ಕಮಲಾಪುರ ತಾಲೂಕಿನ ಕಲಮೂಡ ಸಮೀಪ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶಿಕ್ಷಕಿ ಜ್ಯೋತಿ ಕಪಾಳೆ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಚಿಂಚೋಳಿ ತಾಲೂಕಿನ ಭುಂಯ್ಯಾರ ಗ್ರಾಮದ ಅಮರ ಮಲ್ಲಪ್ಪ ಕುಡಳ್ಳಿ (27) ಎಂದು ಗುರುತಿಸಲಾಗಿದೆ. ಬಾಕಿ ಹಣ ನೀಡುವ ವಿಚಾರವಾಗಿ ಉಂಟಾದ ವೈಷಮ್ಯವೇ ಹತ್ಯೆಗೆ ಕಾರಣವಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಎಪ್ರಿಲ್ 4ರಂದು ಬೆಳಿಗ್ಗೆ ಕಲಮೂಡ ಬಳಿ ಶಿಕ್ಷಕಿ ಜ್ಯೋತಿ ಕಪಾಳೆ ಮೃತದೇಹ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತರು ಕಲಬುರಗಿ ನಗರದ ಎಸ್ ಬಿ ಕಾಲೇಜು ಎದುರಿನ ಆನಂದನಗರ ನಿವಾಸಿಯಾಗಿದ್ದು, ಭಾಲ್ಕಿ ತಾಲೂಕಿನ ವಾಂಜರಖೇಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ಇದನ್ನು ಓದಿದ್ದೀರಾ? ಹೈಕೋರ್ಟ್ ಆದೇಶ: ಆರ್ ಡಿ ಪಾಟೀಲ್ ಮರು ಕಲಬುರಗಿ ಜೈಲಿಗೆ ಸ್ಥಳಾಂತರ
ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





