ಆದಾಯ ನಿಂತುಹೋಯ್ತು, ನಟನೆಗೆ ಮರಳಬೇಕು: ಕೇಂದ್ರ ಸಚಿವ ಸುರೇಶ್ ಗೋಪಿ ರಾಜೀನಾಮೆ ಇಚ್ಛೆ

Date:

ಮಲಯಾಳಂ ಸಿನಿಮಾ ತಾರೆಯಾಗಿ ಗುರುತಿಸಿಕೊಂಡು ರಾಜಕೀಯಕ್ಕೆ ಕಾಲಿಟ್ಟ ಕೇಂದ್ರ ಸಚಿವ ಸುರೇಶ್ ಗೋಪಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ನಟನಾ ಜಗತ್ತಿಗೆ ಮರಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. “ನನ್ನ ಆದಾಯ ಪೂರ್ತಿ ನಿಂತುಹೋಗಿದೆ, ಹೆಚ್ಚು ಸಂಪಾದನೆ ಮಾಡಬೇಕು” ಎಂದು ಹೇಳಿ, ರಾಜಕೀಯದ ಕಟ್ಟುಕಥೆಗಳ ನಡುವೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

ಕನ್ನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಸುರೇಶ್ ಗೋಪಿ, “ನಾನು ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ಹೆಚ್ಚು ದುಡ್ಡು ಗಳಿಸಬೇಕು; ಈಗ ನನ್ನ ಆದಾಯ ಸಂಪೂರ್ಣ ನಿಂತಿದೆ” ಎಂದು ಹೇಳಿದರು. ಅಲ್ಲದೆ, ತಮ್ಮ ಪಕ್ಷದಲ್ಲಿ ತಾವು ಕಿರಿಯ ಸದಸ್ಯರೆಂದು ಹೇಳಿ, ರಾಜ್ಯಸಭಾ ಸಂಸದ ಸಿ. ಸದಾನಂದನ್ ಮಾಸ್ಟರ್ ಅವರನ್ನು ತಮ್ಮ ಸ್ಥಾನಕ್ಕೆ ನೇಮಿಸುವಂತೆ ಸಲಹೆ ನೀಡಿದ್ದಾರೆ. “ನಾನು ಎಂದೂ ಸಚಿವನಾಗಬೇಕೆಂದು ಪ್ರಾರ್ಥಿಸಿರಲಿಲ್ಲ. ಚುನಾವಣೆಗೆ ಒಂದು ದಿನ ಮುಂಚೆಯೇ ಪತ್ರಕರ್ತರಿಗೆ ಹೇಳಿದ್ದೆ, ನಾನು ಸಚಿವನಾಗುವುದಿಲ್ಲ, ಸಿನಿಮಾ ಮುಂದುವರಿಸುತ್ತೇನೆ ಎಂದು” ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗವಾಯಿ ಬೌದ್ಧತತ್ವವೂ ಬಿಜೆಪಿಗರ ಮನುವಾದವೂ

ಸುರೇಶ್ ಗೋಪಿ ಅವರು 2008ರ ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರಿದರು. ಬಿಜೆಪಿಯಿಂದ ಸಂಸದರಾದ ಅವರು ಪ್ರಸ್ತುತ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವರ್ಷದ ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನೂರಿನ ಬಿಜೆಪಿ ಹಿರಿಯ ನಾಯಕ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.

ಸುರೇಶ್ ಗೋಪಿ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಸಿನಿಮಾ ಜಗತ್ತಿನ ಆಕರ್ಷಣೆ ಮತ್ತು ರಾಜಕೀಯದ ಜವಾಬ್ದಾರಿಗಳ ನಡುವಿನ ಸಂಘರ್ಷವನ್ನು ಇದು ಬಿಚ್ಚಿಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ದೆಹಲಿ ಪೊಲೀಸರು ಅನುಮತಿ...

ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತನ ಬಳಕೆ ಮಾಡಿರುವ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಎಫ್‌ಐಆರ್ ದಾಖಲು

ತಮಿಳುನಾಡಿನ ಧರಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಅಪ್ರಾಪ್ತ ಬಾಲಕನನ್ನು...

ಮದನಪಲ್ಲಿ ಸಾರ್ವಜನಿಕ ಸಭೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಮುಜುಗರ; ಭಾಷಣದ ನಡುವೆ ಗದ್ದಲ, ನಾಯ್ಡು ಮಧ್ಯಪ್ರವೇಶ

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಭಾಷಣದ...

ಆಕ್ರೋಶಕ್ಕೆ ಹೆದರಿದ ಆಯೋಗ: ‘ಬಿಟ್ಟುಹೋದ’ ಮತದಾರರ ಸೇರ್ಪಡೆಗೆ ಕ್ರಮ

ದೇಶಾದ್ಯಂತ ನಡೆಸಲಾದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ...