ಬೆಂಗಳೂರಿನಲ್ಲಿ ಆಗಸ್ಟ್ 11ರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತವಾಗಿದೆ. ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದಾರೆ.
ರಸ್ತೆಯಲ್ಲಿ ಮಳೆ ನೀರು ನಿಂತಿರುವ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ನಗರದ ಹಲವೆಡೆ ಸಂಚಾರದಟ್ಟಣೆ ಉಂಟಾಗಿದೆ. ಅಲ್ಲಲ್ಲಿ ನೀರು ತುಂಬಿರುವ ಕಾರಣ ನಿಧಾನವಾಗಿ ಸಂಚರಿಸಲು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಯಾವೆಲ್ಲ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಎಂಬ ಬಗ್ಗೆ ಇಲ್ಲಿ ನಾವು ವಿವರ ನೀಡಿದ್ದೇವೆ. ಮುಂದೆ ಓದಿ…
ಎಲ್ಲೆಲ್ಲಿ ಸಂಚಾರ ಅಸ್ತವ್ಯಸ್ತ?
ವಿದ್ಯಾಶಿಲ್ಪ ಹತ್ತಿರ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಹೆಬ್ಬಾಳ ಸರ್ಕಲ್‌ನಲ್ಲಿ ನೀರು ನಿಂತಿರುವುದರಿಂದ ವೀರಣ್ಣಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿದೆ. ನಾಗವಾರ ಜಂಕ್ಷನ್ ಮತ್ತು ಹೆಬ್ಬಾಳ ನಡುವಿನ ಒಆರ್‌ಆರ್ ರಸ್ತೆಯ ಎರಡೂ ಕಡೆ ಸಂಚಾರ ನಿಧಾನವಾಗಿದೆ.
ಹೆಬ್ಬಾಳ ಮೇಲ್ಸೇತುವೆ, ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳ ಸಂಚಾರ ನಿಧಾನವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯ ವೀರಸಂದ್ರ ವಾಹನದಟ್ಟಣೆ ಕಾಣಿಸಿಕೊಂಡಿದೆ.
ಹೊರವರ್ಲತುಲ ರಸ್ತೆಯ ಮಾರತಹಳ್ಳಿ, ಕಾರ್ತಿಕ ನಗರ, ಕಲ್ಯಾಣ ನಗರ, ಪುಟ್ಟೇನಹಳ್ಳಿ, ವರ್ತೂರು ಕೋಡಿ, ಸಕ್ರ ಆಸ್ಪತ್ರೆಯಿಂದ ಬೆಳ್ಳಂದೂರಿನಲ್ಲಿ ಮಳೆಯ ನೀರು ನಿಂತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಇದನ್ನು ಓದಿದ್ದೀರಾ?ದೆಹಲಿ | ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತ; ಸಂಚಾರ ಅಸ್ತವ್ಯಸ್ತ
ಎಂಎಸ್ ಪಾಳ್ಯದಲ್ಲಿ ನೀರು ನಿಂತಿರುವುದರಿಂದ ಯಲಹಂಕದ ಕಡೆಗೆ ಟ್ರಾಫಿಕ್‌ಯಿದೆ. ಈ ನಡುವೆ ಯಲಹಂಕ ಬಳಿ ವಾಹನ ಕೆಟ್ಟು ನಿಂತಿದ್ದು ಗಂಗಮ್ಮ ವೃತ್ತದ ಕಡೆಗೆ ಸಾಗುವ ದಾರಿಯಲ್ಲಿ ಸಂಚಾರ ದಟ್ಟಣೆಯಿದೆ. ಗುಂಜೂರು ಬಳಿ ವಾಹನ ಕೆಟ್ಟು ನಿಂತಿರುವುದರಿಂದ ದೊಮ್ಮಸಂದ್ರ ಕಡೆಗೆ ಸಾಗುವ ದಾರಿಯಲ್ಲಿ ಸಂಚಾರ ದಟ್ಟಣೆಯಿದೆ.
