ಕಲಬುರಗಿ | ಸಂಯುಕ್ತ ಕಿಸಾನ್ ಮೋರ್ಚಾದಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಮನವಿ

Date:

ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆ ಎಂ) ಕರೆಯ ಮೇರೆಗೆ ದೀರ್ಘಕಾಲದಿಂದ ಉಳಿದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಗಳ ಮೇಲೆ ಮತ್ತು ಕ್ಯಾಬಿನೆಟ್‌ನ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ದೇಶದೆಲ್ಲೆಡೆ ಸಂಯುಕ್ತ – ಹೋರಾಟ ಸಮಿತಿ ಎಲ್ಲ ಸಂಸದರಿಗೆ ಮನವಿ ಸಲ್ಲಿಸುತ್ತಿದೆ. ಇದರ ಭಾಗವಾಗಿ ರೈತ, ಕಾರ್ಮಿಕ ಮುಖಂಡರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.

- Advertisement -

ಬಳಿಕ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಜುಲೈ 10 ರಂದು ನವದೆಹಲಿಯಲ್ಲಿ ನಡೆದ ಎಸ್‌ಕೆಎಂನ ರಾಷ್ಟ್ರೀಯ ಸಮ್ಮೇಳನವು ಚುನಾವಣಾ ಉತ್ತರ ಪರಿಸ್ಥಿತಿಯನ್ನು ಅವಲೋಕಿಸಿದೆ. ರೈತ ಚಳುವಳಿ ಪ್ರಬಲವಾಗಿರುವಂತಹ ಐದು ರಾಜ್ಯಗಳ 38 ಕ್ಷೇತ್ರಗಳನ್ನು ಆಳುವ ಮೈತ್ರಿಕೂಟ ಕಳೆದುಕೊಂಡಿರುವುದನ್ನು ಒಕ್ಕೂಟ ಸರ್ಕಾರವು ಅರ್ಥಮಾಡಿಕೊಳ್ಳಬೇಕಿದೆ. ಗ್ರಾಮೀಣ ಮತದಾರರನ್ನು ಹೆಚ್ಚಾಗಿ ಹೊಂದಿರುವ 159 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟವು ಸೋತಿದೆ. ಇದಕ್ಕೆ ದೀರ್ಘಕಾಲದ ಕೃಷಿ ವಲಯದ ಬಿಕ್ಕಟ್ಟು ಕಾರಣ. ಭವಿಷ್ಯದಲ್ಲಿ ಕೃಷಿ ನೀತಿಗಳಲ್ಲಿ ರೈತಪರ ಸುಧಾರಣೆಗಳನ್ನು ಮಾಡಬೇಕಿರುವ ಅಗತ್ಯವಿದೆ ಎಂದು ಹೋರಾಟಗಾರರು ಹೇಳಿದರು.

ದೀರ್ಘಕಾಲದಿಂದ ಬಗೆಹರಿಯದೆ ಉಳಿಸಲಾಗಿದ್ದ ರೈತರ ಪ್ರಮುಖ ಆಗ್ರಹಗಳಾದ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಗ್ರಹಣೆಯ ಖಾತರಿ ಸಮಗ್ರ ಸಾಲ ಮನ್ನಾ ವಿದ್ಯುತ್ತಿನ ಖಾಸಗೀಕರಣದ ರದ್ದತಿ ಮುಂತಾದವುಗಳಿಗೆ ಸಂಬಂಧಿಸಿದ ಡಿಸೆಂಬರ್ 9ರಂದು ಮಾಡಲಾದ ಒಡಂಬಡಿಕೆಯ ಉಲ್ಲಂಘನೆಗೆ 2 ಸರ್ಕಾರವೇ ಹೊಣೆ ಎಂದು ಸಭೆ ತೀರ್ಮಾನಿಸಿತ್ತು ಎಂದು ರೈತರು ತಿಳಿಸಿದರು.

ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಂಸದರು ಬೆಂಬಲವಾಗಿ ನಿಲ್ಲಬೇಕು. ದೀರ್ಘಕಾಲದಿಂದ ಉಳಿದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಗಳು ಕ್ಯಾಬಿನೆಟಿನ ಮೇಲೆ ಒತ್ತಡ ತರಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಆಗ್ರಹಿದರು.

