ಕಲಬುರಗಿ | ಹರಿಯುವ ನದಿಯಲ್ಲೇ ಶವ ಸಾಗಿಸಿ ಅಂತ್ಯಕ್ರಿಯೆ

Date:

ಹರಿಯುತ್ತಿರುವ ಕಮಲಾವತಿ ನದಿ ನೀರಿನಲ್ಲಿಯೇ ಟ್ರ್ಯಾಕ್ಟರ್ ಮೂಲಕ ಶವ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಸೇಡಂ ಚೋಟಿಗಿರಣಿ ಸಮೀಪದ ರೈಲ್ವೆ ಹಳಿ ಬಳಿಯ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ಬುಧವಾರ ನಡೆದಿದೆ.

- Advertisement -

ನಗರದ ಬಸವನಗರ ನಿವಾಸಿ ಹಾಗೂ ಪುರಸಭೆಯ ಮಾಜಿ ಸದಸ್ಯ ರಾಜು ಕಾಳಗಿಕರ್ (42) ಮೃತಪಟ್ಟಿದ್ದು, ಅವರ ಶವವನ್ನು ನದಿಯ ಆಚೆ ಇರುವ ರುದ್ರಭೂಮಿಗೆ ಕೊಂಡೊಯ್ಯಲು ಕುಟುಂಬಸ್ಥರು ಹಾಗೂ ಸಮಾಜದ ಮುಖಂಡರು ಪರದಾಡಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ನದಿಯಲ್ಲಿ ನೀರು ಹರಿಯುತ್ತಿದ್ದರೂ ಶವ ಸಾಗಿಸಲು ಬೇರೆ ಮಾರ್ಗದ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೂಲಕವೇ ನದಿ ದಾಟಬೇಕಾಯಿತು. ಟ್ರ್ಯಾಕ್ಟರ್‌ನಲ್ಲಿ ಶವ ಸಾಗಿಸುವ ಸಂದರ್ಭದಲ್ಲಿ ಹರಿಯುತ್ತಿದ್ದ ನೀರು ಆತಂಕ ಮೂಡಿಸಿತು.

ಈ ವೇಳೆ ಧೈರ್ಯದಿಂದ ನದಿಗೆ ಇಳಿದ ಯುವಕರು ಪರಸ್ಪರ ಕೈ ಹಿಡಿದು ಸರಪಳಿ ನಿರ್ಮಿಸಿಕೊಂಡು ಟ್ರ್ಯಾಕ್ಟರ್ ಸುರಕ್ಷಿತವಾಗಿ ನದಿ ದಾಟಲು ನೆರವಾದರು. ಬಳಿಕ ನದಿಯ ಆಚೆಯಿರುವ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನು ಓದಿದ್ದೀರಾ? ಯಾದಗಿರಿ| ದಲಿತರ ಮೇಲೆ ಸರಣಿ ಹಲ್ಲೆ, ಸಾಮಾಜಿಕ ಬಹಿಷ್ಕಾರ ಆರೋಪ: ಕಠಿಣ ಕ್ರಮಕ್ಕೆ ದಸಂಸ ಆಗ್ರಹ

ಶವ ಸಾಗಿಸಲು ನದಿಯನ್ನೇ ದಾಟಬೇಕಾದ ಅನಿವಾರ್ಯತೆ ಎದುರಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ರುದ್ರಭೂಮಿಗೆ ಸೂಕ್ತ ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು: ಎಂ.ಎಂ.ಮೈದೂರ

"ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೈಹಿಕ ಹಾಗೂ ಮಾನಸಿಕ...

ಹಾವೇರಿ | ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ವೇಳಾಪಟ್ಟಿ ಪ್ರಕಟ

"ಭಾರತ ಚುನಾವಣಾ ಆಯೋಗ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ವೇಳಾಪಟ್ಟಿ...

ಹುಬ್ಬಳ್ಳಿ | ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವದ ಬುನಾದಿಗೆ ಧಕ್ಕೆ: ನೂರ್ ಶ್ರೀಧರ್ ಆರೋಪ

"ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವದ ಬುನಾದಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು...