ಹಾವೇರಿ | ಎಸ್ಎಫ್ಐ ಪ್ರಥಮ ಸಮ್ಮೇಳನ; ಹಾವೇರಿ ವಿವಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ನಿರ್ಣಯಗಳು

Date:

ಹಾವೇರಿ ವಿವಿ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ವಿವಿ ಘಟಕ ಪ್ರಥಮ ಸಮ್ಮೇಳನವು ಅನೇಕ ಅಡೆತಡೆಗಳ ಮಧ್ಯೆಯು ನಡೆಯಿತು.

- Advertisement -

ಹಾವೇರಿ ಪಟ್ಟಣದ ಕೆರೆಮತ್ತಿಹಳ್ಳಿಯಲ್ಲಿರುವ ಹಾವೇರಿ ವಿವಿಯ ಎಸ್ಎಫ್ಐ ಪ್ರಥಮ ಸಮ್ಮೆಳನ ನಂತರದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ವಿಶ್ವವಿದ್ಯಾಲಯ ಅಭಿವೃದ್ಧಿಗಾಗಿ ಹಲವು ವಿಷಯಗಳ ಕುರಿತು ಚರ್ಚಿಸಿ ಕೆಲವು ವಿವಿ ನೂತನ ಘಟಕ ನಿರ್ಣಯಗಳನ್ನು ಕೈಗೊಂಡಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ, ಖಾಯಂ ಸಿಬ್ಬಂದಿ ನೇಮಕ, ಹೊಸ ವಿಭಾಗಗಳು, ಕೋರ್ಸುಗಳು, ಅಧ್ಯಯನ ಪೀಠಗಳು, ಕಟ್ಟಡಗಳು- ಸಭಾಂಗಣ, ಹಾಸ್ಟೇಲ್ ಗಳು, ಕ್ಯಾಂಟೀನ್ ಸೇರಿದಂತೆ ಇನ್ನೂ ಹಲವು ಮೂಲಭೂತ ಸೌಲಭ್ಯ ಬೇಕಿದೆ. ಎಲ್ಲ ಬೋಧಕ ಸಿಬ್ಬಂದಿಗಳು ಅತಿಥಿ ಉಪನ್ಯಾಸಕರಾಗಿ ಹಾಗೂ ಬೋಧಕೇತರ ಸಿಬ್ಬಂದಿಗಳು ಖಾಯಂಮೇತರರಾಗಿ ದುಡಿಯುತ್ತಿದ್ದಾರೆ. ವಿ.ವಿ ಗೆ ಅಗತ್ಯವಿರುವ ಹಾಗೂ ಖಾಲಿಯಿರುವ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಖಾಯಂ ಆಗಿ ಸರಕಾರ ನೇಮಕ ಮಾಡಬೇಕು. ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವಿದ್ಯಾಭ್ಯಾಸ ಮಾಡುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಪರೀಕ್ಷಾ ಶುಲ್ಕ ಏರಿಕೆ ತಡೆಗೆ ಒತ್ತಾಯಿಸಿ ನಿರ್ಣಯಗಳನ್ನು ಮಂಡಿಸಲಾಗಿದೆ.

ಎಲ್ಲಾ ವಿಭಾಗಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬಾಲಕರ ಹಾಸ್ಟೆಲ್ ಮಂಜೂರು ಮಾಡುವಂತೆ ಹಾಗೂ ಇರುವ ವಿದ್ಯಾರ್ಥಿನಿಯರು ವಸತಿ ನಿಲಯ ಬಲಪಡಿಸುವಂತೆ, ಹಾನಗಲ್ ರಸ್ತೆಯಿಂದ ವಿವಿ ವರೆಗೆ ಸಬ್ ಜೈಲು ಮಾರ್ಗವಾಗಿ ಹಾವೇರಿ ನಗರದ ವರೆಗೆ ಸಮರ್ಪಕ ರಸ್ತೆ ನಿರ್ಮಿಸುವುದು ಹಾಗೂ ನಿರಂತರ ಬಸ್ ಸಂಚಾರಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಸುವಂತೆ ಆಗ್ರಹಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.

ವಿವಿ ಆವರಣದಲ್ಲಿ ಹಾಗೂ ತರಗತಿಗಳು, ಹಾಸ್ಟೆಲ್ ಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು, ವಿದ್ಯಾರ್ಥಿನಿಯರ ಸೂಕ್ತ ರಕ್ಷಣೆಗೆ ಒತ್ತಾಯಿಸಿ ಹಾಗೂ ವಿವಿಯಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆಗೆ, ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುಂತೆ, ಹೊಸ ವಿಭಾಗಗಳು, ಕೋರ್ಸುಗಳು, ಅಧ್ಯಯನ ಪೀಠಗಳನ್ನು ಆರಂಭಿಸುವುದು. ವಿಶ್ವವಿದ್ಯಾಲಯವನ್ನು ವಿಶೇಷವಾಗಿ ಪರಿಗಣಿಸಿ, ವಿ.ವಿ ಅಭಿವೃದ್ಧಿಗಾಗಿ ವೀಶೇಷ ಪ್ಯಾಕೇಜ್ ಯೋಜನೆ ರೂಪಿಸಿ ವಿ.ವಿ ಗೆ ರಾಜ್ಯ ಸರಕಾರ ಅನುದಾನ ಮಂಜೂರು ಮಾಡಲು ಒತ್ತಾಯಿಸಿ ನಿರ್ಣಯ

ಆಟದ ಕ್ರೀಡಾಂಗಣ ನಿರ್ಮಿಸುವಂತೆ ಹಾಗೂ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆ, ಹಾವೇರಿ ವಿಶ್ವ ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಕ್ಯಾಂಪಸ್ ನಲ್ಲಿಯೆ ಆಯೋಜಿಸುವಂತೆ ಒತ್ತಾಯಿಸಿ ನಿರ್ಣಯ.

ವಿಶ್ವವಿದ್ಯಾಲಯದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲು ನಮ್ಮ ಜಿಲ್ಲೆಯ ಪ್ರದೇಶವ್ಯಾಪ್ತಿಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯ-ಸಾಂಸ್ಕೃತಿಕ, ಕೃಷಿ, ಮಾನವ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಉತ್ಕೃಷ್ಠ ಸಂಶೋಧನೆಗಳು ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿ ನಿರ್ಣಯ.

ಯಾವುದೇ ಕಾರಣಕ್ಕೂ ಹಾವೇರಿ ವಿಶ್ವ ವಿದ್ಯಾಲಯವನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ಕೈಗೊಳ್ಳದಂತೆ ರಾಜ್ಯ ಸರಕಾರ ಕ್ರಮವಹಿಸಲು ಒತ್ತಾಯಿಸಿ ನಿರ್ಣಯಗಳನ್ನು  ಭಾರತ ವಿದ್ಯಾರ್ಥಿ ಫೆಡರೇಶನ್(SFI) ಹಾವೇರಿ ವಿಶ್ವವಿದ್ಯಾಲಯ ಘಟಕ ಕೈಗೊಂಡಿದೆ ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ ಹಾವಿವಿ ಎಸ್ಎಫ್ಐ ಘಟಕ ಅಧ್ಯಕ್ಷೆ ಪೂಜಾ ಬಾರ್ಕಿ, ಕಾರ್ಯದರ್ಶಿ ಶುಂಭುಲಿಂಗ ಸವದತ್ತಿ, ಉಪಾಧ್ಯಕ್ಷ ಪರಶುರಾಮ ಎಸ್, ನವೀನ, ಬಸವರಾಜ ಎಸ್, ಕಾತೇಶ್ ಪಿ ಹೆಚ್, ಸಹ ಕಾರ್ಯದರ್ಶಿ ಪ್ರವೀಣ್ ಮಟ್ಟೇರ, ಶರಣಪ್ಪ ಜೆ ಎಮ್, ಲೋಕೇಶ್ ಕೆಂಚಣ್ಣನವರ, ಪೂರ್ಣಿಮಾ ಬಾರ್ಕಿ, ಸದಸ್ಯರು ಅರುಣ್ ಜೆ, ಶಶಾಂಕ ಬೋಗಾವಿ, ಸಂತೋಷ ಪೂಜಾರ, ರುದ್ರಮುನಿ ಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಕಸ್ತೂರಿ ರಂಗನ್ ವರದಿ: ಕೇರಳ ಮಾದರಿಯಲ್ಲಿ ಕರ್ನಾಟಕ ವಿನಾಯಿತಿ ಪಡೆಯಲು ಕೆ.ಪಿ.ಆರ್.ಎಸ್ ಆಗ್ರಹ

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ...

ಶಿರಸಿ | ಗೌಡಳ್ಳಿ ದಲಿತರ ಮನೆ ಧ್ವಂಸ ಪ್ರಕರಣ; ಶಾಸಕ-ಸಂಸದರ ವಿರುದ್ಧ ಭೀಮಗರ್ಜನೆಯಿಂದ ಪ್ರತಿಭಟನೆ

ಗೌಡಳ್ಳಿಯಲ್ಲಿ ನಡೆದ ದಲಿತ ಕುಟುಂಬದ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೀಮಗರ್ಜನೆ...

ಕಲಬುರಗಿ | ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು

ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರು...

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಸಂಪೂರ್ಣ ಬಂದ್ 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ಖಂಡಿಸಿ ಶೃಂಗೇರಿ ಬಂದ್...