ಎಸ್‌ಕೆಎಂ

ಪ್ರತಿಭಟನೆ ಹಾಗೂ ಮನವಿಯ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ಶರಣ ಬಸಪ್ಪ ಮಮಶೆಟ್ಟಿ, ಎಐಕೆಎಸ್‌ನ ಅಧ್ಯಕ್ಷರಾದ ಮೌಲಾ ಮುಲ್ಲಾ, ಕರ್ನಾಟಕ ರಾಜ್ಯ ರೈತ ಸಂಘದ ನಾಗೇಂದ್ರಪ್ಪಾ ಥಂಬೆ, ದಸಂಸ ಸಂಚಾಲಕ ಅರ್ಜುನ್ ಗೊಬ್ಬುರ, ಆರ್‌ಕೆಎಂಎಂಎಸ್‌ನ ಅಧ್ಯಕ್ಷರಾದ ಮಹೇಶ್ ಎಸ್. ಬಿ., ಎಸ್ ಆರ್ ಕೊಲ್ಲೂರೆ, ಎಐಎಡಬ್ಲ್ಯೂಯುನ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಸಿಐಟಿಯು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಸಜ್ಜನ, ಜೆಎಂಎಸ್‌ನ ಜಿಲ್ಲಾ ಕಾರ್ಯದರ್ಶಿ ಡಾ ಪದ್ಮನಿ ಕಿರಣಗಿ, ಎಐಕೆಎಸ್‌ನ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಕರ್ನಾಟಕ ಪ್ರಾಂತ ರೈತ ಸಂಘದ ಸಾಯಬಣ್ಣ ಗುಡುಬಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಯುಕ್ತ ಕಿಸಾನ್ ಮೋರ್ಚಾದ ಹಕ್ಕೊತ್ತಾಯಗಳು

