಸಚಿವರು ಕನಸಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಾವೃದ್ದ ಪ್ರಾಧಿಕಾರಿ ಅದ್ಯಕ್ಷರು ಎಸ್.ಎಫ್ ಗಾಜಿಗೌಡ್ರ, ಎಚ್ ಕಾಂತರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಲಿಂಗಯ್ಯ ಹಿರೇಮಠ, ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಜಿಲ್ಲಾ ಸಂಚಾಲಕರು ಎಸ್ ಆರ್ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ದೇಶ ಹುಣಸಿಕಟ್ಟಿ ಅವರು ಸ್ವಾಗತಿಸಿದರು.