ಹೊಸೂರು ಮುಖ್ಯರಸ್ತೆಯಲ್ಲಿ ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೊಮ್ಮನಹಳ್ಳಿ ರೂಪೇನ ಅಗ್ರಹಾರದವರೆಗೆ ವಾಟರ್ ಲಾಗಿಂಗ್ ಆಗಿದ್ದು ನಗರದ ಒಳಭಾಗಕ್ಕೆ ಬರುವ ಮತ್ತು ಹೊರಭಾಗಕ್ಕೆ ಹೋಗುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸುವುದು. pic.twitter.com/hZy5esHzNv
— MADIVALA TRAFFIC BTP (@madivalatrfps) August 12, 2024
ಹೊಸೂರು ಮುಖ್ಯರಸ್ತೆಯಲ್ಲಿ ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬೊಮ್ಮನಹಳ್ಳಿ ರೂಪೇನ ಅಗ್ರಹಾರದವರೆಗೆ ವಾಟರ್ ಲಾಗಿಂಗ್ ಆಗಿದ್ದು ನಗರದ ಒಳಭಾಗಕ್ಕೆ ಬರುವ ಮತ್ತು ಹೊರಭಾಗಕ್ಕೆ ಹೋಗುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ತೂಬರಹಳ್ಳಿ ಬಳಿಯೂ ವಾಹನ ಕೆಟ್ಟು ನಿಂತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ರೂಪೇನ ಅಗ್ರಹಾರದಲ್ಲಿ ನೀರು ನಿಂತಿರುವುದರಿಂದ ಸಿಲ್ಕ್‌ಬೋರ್ಡ್ ಕಡೆಗೆ ಸಂಚಾರ ನಿಧಾನವಾಗಿದೆ. ಬನ್ನೇರುಘಟ್ಟ ರಸ್ತೆಯ ಜಯದೇವ ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿಯೂ ನೀರು ನಿಂತಿದೆ. ವಿಂಡ್ ಟನಲ್ ರಸ್ತೆಯೂ ಜಲಾವೃತವಾಗಿದ್ದು ಕೆಂಪಾಪುರ ಕಡೆಗೆ ಸಾಗುವ ರಸ್ತೆಯಲ್ಲಿ ವಾಹನದಟ್ಟಣೆ ಉಂಟಾಗಿದೆ.
ಸಂಚಾರ ಸಲಹೆ
— K.R.PURA TRAFFIC POLICE.BENGALURU. (@KRPURATRAFFIC) August 12, 2024
ಕಸ್ತೂರಿನಗರ ಬ್ರಿಡ್ಜ್ ರೈಲ್ವೆ ಅಂಡರ್ ಪಾಸ್ ಕಡೆಯಿಂದ ಬೆನ್ನಿಗಾನಹಳ್ಳಿ ಕಡೆಗೆ ಹೋಗುವ ಮಾರ್ಗ ರೈಲ್ವೇ ಅಂಡರ್ ಪಾಸ್ ಕೆಳಗೆ ಮಳೆ ನೀರು ನಿಂತಿರುವುದರಿಂದ ಬೆನ್ನಿಗಾನಹಳ್ಳಿ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ವಾಹನ ಸವಾರರು/ಚಾಲಕರು ಸಹಕರಿಸಲು ಕೋರಿದೆ. pic.twitter.com/JCyQcGWExb
ಕಸ್ತೂರಿನಗರ ಡೌನ್-ರಾಂಪ್‌ನಲ್ಲಿ ನೀರು ನಿಂತಿದೆ. ಇದರಿಂದಾಗಿ ರಾಮಮೂರ್ತಿನಗರದೆಡೆ ಸಾಗುವ ದಾರಿ ಬ್ಲಾಕ್ ಆಗಿದೆ. ಕಸ್ತೂರಿನಗರ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುತ್ತಿರುವದ್ದರಿಂದ ರಾಮಮೂರ್ತಿನಗರ ಕಡೆಯಿಂದ ಕಸ್ತೂರಿನಗರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಾಗಿದೆ. ಕಸ್ತೂರಿನಗರ ಬ್ರಿಡ್ಜ್ ರೈಲ್ವೆ ಅಂಡರ್ ಪಾಸ್ ಕಡೆಯಿಂದ ಬೆನ್ನಿಗಾನಹಳ್ಳಿ ಕಡೆಗೆ ಹೋಗುವ ಮಾರ್ಗ ರೈಲ್ವೇ ಅಂಡರ್ ಪಾಸ್ ಕೆಳಗೆ ಮಳೆ ನೀರು ನಿಂತಿದೆ.
ಬಾಲಗೇರಿನಲ್ಲಿ ನೀರು ನಿಂತಿದ್ದು ಪಣತ್ತೂರು ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಆರ್ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತರಳಬಾಳು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.