  1. ಎಲ್ಲಾ ಬೆಳೆಗಳ C2+50% ದರದಲ್ಲಿ ಕಾಯ್ದೆಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ಜಾರಿಗೊಳಿಸಬೇಕು.
  2. ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟದ ವಲಸೆಯಿಂದ ರಕ್ಷಿಸಲು ಸಮಗ್ರ ‘ಸಾಲ ಮನ್ನಾ’ ಜಾರಿ ಮಾಡಬೇಕು.
  3. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು.
  4. ರಸಗೊಬ್ಬರ, ಕ್ರಿಮಿನಾಶಕಗಳು, ವಿದ್ಯುತ್, ನೀರಾವರಿಯ ಯಂತ್ರೋಪಕರಣಗಳು, ಬಿಡಿ ಭಾಗಗಳು, ಟ್ರಾಕ್ಟರ್‌ಗಳಂತಹ ಕೃಷಿ ಒಳಸುರಿಗಳ ಮೇಲೆ ಜಿಎಸ್‌ಟಿ ಹಾಕಬಾರದು. ಕೃಷಿ ಒಳಸುರಿಗಳಿಗೆ ಸಬ್ಸಿಡಿ ಪುನಃ ಜಾರಿ ಮಾಡಬೇಕು. ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು ಬೆಳೆಗಾರರು ಮತ್ತು ಗೇಣಿದಾರರಿಗೂ ವಿಸ್ತರಿಸಬೇಕು.
  5. ಎಲ್ಲ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ PMFBY ಯೋಜನೆಯನ್ನು ರದ್ದುಪಡಿಸಬೇಕು.
  6. ಆಹಾರ ಉತ್ಪಾದಕರಾದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು.
  7. ಭೂಸ್ವಾಧೀನ ಪರಿಹಾರ ಮತ್ತು ಪುನರ್ವಸತಿ ಕಾಯ್ದೆ 2013 ನ್ನು ಎರಡು ವರ್ಷಕ್ಕೊಮ್ಮೆ ದರವನ್ನು ಪರಿಷ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಿ ಕಾರ್ಯಗತಗೊಳಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಯೋಜನೆಗಳೆರಡಕ್ಕಾಗಿಯೂ ಕಡಿಮೆ ಸರ್ಕಲ್ ದರದಲ್ಲಿ ಸ್ವಾಧೀನಪಡಿಸಿಕೊಂಡ ಎಲ್ಲಾ ಭೂಮಿಗೂ ಪರಿಹಾರ ನೀಡಬೇಕು. ಪರಿಹಾರ ಮತ್ತು ಪುನರ್ವಸತಿಗಳನ್ನು ನೀಡದೆ ಯಾವುದೇ ಭೂ ಸ್ವಾಧೀನ ಮಾಡಕೂಡದು. ಮುಂಚಿತವಾಗಿ ಪುನರ್ವಸತಿ ಕಲ್ಪಿಸದೆ ಯಾವುದೇ ಸ್ಲಂ ಮತ್ತು ಅಂತಹ ವಸತಿ ಪ್ರದೇಶಗಳನ್ನು ನೆಲಸಮ ಮಾಡಬಾರದು. ‘ಬುಲ್ಡೋಜರ್ ಆಡಳಿತ’ವನ್ನು ಕೊನೆಗೊಳಿಸಬೇಕು. ಪೂರ್ಣ ಪರಿಹಾರ ನೀಡದೆ ಯಾವುದೇ ಕೃಷಿ ಭೂಮಿಯ ಮೇಲೆ ಹೈ ವೋಲ್ವೇಜ್ ವಿದ್ಯುತ್ ಮಾರ್ಗಗಳನ್ನು ಬಲವಂತವಾಗಿ ನಿರ್ಮಿಸಬಾರದು.
  8. ಅರಣ್ಯ ಹಕ್ಕು ಕಾಯ್ದೆ (FRA) ಮತ್ತು ಪಂಚಾಯತ್ (ಶೆಡ್ಯೂಲ್ಡ್ ಏರಿಯಗಳಿಗೆ ವಿಸ್ತರಣೆ) ಕಾಯ್ದೆ (PESA) ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  9. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು, ಮನುಷ್ಯ ಜೀವಹಾನಿಗೆ 1 ಕೋಟಿ ರೂ. ಹಾಗೂ ಬೆಳೆ ಮತ್ತು ಸಾಕುಪ್ರಾಣಿಗಳ ನಷ್ಟಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು.
  10. ಭಾರತವನ್ನೊಂದು ಪೊಲೀಸ್ ಪ್ರಭುತ್ವವನ್ನಾಗಿಸಿ ಭಿನ್ನಾಭಿಪ್ರಾಯವನ್ನು ಮತ್ತು ಜನತೆಯ ಪ್ರತಿಭಟನೆಗಳನ್ನು ಹತ್ತಿಕ್ಕಲೆಂದೇ, ಸಂಸತ್ತಿನಲ್ಲಿ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಒಳಪಡಿಸದೆ ಸಿಪಿಸಿ ಮತ್ತು ಸಿಆರ್ ಪಿಸಿ (ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ) ಕಾಯ್ದೆಗಳನ್ನು ಬದಲಾಯಿಸಿ, ಜನತೆಯ ಮೇಲೆ ಹೇರಿರುವ 3 ಕ್ರಿಮಿನಲ್ ಕಾಯ್ದೆಗಳನ್ನು ರದ್ದು ಮಾಡಬೇಕು.
