ಗುಬ್ಬಿ | ಬೆಣಚಗೆರೆಯಲ್ಲಿ ಹೊಯ್ಸಳರ ಕಾಲದ ಶಾಸನ ಪತ್ತೆ

Date:

ಗುಬ್ಬಿ ತಾಲ್ಲೂಕಿನ‌ ನಿಟ್ಟೂರು ಹೋಬಳಿಯ ಬೆಣಚಗೆರೆಯಲ್ಲಿ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಹನ್ನೆರಡನೇಯ ಶತಮಾನದ ಹೊಯ್ಸಳರ ಕಾಲದ ಶಾಸನವೊಂದು ದೊರೆತಿದೆ. ಇಲ್ಲಿನ ಅಗ್ರಹಾರ (ಬೆಣಚಗೆರೆ) ಗ್ರಾಮವನ್ನು ಇಲ್ಲಿನ ಬ್ರಾಹ್ಮಣರಿಗೆ ಮತ್ತು ಇಲ್ಲಿನ ಬ್ರಹ್ಮೇಶ್ವರ ದೇವಸ್ಥಾನಕ್ಕೆ ಬೊಮ್ಮಲಾದೇವಿ ದಾನ ನೀಡಿದ ಕುರಿತು ಶಾಸನ ಹೇಳುತ್ತದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

- Advertisement -

“ಹೊಯ್ಸಳರ ಅರಸ ವಿಷ್ಟುವರ್ಧನನ ಕೊನೆಯ ಪಟ್ಟದ ರಾಣಿ ಬೊಮ್ಮಲಾದೇವಿಯು ದಾನ ನೀಡಿದ ಕುರಿತು ಶಾಸನದಲ್ಲಿದೆ. ರಾಣಿ ಬೊಮ್ಮಲಾದೇವಿಯು ಶಾಂತಲೆಯ ನಂತರದ ಪಟ್ಟದ ರಾಣಿಯಾಗಿದ್ದು, ವಿಷ್ಟುವರ್ಧನ ತನ್ನ ಕೊನೆಯ ದಿನಗಳನ್ನು ಬೊಮ್ಮಲಾದೇವಿಯೊಂದಿಗೆ ಹಾನುಂಗಲ್ (ಇಂದಿನ ಹಾನಗಲ್) ಪ್ರದೇಶದಲ್ಲಿ ನೆಲೆಗೊಂಡಿದ್ದನು” ಎಂದು ಇತಿಹಾಸ ಉಪನ್ಯಾಸಕ ಎ ಜಿ ಶ್ರೀನಿವಾಸ್ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಶಾಸನದ ತುದಿಯಲ್ಲಿ ಸೂರ್ಯ ಚಂದ್ರ ಅದರ ಕೆಳಭಾಗದಲ್ಲಿ ನಂದಿ, ಶಿವಲಿಂಗ, ಪಕ್ಕದಲ್ಲಿ ಪೂಜಿಸುವ ಯತಿ ಕೆತ್ತಲಾಗಿದೆ. ನಂದಿಯ ಮೇಲೆ ಚಾಕುವಿನ ಗುರುತಿದೆ. ಇದರಲ್ಲಿ, ನಂದಿ ಮತ್ತು ಶಿವಲಿಂಗ ಕೆತ್ತನೆಯು ಶೈವಧರ್ಮದ ಸೂಚಕವಾಗಿದ್ದು, ಈ ದಾನವು ಸೂರ್ಯ ಚಂದ್ರರು ಇರುವವರೆಗೂ ಶಾಶ್ವತವಾಗಿರಲೆಂದು ಇದರಲ್ಲಿನ ಸೂರ್ಯ, ಚಂದ್ರ ಕೆತ್ತನೆಗಳು ಸೂಚಿಸುತ್ತವೆ.
ಚೋಳರು ಮತ್ತು ಗಂಗರನ್ನು ಸೋಲಿಸಿ ಈ ಭಾಗದಲ್ಲಿ ಅವರಿಂದ ವಶಪಡಿಸಿಕೊಂಡ ಪ್ರದೇಶಗಳ ಉಲ್ಲೇಖವೂ ಇದೆ.”

“ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿತ್ತು. ಬೆಣಚಗೆರೆ ಗ್ರಾಮದ ರೈತ ಕಾಂತರಾಜು ಅವರು ತಮ್ನ ತೋಟದಲ್ಲಿ ಬದು ನಿರ್ಮಾಣ ಮಾಡುವ ಸಂದರ್ಭದಲ್ಲಿ ಶಾಸನ ಪತ್ತೆಯಾಗಿದೆ. ಸ್ಥಳಕ್ಕೆ ನಿವೃತ್ತ ಕನ್ನಡ ಉಪನ್ಯಾಸಕ ಸಂಗಪ್ಪ, ನಿವೃತ್ತ ಸೈನ್ಯಾಧಿಕಾರಿ ರಾಜಶೇಖರ್ ಶಶಿಭೂಷಣ್, ಸಂಗಮೇಶ್ವರ ಸ್ವಾಮಿ, ಸಂಗಪ್ಪ, ರಘು ಸೇರಿದಂತೆ ಗ್ರಾಮಸ್ಥರ ನೆರವಿನಿಂದ ಶಾಸನವನ್ನು ರಕ್ಷಿಸಿಡಲಾಗಿದೆ. ಒಂದು ಗ್ರಾಮದ ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸುತ್ತವೆ. ಕರ್ನಾಟಕದಲ್ಲಿ ದಾನ ಶಾಸನಗಳೇ ಹೆಚ್ಚಾಗಿದ್ದು, ಇಲ್ಲಿನ ಶಾಸನ ದಾನ ಶಾಸನವಾಗಿದ್ದು ಅನೇಕ ವಿಶೇಷಗಳಿಗೆ ಸಾಕ್ಷಿಯಾಗಿದೆ‌” ಎಂದು ಇತಿಹಾಸ ಉಪನ್ಯಾಸಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ವರದಿ: ಲಕ್ಷ್ಮೀಕಾಂತರಾಜು ಎಂ ಜಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಣಿಗಲ್ | ಸಕಾಲಕ್ಕೆ ನಡೆಯದ ದಲಿತರ ಕುಂದುಕೊರತೆ ಸಭೆ: ಅಧಿಕಾರಿಗಳ ವಿರುದ್ಧ ಮುಖಂಡರ ಆಕ್ರೋಶ

ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು...

ಗುಬ್ಬಿ | ಸ್ವಚ್ಚತೆ ನಮ್ಮ ಆಂತರಿಕ ಪ್ರತಿಬಿಂಬ : ಪಿಡಿಒ ಶೇಖರ್

 ಗಾಂಧೀಜಿ ಅವರ ಸ್ವಚ್ಛ ಭಾರತ್ ಕನಸು ನಮ್ಮ ಪರಿಸರ ಮಾಲಿನ್ಯ ನಿಯಂತ್ರಣದ...

ಕಲಬುರಗಿ | ಎಸ್‌ಐಆರ್ ವಿರೋಧಿಸಿ ಧರಣಿ; ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಿಲ್ಲಿಸುವುದು, ಪಟ್ಟಿಯಿಂದ...

ಗದಗ | ಸಾರಿಗೆ ಬಸ್ ಟಾಯರ್ ಸ್ಪೋಟ ಪರಿಣಾಮ ಕಂಡಕ್ಟರ್ ಕಾಲಿಗೆ ಗಾಯ

ಲಕ್ಷ್ಮೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ (ಸಂಖ್ಯೆ:...