  11. 736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು/ಟಿಕ್ರಿ ಗಡಿಯಲ್ಲಿ ಸೂಕ್ತವಾದ ಹುತಾತ್ಮ ಸ್ಮಾರಕವನ್ನು ನಿರ್ಮಿಸಬೇಕು. ಲಖಿಂಪುರ್ ಬೀರಿಯ ಹುತಾತ್ಮರನ್ನೂ ಒಳಗೊಂಡಂತೆ ಚಾರಿತ್ರಿಕ ರೈತ ಹೋರಾಟದ ಎಲ್ಲಾ ಹುತಾತ್ಮರ ಕುಟುಂಬಗಳಿಗೂ ಸೂಕ್ತವಾದ ಪರಿಹಾರವನ್ನು ನೀಡಬೇಕು. ರೈತ ಹೋರಾಟದ ಸಂಬಂಧ ಹಾಕಲಾಗಿರುವ ಎಲ್ಲಾ ಕೇಸುಗಳನ್ನೂ ಹಿಂತೆಗೆಯಬೇಕು.
  12. ಕಾರ್ಮಿಕರು, ರೈತರು ಮತ್ತು ಎಲ್ಲಾ ದುಡಿವ ಜನತೆಯ ನಡುವೆ ಸಂಪತ್ತಿನ ತರ್ಕಸಮ್ಮತ ಮತ್ತು ಸಮಾನ ಹಂಚಿಕೆಗೆ ಬೇಕಾದ ಹಣಕಾಸಿನ ಸಂಪನ್ಮೂಲವನ್ನು ಕಂಡುಕೊಳ್ಳುವುದಕ್ಕಾಗಿ ಅತಿ ಶ್ರೀಮಂತರಿಗೆ ತೆರಿಗೆ ಹಾಕಬೇಕು; ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಬೇಕು: ಸಂಪತ್ತಿನ ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆಯನ್ನು ಪುನಃ ಜಾರಿಗೆ ತರಬೇಕು.
  13. ಕೃಷಿಯ ಕಾರ್ಪೊರೇಟೀಕರಣ ಕೂಡದು. ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್ಸಿಗಳಿಗೆ ಪ್ರವೇಶ ನೀಡಕೂಡದು. ಮುಕ್ತ ವ್ಯಾಪಾರ ಒಡಂಬಡಿಕೆಗಳನ್ನು (ಫ್ರೀ ಟ್ರೇಡ್ ಅಗ್ರೀಮೆಂಟ್ FTA) ಮಾಡಿಕೊಳ್ಳಬಾರದು. ಭಾರತವು ಕೃಷಿಗೆ ಸಂಬಂಧಿಸಿದ WTO ಒಪ್ಪಂದದಿಂದ ಹೊರಬರಬೇಕು.
  14. ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ, ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ‘ಬಲಿಷ್ಠ ರಾಜ್ಯಗಳು: ಬಲಿಷ್ಠ ಭಾರತ ಒಕ್ಕೂಟ’ ಎಂಬ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಪುನ‌ರ್ ಸ್ಥಾಪಿಸಬೇಕು.
  15. ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಯನ್ನು ಎತ್ತಿಹಿಡಿಯಬೇಕು ಹಾಗೂ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ದುಗೊಳಿಸಬೇಕು.
  16. ಜನತೆಯ ಜೀವನೋಪಾಯ ಮತ್ತು ಪ್ರಕೃತಿಯ ರಕ್ಷಣೆಗಾಗಿ ಭೂಮಿ, ನೀರು, ಆರಣ್ಯಗಳು ಹಾಗೂ ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ಕಾರ್ಪೊರೇಟ್ ಹತೋಟಿ ಮತ್ತು ಸರಕೀಕರಣವನ್ನು ಕೊನೆಗೊಳಿಸಬೇಕು. ಕೃಷಿಯ ರಕ್ಷಣೆ, ಮಳೆ ನೀರಿನ ವೈಜ್ಞಾನಿಕ ಸಂರಕ್ಷಣೆ-ಬಳಕೆಯ (ಮಳೆನೀರು ಕೊಯ್ದು) ಅಭಿವೃದ್ಧಿ, ಜಲಾನಯನ ಪ್ರದೇಶಗಳ ಆಯೋಜನೆ (watershed planning) ಹಾಗೂ ಜಲಮೂಲಗಳ ರಕ್ಷಣೆ ಇವುಗಳಿಗಾಗಿ ಹವಾಮಾನ ಬದಲಾವಣೆಯ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಬೇಕು
  17. ಮನರೇಗಾ ಕೂಲಿಯನ್ನು 600 ರೂಪಾಯಿಗಳಿಗೆ ಹೆಚ್ಚಿಸಿ ಯೋಚನೆಯನ್ನು ಜಲಾನಯನ ಅಭಿವೃದ್ಧಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳಿಗೆ ವಿಸ್ತರಿಸಬೇಕು.
  18. ನಾಲ್ಕು ಕಾರ್ಮಿಕ ಬಿಲ್ ಗಳನ್ನು ರದ್ದುಗೊಳಿಸಬೇಕು ಮತ್ತು ಸಾರ್ವಜನಿಕ ವಲಯದ ಖಾಸಗಿಕರಣ ಮತ್ತು ಕಾಂಟಾಕ್ಟ್ ಪದ್ಧತಿಯನ್ನು ನಿಲ್ಲಿಸಬೇಕು.
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...